Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

RCB ಬಡ ತಂಡ ಇನ್ನಷ್ಟು ದಿನ ಅಂಕ ಪಟ್ಟಿಯಲ್ಲಿ ಮೇಲಿರಲಿ: ವಿರೇಂದ್ರ ಸೆಹ್ವಾಗ್‌ ಗೇಲಿಗೆ ಭಾರೀ ಆಕ್ರೋಶ

ಇಂಡಿಯನ್ ಪ್ರೀಮಿಯರ್ ಲೀಗ್ ಆರಂಭವಾಗಿದೆ. ಈ ಲೀಗ್‌ನಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ ಆರಂಭದಲ್ಲಿ ಅಮೋಘ ಪ್ರದರ್ಶನ ನೀಡುತ್ತಿದೆ. ಈ ವೇಳೆ ಆರ್‌ಸಿಬಿ ಆಡಿದ ಎರಡೂ ಪಂದ್ಯಗಳನ್ನು ಗೆದ್ದು ಅಂಕ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ. ಕೆಕೆಆರ್‌ ವಿರುದ್ಧದ ಉದ್ಘಾಟನಾ ಪಂದ್ಯದಲ್ಲಿ ಗೆಲುವು ದಾಖಲಿಸಿದ್ದ ಆರ್‌ಸಿಬಿ, ಚೆನ್ನೈನಲ್ಲೂ 17 ವರ್ಷಗಳ ಬಳಿಕ ಅಮೋಘ ಜಯ ದಾಖಲಿಸಿದೆ. ಈ ಗೆಲುವಿನ ಪರಿಣಾಮ ಸದ್ಯ ಆರ್‌ಸಿಬಿ ಅಂಕ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ.

ಆರ್‌ಸಿಬಿ ಈ ಪ್ರದರ್ಶನ ಫ್ಯಾನ್ಸ್‌ಗೆ ಉತ್ಸಾಹ ತುಂಬಿದೆ. ಆಡಿರುವ ಎರಡೂ ಪಂದ್ಯಗಳನ್ನು ಗೆದ್ದ ಆರ್‌ಸಿಬಿ ಅಂಕ ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿದೆ. ಇದನ್ನು ಕಂಡು ಹಲವರು ಖುಷ್ ಆಗಿದ್ದಾರೆ. ಇನ್ನು ಮಾಜಿ ಕ್ರಿಕೆಟ್‌ ಆಟಗಾರ ವೀರೇಂದ್ರ ಸೆಹ್ವಾಗ್ ಮಾತ್ರ ಇದಕ್ಕೆ ವ್ಯಂಗ್ಯ ಮಾಡಿದ್ದಾರೆ. ಆರ್‌ಸಿಬಿ ಅಗ್ರ ಸ್ಥಾನದಲ್ಲಿರುವುದು ಸೆಹ್ವಾಗ್‌ ಖುಷಿ ನೀಡಿದಂತೆ ಕಾಣುತ್ತಿಲ್ಲ. ಇತ್ತೀಚಿಗೆ ನಡೆದ ಕಾರ್ಯಕ್ರಮವೊಂದರಲ್ಲಿ ಸೆಹ್ವಾಗ್‌ ಆರ್‌ಸಿಬಿಯನ್ನು ಕೆಣಕಿದ್ದು ಕಂಡು ಬಂದಿದೆ. ಇದರ ವಿಡಿಯೋ ಸಹ ಸದ್ಯ ಸಾಮಾಜಿಕ ತಾಣದಲ್ಲಿ ವೈರಲ್ ಆಗುತ್ತಿದೆ.

Virender Sehwag Mocks RCB s Top Spot in IPL 2025 Fans React Strongly

ಕಳೆದ 17 ಆವೃತ್ತಿಗಳಲ್ಲಿ ಆರ್‌ಸಿಬಿ ಒಂದೇ ಒಂದು ಐಪಿಎಲ್‌ ಟ್ರೋಫಿ ಗೆದ್ದಿಲ್ಲ. ಈ ಪ್ರಶಸ್ತಿಯ ಬರವನ್ನು ಕೊನೆಗಳಿಸುವ ನಿಟ್ಟಿನಲ್ಲಿ ರಜತ್‌ ಪಟಿದಾರ್ ಪಡೆ ಸಂಕಲ್ಪ ಮಾಡಿದಂತೆ ಕಾಣುತ್ತಿದೆ. ಆದರೆ ಸೆಹ್ವಾಗ್ ಹೇಳಿಕೆ ನಿಜಕ್ಕೂ ಅಭಿಮಾನಿಗಳಿಗೆ ಬೇಸರ ತರಿಸಿದೆ. ಕ್ರಿಕ್‌ ಬಜ್‌ ಜೊತೆಗೆ ಮಾತನಾಡಿರುವ ಸೆಹ್ವಾಗ್‌ ದೊಡ್ಡ ಹೇಳಿಕೆಯನ್ನು ನೀಡಿದ್ದಾರೆ.

ಸೆಹ್ವಾಗ್‌ ಹೇಳಿದ್ದೇನು?

ಸಂದರ್ಶನದಲ್ಲಿ ಮಾತನಾಡಿದ ಸೆಹ್ವಾಗ್‌ "ಗರಿಬರು (ಬಡವರು) ಮೇಲ್ಬಾಗದಲ್ಲಿಯೇ ಇರಲಿ. ಈ ಜೋಶ್‌ನಲ್ಲಿ ಫೋಟೋ ತೆಗೆಯಲಿ. ಗರಿಬರು ಎಷ್ಟು ಹೊತ್ತು ಮೆಲ್ಬಾಗದಲ್ಲಿ ಇರುತ್ತಾರೋ ಯಾರಿಗೆ ಗೊತ್ತು" ಎಂದು ವ್ಯಂಗ್ಯ ಮಾಡಿದ್ದಾರೆ. ಹೀಗೆ ಮುಂದುವರೆದ ಸೆಹ್ವಾಗ್‌ ನಾನು ಹಣದಲ್ಲಿ ಬಡವರು ಎಂದು ಹೇಳುತಲೇ ಇಲ್ಲ. ಅವರೆಲ್ಲೂ ಹಣವಂತರು. ಫ್ರಾಂಚೈಸಿ ಪ್ರತಿ ಋತುವಿನಲ್ಲಿ 400 ರಿಂದ 500 ಕೋಟಿ ಗಳಿಸುತ್ತಿದೆ. ನಾನು ಆ ಬಗ್ಗೆ ಮಾತನಾಡುವುದೇ ಇಲ್ಲ. ಆ ತಂಡ ಒಂದೇ ಒಂದು ಟ್ರೋಫಿ ಗೆಲ್ಲದೇ ಇರುವುದಕ್ಕೆ ನಾನು ಬಡವರು ಎಂದು ಕರೆಯುತ್ತಿದ್ದೇನೆ" ಎಂದು ಸೆಹ್ವಾಗ್‌ ಸ್ಪಷ್ಟನೆ ನೀಡಿದ್ದಾರೆ.

ವೀರೇಂದ್ರ ಸೆಹ್ವಾಗ್‌ ಅವರ ಹೇಳಿಕೆ ವೈರಲ್ ಆಗುತ್ತಿದ್ದಂತೆ ಸಾಮಾಜಿಕ ತಾಣದಲ್ಲಿ ಜನ ತರಹೇವಾರಿ ಕಮೆಂಟ್‌ಗಳನ್ನು ಮಾಡುತ್ತಿದ್ದಾರೆ. ಅಲ್ಲದೆ ಇದೇ ವಿಷಯಕ್ಕೆ ಆರ್‌ಸಿಬಿ ಅಭಿಮಾನಿಗಳು ಅವರನ್ನು ಟ್ರೋಲ್ ಸಹ ಮಾಡಿದ್ದಾರೆ. ವೀರೇಂದ್ರ ಸೆಹ್ವಾಗ್‌ ನಿಮ್ಮ ಬಳಿ ಎಷ್ಟು ಐಪಿಎಲ್‌ ಟ್ರೋಫಿಗಳು ಇವೆ ಎಂಬುದಾಗಿ ಅಭಿಮಾನಿಗಳು ಕೇಳಿದ್ದಾರೆ.

ಆರ್‌ಸಿಬಿ 3 ಬಾರಿ ಫೈನಲ್‌

ಆರ್‌ಸಿಬಿ ಐಪಿಎಲ್‌ನಲ್ಲಿ ಒಂದೂ ಬಾರಿ ಟ್ರೋಫಿ ಗೆದ್ದಿಲ್ಲ. ಆದರೆ 3 ಬಾರಿ ಫೈನಲ್‌ಗೆ ಪ್ರವೇಶ ಪಡೆದಿದೆ. ಆದರೆ ಈ ಬಾರಿ ಆರ್‌ಸಿಬಿ ಪ್ರಶಸ್ತಿಯನ್ನು ಗೆಲ್ಲುವ ಪ್ರಬಲ ಸ್ಪರ್ಧಿ ಎಂದು ಪರಿಗಣಿಸಲಾಗುತ್ತಿದೆ. ಆರ್‌ಸಿಬಿ ಈ ಬಾರಿ ಸಂಘಟಿತ ಆಟದ ಮೇಲೆ ಒತ್ತು ನೀಡಿದ್ದು ಟ್ರೋಫಿ ಗೆಲ್ಲುವ ನೆಚ್ಚಿನ ತಂಡಗಳಲ್ಲಿ ಒಂದಾಗಿದೆ.

Story first published: Tuesday, April 1, 2025, 13:52 [IST]
Other articles published on Apr 1, 2025
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+