ದೆಹಲಿ ಕ್ರಿಕೆಟ್ ಸಮಿತಿಗೆ ರಾಜೀನಾಮೆ ನೀಡಿದ ಸೆಹ್ವಾಗ್

ನವದೆಹಲಿ, ಸೆಪ್ಟೆಂಬರ್ 17: ಮಾಜಿ ಕ್ರಿಕೆಟರ್ ವೀರೇಂದ್ರ ಸೆಹ್ವಾಗ್ ಅವರು ದೆಹಲಿ ಹಾಗೂ ಡಿಸಿಕ್ಟ್ರ ಕ್ರಿಕೆಟ್ ಅಸೋಸಿಯೇಷನ್ (ಡಿಡಿಸಿಎ) ಕ್ರಿಕೆಟ್ ಸಮಿತಿಗೆ ರಾಜೀನಾಮೆ ಸಲ್ಲಿಸಿರುವುದಾಗಿ ಸೋಮವಾರ (ಸೆಪ್ಟೆಂಬರ್ 17)ದಂದು ಘೋಷಿಸಿದ್ದಾರೆ.
ಸೆಹ್ವಾಗ್, ಆಕಾಶ್ ಛೋಪ್ರಾ, ರಾಹುಲ್ ಸಾಂಘ್ವಿ ಅವರಿದ್ದ ಸಮಿತಿ ಇತ್ತೀಚೆಗೆ ಮನೋಜ್ ಪ್ರಭಾಕರ್ ಅವರನ್ನು ಬೌಲಿಂಗ್ ಕೋಚ್ ಆಗಿ ಉಳಿಸಿಕೊಳ್ಳುವ ಬಗ್ಗೆ ಶಿಫಾರಸು ಮಾಡಿತ್ತು. ಆದರೆ, ಇದಕ್ಕೆ ಪುರಸ್ಕಾರ ಸಿಕ್ಕಿರಲಿಲ್ಲ. ಈ ಕಾರಣಕ್ಕೆ ಮನನೊಂದು ಸೆಹ್ವಾಗ್ ಅವರು ರಾಜೀನಾಮೆ ಸಲ್ಲಿಸಿರುವ ಸಾಧ್ಯತೆಯಿದೆ ಎನ್ನಲಾಗಿದೆ.
ಸೆಹ್ವಾಗ್ ಬೆನ್ನಲ್ಲೇ ಆಕಾಶ್ ಹಾಗೂ ರಾಹುಲ್ ಕೂಡಾ ರಾಜೀನಾಮೆ ನೀಡಿದ್ದಾರೆ. ಮೂವರ ರಾಜೀನಾಮೆ ಕೂಡಾ ಅಂಗೀಕೃತವಾಗಿವೆ. ಸುಪ್ರೀಂಕೋರ್ಟ್ ನಿರ್ದೇಶನದಂತೆ ಶೀಘ್ರವೇ ಹೊಸ ಸಮಿತಿಯನ್ನು ನೇಮಿಸಬೇಕಾಗುತ್ತದೆ.
ಗಂಭೀರ್ ಕಾರಣವೇ?: ಪ್ರಭಾಕರ್ ಅವರ ನೇಮಕ ಕುರಿತಂತೆ ಮಾಜಿ ನಾಯಕ ಗೌತಮ್ ಗಂಭೀರ್ ಅವರು ಅಪಸ್ವರ ಹಾಡಿದ್ದರು. 2000ದ ಮ್ಯಾಚ್ ಫಿಕ್ಸಿಂಗ್ ಕೇಸಿನಲ್ಲಿ ಮನೋಜ್ ಪ್ರಭಾಕರ್ ಹೆಸರು ಕೇಳಿ ಬಂದಿತ್ತು . ಇದಕ್ಕೆ ಕಾರಣ ಎನ್ನಲಾಗಿದೆ. 2007-08ರಲ್ಲಿ ರಣಜಿ ತಂಡಕ್ಕೆ ಮನೋಜ್ ಕೋಚ್ ಆಗಿದ್ದಾಗ ಗಂಭೀರ್ ಅವರು ಯಾವುದೇ ಪ್ರತಿರೋಧ ಒಡ್ಡಿರಲಿಲ್ಲ.
ಆದರೆ, ಸೆಹ್ವಾಗ್ ಹಾಗೂ ಗಂಭೀರ್ ನಡುವೆ ಪ್ರಭಾಕರ್ ನೇಮಕ ಕುರಿತಂತೆ ಯಾವುದೆ ಮನಸ್ತಾಪವಾಗಿಲ್ಲ ಎಂಬ ಸುದ್ದಿಯೂ ಇದೆ. ಜೊತೆಗೆ ಸೆಹ್ವಾಗ್ ಹಾಗೂ ಸಾಂಘ್ವಿ ಇಬ್ಬರ ಮೇಲೆ ಲಾಭದಾಯಕ ಹುದ್ದೆ ಹೊಂದಿರುವ ಆರೋಪವೂ ಕೇಳಿ ಬಂದಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications