ಯೋಗೇಶ್ವರ್ ಗೆ ಬೆಳ್ಳಿ, ಸೆಹ್ವಾಗ್ ಅಪ್ಗ್ರೇಡ್ ಟ್ವೀಟ್ ವಾಹ್!
ನವದೆಹಲಿ, ಆಗಸ್ಟ್ 31: ಮಾಜಿ ಕ್ರಿಕೆಟರ್ ವೀರೆಂದರ್ ಸೆಹ್ವಾಗ್ ಟ್ವಿಟ್ಟರ್ ನಲ್ಲಿ ಸಕತ್ ಪಂಚಿಂಗ್ ಟ್ವೀಟ್ ಗಳ ಮೂಲಕ ಅಭಿಮಾನಿಗಳನ್ನು ಮೆಚ್ಚಿಸುತ್ತಿರುವುದು ಗೊತ್ತಿರಬಹುದು. ಕುಸ್ತಿಪಟು ಯೋಗೇಶ್ವರ್ ಅವರಿಗೆ ಕಂಚಿನ ಪದಕ 'ಅಪ್ಗ್ರೇಡ್ ಆಗಿ ಬೆಳ್ಳಿ ಪದಕವಾಗಿದ್ದನ್ನು ತಮಾಷೆಯಾಗಿ ಟ್ವೀಟ್ ಮಾಡಿದ್ದಾರೆ.
ಅಮೆರಿಕದಲ್ಲಿ ಕ್ರಿಕೆಟ್ ಅಪ್‍ಗ್ರೇಡ್ ಆಗಿದೆ. ಆಶಿಶ್ ನೆಹ್ರಾ ಸ್ಮಾರ್ಟ್‍ಫೋನಿಗೆ ಅಪ್‍ಗ್ರೇಡ್ ಆಗಿದ್ದಾರೆ. ಈಗ 2012 ಒಲಿಂಪಿಕ್ಸ್ ನ ಕಂಚಿನ ಪದಕ ವಿಜೇತ ಯೋಗೇಶ್ವರ್ ದತ್ ಬೆಳ್ಳಿ ಪದಕಕ್ಕೆ ಅಪ್‍ಗ್ರೇಡ್ ಆಗಲಿದ್ದಾರೆ ಎಂದು ಟ್ವೀಟ್ ಮಾಡಿದ್ದಾರೆ.[ಕುಸ್ತಿಪಟು ದತ್ ಗೆ ಸಿಕ್ಕ ಕಂಚು -ಬೆಳ್ಳಿ ಪದಕವಾಗಲಿದೆ!]

2012ರ ಲಂಡನ್ ಒಲಿಂಪಿಕ್ಸ್ ನ 60ಕೆಜಿ ವಿಭಾಗದಲ್ಲಿ ಬೆಳ್ಳಿ ಗೆದಿದ್ದ ರಷ್ಯಾದ ಬೆಸಿಕ್ ಕುಡುಖಾವ್ ಅವರು ಡೋಪಿಂಗ್
ಟೆಸ್ಟ್ ನಲ್ಲಿ ಫೇಲ್ ಆಗಿದ್ದಾರೆ. ಅವರ ಸ್ಯಾಂಪಲ್ ಪರೀಕ್ಷೆಗೆ ಒಳಪಡಿಸಿದಾಗ ಉದ್ದೀಪನ ಮದ್ದು ಸೇವನೆ ಮಾಡಿರುವುದು ದೃಢಪಟ್ಟಿದೆ, ಈ ಹಿನ್ನೆಲೆಯಲ್ಲಿ ಬೆಳ್ಳಿ ಪದಕ ಯೋಗೇಶ್ವರ್ ದತ್ ಅವರ ಪಾಲಾಗಲಿದೆ.
ನೆಹ್ರಾ ಬಗ್ಗೆ ಟ್ವೀಟ್ ಯಾಕೆ?: ಈ ಹಿಂದೆ ನಾನು ನೋಕಿಯಾ ಮೊಬೈಲ್ ಮಾತ್ರ ಬಳಸುತ್ತೇನೆ, ನನಗೆ ಸ್ಮಾರ್ಟ್ ಫೋನ್ ಗೊತ್ತಿಲ್ಲ ಎಂದು ಆಶೀಶ್ ನೆಹ್ರಾ ಅವರು ಸುದ್ದಿಗೋಷ್ಠಿಯೊಂದರಲ್ಲಿ ತಿಳಿಸಿದ್ದರು.
ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಚರ್ಚೆ, ಹಾಸ್ಯದ ಪೋಸ್ಟ್ ಗಳು ಕಂಡು ಬಂದಿತ್ತು. ಈಗ ನೆಹ್ರಾ ಬಳಿ ಸ್ಮಾರ್ಟ್ ಫೋನ್ ಇದೆ. ಅವರನ್ನು ನಂತರ ಟ್ವಿಟ್ಟರಿಗೂ ಕರೆ ತರುತ್ತೇನೆ ಎಂದು ಉತ್ಸಾಹದಲ್ಲಿ ಸೆಹ್ವಾಗ್ ಹೇಳಿದ್ದಾರೆ. ಇದರ ಜೊತೆಗೆ ಅಮೆರಿಕದಲ್ಲಿ ಮೊದಲ ಬಾರಿಗೆ ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ 2 ಟಿ20 ಪಂದ್ಯ ನಡೆದಿದ್ದನ್ನು ಇಲ್ಲಿ ಸೇರಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications