ಶ್ರೀಲಂಕಾ ವಿರುದ್ಧ ಸೋಲು: ಈ ಆಟಗಾರರ ಕುರಿತು ಅಸಮಾಧಾನ ವ್ಯಕ್ತಪಡಿಸಿದ ವಿರೇಂದ್ರ ಸೆಹ್ವಾಗ್

ಭಾರತ ಮತ್ತು ಶ್ರೀಲಂಕಾ ನಡುವಿನ 3 ಪಂದ್ಯಗಳ ಏಕದಿನ ಸರಣಿ ಮತ್ತು 3 ಪಂದ್ಯಗಳ ಟ್ವೆಂಟಿ ಸರಣಿ ಮುಗಿದಿದ್ದು ಏಕದಿನ ಸರಣಿಯನ್ನು ಟೀಮ್ ಇಂಡಿಯಾ 2-1 ಅಂತರದಲ್ಲಿ ಜಯ ಗಳಿಸಿದರೆ, ಟಿ ಟ್ವೆಂಟಿ ಸರಣಿಯಲ್ಲಿ ಶ್ರೀಲಂಕಾ ತಂಡ 2-1 ಅಂತರದಿಂದ ಜಯ ಸಾಧಿಸಿತು.
ಏಕದಿನ ಸರಣಿಯಲ್ಲಿ ಅತ್ಯದ್ಭುತ ಪ್ರದರ್ಶನವನ್ನು ನೀಡುವುದರ ಮೂಲಕ ಶ್ರೀಲಂಕಾ ತಂಡವನ್ನು ಅವರ ನೆಲದಲ್ಲಿಯೇ ಮಣಿಸಿ ಸರಣಿಯನ್ನು ಕೈವಶ ಮಾಡಿಕೊಂಡಿದ್ದ ಟೀಮ್ ಇಂಡಿಯಾ ಟಿ ಟ್ವೆಂಟಿ ಸರಣಿಯ ಮೊದಲನೇ ಪಂದ್ಯದಲ್ಲಿಯೂ ಸಹ ಉತ್ತಮ ಪ್ರದರ್ಶನ ನೀಡುವುದರ ಮೂಲಕ 38 ರನ್‌ಗಳ ಜಯವನ್ನು ಸಾಧಿಸಿತ್ತು. ಆದರೆ ಲಂಕಾ ವಿರುದ್ಧದ ಎರಡನೇ ಮತ್ತು ಮೂರನೇ ಟಿ ಟ್ವೆಂಟಿ ಪಂದ್ಯದಲ್ಲಿ ಭಾರತ ಮುಗ್ಗರಿಸಿತು. ಎರಡನೇ ಟಿ ಟ್ವೆಂಟಿ ಪಂದ್ಯದಲ್ಲಿ ಭಾರತ ತಂಡದ ವಿರುದ್ಧ ಶ್ರೀಲಂಕಾ 4 ವಿಕೆಟ್‍ಗಳ ಜಯ ಸಾಧಿಸಿತು. ಮತ್ತು ಮೂರನೇ ಟಿ ಟ್ವೆಂಟಿ ಪಂದ್ಯದಲ್ಲಿ ಶ್ರೀಲಂಕಾ 7 ವಿಕೆಟ್‍ಗಳ ಗೆಲುವನ್ನು ಸಾಧಿಸುವುದರ ಮೂಲಕ ಭಾರತದ ವಿರುದ್ಧ 2-1 ಅಂತರದಿಂದ ಟಿ ಟ್ವೆಂಟಿ ಸರಣಿಯನ್ನು ಗೆದ್ದು ಬೀಗಿದೆ.
ಮೊದಲನೆ ಟಿ ಟ್ವೆಂಟಿ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿದ ಟೀಮ್ ಇಂಡಿಯಾ ಎರಡನೇ ಮತ್ತು ಮೂರನೇ ಟಿ ಟ್ವೆಂಟಿ ಪಂದ್ಯದಲ್ಲಿ ಕಳಪೆ ಪ್ರದರ್ಶನ ನೀಡುವುದರ ಮೂಲಕ ಶ್ರೀಲಂಕಾ ತಂಡಕ್ಕೆ ಶರಣಾಯಿತು. ಎರಡನೇ ಟಿ ಟ್ವೆಂಟಿ ಪಂದ್ಯ ಆರಂಭವಾಗುವ ಮುನ್ನ ಕೃನಾಲ್ ಪಾಂಡ್ಯಗೆ ಕೊರೋನಾವೈರಸ್ ಪಾಸಿಟಿವ್ ಬಂದ ಕಾರಣ ಆತನ ಸಂಪರ್ಕದಲ್ಲಿದ್ದ 8 ಆಟಗಾರರನ್ನು ತಂಡದಿಂದ ಹೊರಗುಳಿಸಬೇಕಾದ ಪರಿಸ್ಥಿತಿ ಎದುರಾಯಿತು. ಹೀಗಾಗಿ ಯುವ ಆಟಗಾರರ ಭಾರತ ತಂಡವನ್ನು ಎರಡನೇ ಮತ್ತು ಮೂರನೇ ಟಿ ಟ್ವೆಂಟಿಯಲ್ಲಿ ಆಡಿಸಲಾಯಿತು. ಹೀಗೆ ಯುವ ಆಟಗಾರರನ್ನು ಲಂಕಾ ವಿರುದ್ಧದ ಕೊನೆಯ 2 ಟಿ ಟ್ವೆಂಟಿ ಪಂದ್ಯಗಳಲ್ಲಿ ಆಡಿಸಿದ ಕಾರಣದಿಂದಲೇ ಭಾರತ ತಂಡ ಸೋಲುಂಡಿತು ಎಂಬ ಚರ್ಚೆಗಳು ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಮಟ್ಟಿಗೆ ನಡೆಯುತ್ತಿವೆ.
ಈ ಸೋಲಿನ ಕುರಿತು ಮಾತನಾಡಿರುವ ಭಾರತದ ಮಾಜಿ ಕ್ರಿಕೆಟಿಗ ವಿರೇಂದ್ರ ಸೆಹ್ವಾಗ್ ಭಾರತೀಯ ಬ್ಯಾಟ್ಸ್‌ಮನ್‌ಗಳ ಪ್ರದರ್ಶನದ ಬಗ್ಗೆ ತೀರಾ ಬೇಸರ ವ್ಯಕ್ತಪಡಿಸಿದ್ದಾರೆ. ಭಾರತದ ಬ್ಯಾಟ್ಸ್‌ಮನ್‌ಗಳು ನೀಡಿದ ಕಳಪೆ ಪ್ರದರ್ಶನದಿಂದ ಟಿ ಟ್ವೆಂಟಿ ಸರಣಿಯಲ್ಲಿ ಭಾರತ ಸೋಲನ್ನುಂಡಿತು ಎಂದು ವಿರೇಂದ್ರ ಸೆಹ್ವಾಗ್ ಹೇಳಿದ್ದಾರೆ. ಲಂಕಾ ವಿರುದ್ಧದ ಟಿ ಟ್ವೆಂಟಿ ಸರಣಿ ಸೋಲಿನ ಕುರಿತು ಮಾತನಾಡಿರುವ ವಿರೇಂದ್ರ ಸೆಹ್ವಾಗ್ ಈ ಕೆಳಕಂಡ ಅಂಶಗಳ ಕುರಿತು ಮಾತನಾಡಿದ್ದಾರೆ.

'130ರಿಂದ 150 ರನ್ ಬಾರಿಸುತ್ತಾರೆ ಎಂದುಕೊಂಡಿದ್ದೆ'
ಲಂಕಾ ವಿರುದ್ಧದ 3 ಪಂದ್ಯಗಳ ಟ್ವೆಂಟಿ ಸರಣಿಯ ಕೊನೆಯ ಪಂದ್ಯದಲ್ಲಿ ಟೀಮ್ ಇಂಡಿಯಾ 130ರಿಂದ 150 ರನ್ ಕಲೆ ಹಾಕಲಿದೆ ಎಂದು ವಿರೇಂದ್ರ ಸೆಹವಾಗ್ ಊಹಿಸಿದ್ದರಂತೆ. ಆದರೆ ಕೇವಲ 81 ರನ್ ಗಳಿಸಿದ ಟೀಂ ಇಂಡಿಯಾ ತನ್ನ ಊಹೆಯನ್ನು ಹುಸಿಗೊಳಿಸಿತು ಎಂದು ವಿರೇಂದ್ರ ಸೆಹ್ವಾಗ್ ಬೇಸರ ವ್ಯಕ್ತಪಡಿಸಿದ್ದಾರೆ.

ಕಳಪೆ ಬ್ಯಾಟಿಂಗ್ ಪ್ರದರ್ಶನ
ಲಂಕಾ ವಿರುದ್ಧದ ಕೊನೆಯ ಟಿ ಟ್ವೆಂಟಿ ಪಂದ್ಯದಲ್ಲಿ ನಿರೀಕ್ಷೆ ಹುಟ್ಟುಹಾಕಿದ್ದ ಭಾರತ ತಂಡದ ಆಟಗಾರರು ಕಳಪೆ ಬ್ಯಾಟಿಂಗ್ ಪ್ರದರ್ಶನವನ್ನು ತೋರಿದರು. ಮೊದಲ 5 ಬ್ಯಾಟ್ಸ್‌ಮನ್‌ಗಳ ಪೈಕಿ ಕೇವಲ ರುತುರಾಜ್ ಗಾಯಕ್ವಾಡ್ ಮಾತ್ರ ಎರಡಂಕೆ ಮುಟ್ಟಿದ್ದರು. ಉಳಿದ ಎಲ್ಲಾ ಬ್ಯಾಟ್ಸ್‌ಮನ್‌ಗಳೂ ಸಹ ಎರಡಂಕಿ ದಾಟುವ ಸಾಹಸ ಮಾಡದೆ ಪೆವಿಲಿಯನ್ ಕಡೆಗೆ ಹೆಜ್ಜೆ ಹಾಕಿದ್ದರು. ತಂಡದ ಪರ ಜವಾಬ್ದಾರಿಯುತ ಆಟವನ್ನಾಡದ ಭಾರತದ ಬ್ಯಾಟ್ಸ್‌ಮನ್‌ಗಳೇ ಸೋಲಿಗೆ ಕಾರಣ ಎಂದು ವಿರೇಂದ್ರ ಸೆಹ್ವಾಗ್ ಹೇಳಿದ್ದಾರೆ.

ಭಾರತಕ್ಕೆ ಮಾರಕವಾದ ವನಿಂದು ಹಸರಂಗ
ಶ್ರೀಲಂಕಾ ಪರ ಬೌಲರ್ ವನಿಂದು ಹಸರಂಗ ಭಾರತದ ವಿರುದ್ಧ ಶ್ರೀಲಂಕಾ ಮೂರನೇ ಟಿ ಟ್ವೆಂಟಿ ಪಂದ್ಯವನ್ನು ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಬ್ಯಾಟ್ಸ್‌ಮನ್‌ಗಳಾದ ಸಂಜು ಸ್ಯಾಮ್ಸನ್ ಮತ್ತು ರುತುರಾಜ್ ಗಾಯಕ್ವಾಡ್ ವಿಕೆಟ್‍ಗಳನ್ನು ಪಡೆದ ವನಿಂದು ಹಸರಂಗ ಭುವನೇಶ್ವರ್ ಕುಮಾರ್ ಮತ್ತು ವರುಣ್ ಚಕ್ರವರ್ತಿ ವಿಕೆಟ್‍ಗಳನ್ನೂ ಪಡೆದರು. ಹೀಗೆ ಭಾರತದ ಪ್ರಮುಖ ವಿಕೆಟ್‍ಗಳನ್ನು ಪಡೆದ ಶ್ರೀಲಂಕಾ ಬೌಲರ್ ವನಿಂದು ಹಸರಂಗ 4 ಓವರ್‌ಗಳನ್ನು ಮಾಡಿ ಕೇವಲ 9 ರನ್ ನೀಡಿ 4 ವಿಕೆಟ್‍ಗಳನ್ನು ಪಡೆದು ಮಿಂಚಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications