ಭಾರತ ಕ್ರಿಕೆಟ್ ತಂಡದ ಶ್ರೇಷ್ಠ ಆಟಗಾರ ವೀರೇಂದ್ರ ಸೆಹ್ವಾಗ್ ಅವರು ತಮ್ಮ ಕನಸಿನ ಏಕದಿನ ತಂಡದ ಆಡುವ 11ರ ಬಳಗವನ್ನು ನಿರ್ಮಿಸುವಲ್ಲಿ ನಿರತರಾಗಿದ್ದಾರೆ. ಈ ದಾರಿಯಲ್ಲಿ ಅವರು ಆಯ್ಕೆ ಮಾಡಿದ ಮೊದಲ ಐದು ಆಟಗಾರರ ಹೆಸರನ್ನು ಬಹಿರಂಗಪಡಿಸಿದ್ದಾರೆ.
ವೀರೇಂದ್ರ ಸೆಹ್ವಾಗ್ ಇತ್ತೀಚಿನ ದಿನಗಳಲ್ಲಿ ಅತ್ಯುತ್ತಮ ಏಕದಿನ ಬ್ಯಾಟರ್‌ಗಳಲ್ಲಿ ಒಬ್ಬರಾಗಿದ್ದರು. ಸ್ಫೋಟಕ ಬಲಗೈ ಬ್ಯಾಟ್ಸ್‌ಮನ್ ಅಗ್ರ ಕ್ರಮಾಂಕದಲ್ಲಿ ತಮ್ಮ ವಿಶಿಷ್ಟ ಆಕ್ರಮಣಕಾರಿ ಶೈಲಿಯೊಂದಿಗೆ ಏಕದಿನ ಕ್ರಿಕೆಟ್‌ನಲ್ಲಿ ಭಾರತ ತಂಡದ ಪರ 251 ಪಂದ್ಯಗಳಲ್ಲಿ 8273 ರನ್ ಮತ್ತು 15 ಶತಕಗಳನ್ನು ಗಳಿಸಿದ್ದಾರೆ.

ಭಾರತದ ಮಾಜಿ ಆರಂಭಿಕ ವೀರೇಂದ್ರ ಸೆಹ್ವಾಗ್ ಅವರು 2011ರಲ್ಲಿ ಐಸಿಸಿ ಏಕದಿನ ಕ್ರಿಕೆಟ್ ವಿಶ್ವಕಪ್ ಪ್ರಶಸ್ತಿ ಗೆಲ್ಲಲು ತಮ್ಮ ತಂಡಕ್ಕೆ ಸಹಾಯ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಬಾಂಗ್ಲಾದೇಶ ವಿರುದ್ಧ 175 ರನ್ ಸೇರಿದಂತೆ ಎಂಟು ಇನ್ನಿಂಗ್ಸ್‌ಗಳಲ್ಲಿ 380 ರನ್ ಗಳಿಸಿದರು. ಈ ವರ್ಷದ ಏಕದಿನ ಕ್ರಿಕೆಟ್ ವಿಶ್ವಕಪ್ ಪಂದ್ಯಾವಳಿಗೆ ಕೇವಲ ಮೂರು ವಾರಗಳು ಬಾಕಿ ಉಳಿದಿವೆ.
ತಮ್ಮ ಕನಸಿನ ಏಕದಿನ ತಂಡದ ಆಡುವ 11ರ ಬಳಗದಲ್ಲಿ ಮೊದಲ ಐದು ಆಟಗಾರರನ್ನು ಆಯ್ಕೆ ಮಾಡಲು ಕೇಳಿದಾಗ ವೀರೇಂದ್ರ ಸೆಹ್ವಾಗ್ ತನ್ನ ಇಬ್ಬರು ಮಾಜಿ ಸಹ ಆಟಗಾರರನ್ನು ಆಯ್ಕೆ ಮಾಡಲು ಹಿಂಜರಿಯಲಿಲ್ಲ. ಇದರಲ್ಲಿ ಭಾರತದ ಐವರು ಆಟಗಾರನನ್ನು ತಮ್ಮ ಪಟ್ಟಿಯಲ್ಲಿ ಸೇರಿಸಿಕೊಂಡಿದ್ದಾರೆ.

1) ರೋಹಿತ್ ಶರ್ಮಾ (ಭಾರತ): ಭಾರತ ತಂಡದ ನಾಯಕ ರೋಹಿತ್ ಶರ್ಮಾ ಅವರು ಕಳೆದ 2019ರ ವಿಶ್ವಕಪ್ ಆವೃತ್ತಿಯಲ್ಲಿ ಐದು ಶತಕಗಳೊಂದಿಗೆ 648 ರನ್ ಗಳಿಸಿದ್ದರು. ಅಲ್ಲದೆ ಏಕದಿನ ಕ್ರಿಕೆಟ್‌ನಲ್ಲಿ ಮೂರು ದ್ವಿಶತಕಗಳೊಂದಿಗೆ 9,922 ರನ್‌ಗಳು ಮತ್ತು ಗರಿಷ್ಠ ಏಕದಿನ ಸ್ಕೋರ್ ಗಳಿಸಿದ್ದರಿಂದ ರೋಹಿತ್ ಶರ್ಮಾ ಅವರನ್ನು ವೀರೇಂದ್ರ ಸೆಹ್ವಾಗ್ ಆಯ್ಕೆ ಮಾಡಲು ಕಾರಣವಾಗಿದೆ.
2) ವಿರಾಟ್ ಕೊಹ್ಲಿ (ಭಾರತ): ಏಕದಿನ ಕ್ರಿಕೆಟ್‌ನಲ್ಲಿ ವಿರಾಟ್ ಕೊಹ್ಲಿಯ ದಾಖಲೆಯೇ ಅವರ ಆಟದ ಬಗ್ಗೆ ಹೇಳುತ್ತದೆ. ಸಾರ್ವಕಾಲಿಕ ಶ್ರೇಷ್ಠ ಬಲಗೈ ಆಟಗಾರ ತಮ್ಮ ವೃತ್ತಿಜೀವನದ ಉದ್ದಕ್ಕೂ ಏಕದಿನ ಸ್ವರೂಪದಲ್ಲಿ 12,902 ರನ್ ಮತ್ತು 46 ಶತಕಗಳನ್ನು ಬಾರಿಸಿದ್ದಾರೆ. ಹೀಗಾಗಿ ವೀರೇಂದ್ರ ಸೆಹ್ವಾಗ್ ಅವರು ವಿರಾಟ್ ಕೊಹ್ಲಿಯನ್ನು ತಮ್ಮ ಕನಸಿನಲ್ಲಿ ಸೇರ್ಪಡೆ ಮಾಡಿದ್ದಾರೆ.
3) ಡೇವಿಡ್ ವಾರ್ನರ್ (ಆಸ್ಟ್ರೇಲಿಯಾ): ಭಾರತಕ್ಕಾಗಿ ವೀರೇಂದ್ರ ಸೆಹ್ವಾಗ್ ಹೇಗೆ ಬ್ಯಾಟಿಂಗ್ ಮಾಡುತ್ತಿದ್ದರೋ ಅದೇ ಶೈಲಿಯಲ್ಲಿ ಬ್ಯಾಟಿಂಗ್ ಮಾಡುವ ಡೇವಿಡ್ ವಾರ್ನರ್ ಆಸ್ಟ್ರೇಲಿಯಾ ತಂಡದ ಆರಂಭಿಕರಾಗಿದ್ದಾರೆ. 143 ಏಕದಿನ ಕ್ರಿಕೆಟ್‌ನಲ್ಲಿ 44 ಸರಾಸರಿಯಲ್ಲಿ 19 ಶತಕಗಳ ಮೂಲಕ 6,030 ರನ್ ಗಳಿಸಿದ್ದಾರೆ.

4) ಗ್ಲೆನ್ ಫಿಲಿಪ್ಸ್ (ನ್ಯೂಜಿಲೆಂಡ್): ಇನ್ನು ನ್ಯೂಜಿಲೆಂಡ್ ಎಡಗೈ ಸ್ಫೋಟಕ ಬ್ಯಾಟರ್ ಆಗಿರುವ ಗ್ಲೆನ್ ಫಿಲಿಪ್ಸ್ ಅವರನ್ನು ವೀರೇಂದ್ರ ಸೆಹ್ವಾಗ್ ತಮ್ಮ ಕನಸಿನ ಏಕದಿನ ತಂಡಕ್ಕೆ ಆಯ್ಕೆ ಮಾಡಿಕೊಂಡರು.
ಗ್ಲೆನ್ ಫಿಲಿಪ್ಸ್ ಇನ್ನೂ 50 ಓವರ್‌ಗಳ ವಿಶ್ವಕಪ್‌ನಲ್ಲಿ ಆಡಿಲ್ಲ. ಆದರೆ, ನ್ಯೂಜಿಲೆಂಡ್ ತಂಡದ ಪರ ಕೇವಲ 16 ಏಕದಿನ ಪಂದ್ಯಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇದರಲ್ಲಿ ಒಂದು ಅರ್ಧಶತಕದೊಂದಿಗೆ 351 ರನ್ ಗಳಿಸಿದ್ದಾರೆ. ಕಳೆದ ವರ್ಷ ಆಸ್ಟ್ರೇಲಿಯಾದಲ್ಲಿ ನಡೆದ ಐಸಿಸಿ ಟಿ20 ವಿಶ್ವಕಪ್‌ನಲ್ಲಿ ಶ್ರೀಲಂಕಾ ವಿರುದ್ಧ ಗ್ಲೆನ್ ಫಿಲಿಪ್ಸ್ ಅದ್ಭುತ ಶತಕ ಬಾರಿಸಿದರು. ಇದು ವೀರೇಂದ್ರ ಸೆಹ್ವಾಗ್ ಅವರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ.
5) ಜಸ್ಪ್ರೀತ್ ಬುಮ್ರಾ (ಭಾರತ): ವೀರೇಂದ್ರ ಸೆಹ್ವಾಗ್ ಅವರು ಭಾರತದ ಮಾರಕ ವೇಗಿ ಜಸ್ಪ್ರೀತ್ ಬುಮ್ರಾ ಅವರನ್ನು ಆಯ್ಕೆ ಮಾಡುವಲ್ಲಿ ಹಿಂಜರಿಯಲಿಲ್ಲ. ಇತ್ತೀಚೆಗಷ್ಟೇ ಗಾಯದಿಂದ ಚೇತರಿಸಿಕೊಂಡು ಹಿಂದಿರುಗಿದ ಜಸ್ಪ್ರೀತ್ ಬುಮ್ರಾ ಅವರನ್ನು ಮೊದಲ ಐವರು ಆಟಗಾರರಲ್ಲಿ ಸೇರಿಸಿಕೊಂಡರು.
ಜಸ್ಪ್ರೀತ್ ಬುಮ್ರಾ 73 ಏಕದಿನ ಪಂದ್ಯಗಳಲ್ಲಿ 121 ವಿಕೆಟ್‌ಗಳನ್ನು ಕಬಳಿಸಿದ್ದಾರೆ ಮತ್ತು 2019ರ ವಿಶ್ವಕಪ್‌ನಲ್ಲಿ ಭಾರತದ ಅತ್ಯುತ್ತಮ ಪ್ರದರ್ಶನಕಾರರಲ್ಲಿ ಒಬ್ಬರಾಗಿದ್ದರು, ಆಡಿದ ಒಂಬತ್ತು ಪಂದ್ಯಗಳಲ್ಲಿ 18 ವಿಕೆಟ್‌ಗಳನ್ನು ಪಡೆದಿದ್ದರು.