ನವದೆಹಲಿ, ಮಾರ್ಚ್ 06: ಮಾಜಿ ಕ್ರಿಕೆಟರ್ ವೀರೇಂದ್ರ ಸೆಹ್ವಾಗ್ ಅವರು ಮಾಡಿರುವ ಟ್ವೀಟ್‌ವೊಂದು ಸಾಮಾಜಿಕ ಜಾಲತಾಣದಲ್ಲಿ ಸಕತ್ ವೈರಲ್ ಆಗಿತ್ತು. ವಿರಾಟ್ ನಿವೃತ್ತಿ ಎಂದು ಸೆಹ್ವಾಗ್ ಟ್ವೀಟ್ ಮಾಡಿ ಅಭಿಮಾನಿಗಳಿಗೆ ಸಣ್ಣ ಶಾಕ್ ನೀಡಿದ್ದರು
ಭಾರತದ ಅತ್ಯಂತ ಹಳೆಯ ಯುದ್ಧ ನೌಕೆ ಐಎನ್‌ಎಸ್ ವಿರಾಟ್ ಮಾರ್ಚ್ 06ರಂದು ಅಧಿಕೃತವಾಗಿ ಸೇವೆಯಿಂದ ನಿವೃತ್ತಿಯಾಗಿದ್ದು, ಇದಕ್ಕೆ ಸಂಬಂಧಿಸಿದಂತೆ ವಿರೇಂದ್ರ ಸೆಹ್ವಾಗ್ ಮಾಡಿರುವ ಟ್ವೀಟ್ ತಪ್ಪಾಗಿ ಅರ್ಥೈಸುವಂತೆ ಮಾಡಿತ್ತು.

ವಿರಾಟ್ ನಿವೃತ್ತರಾಗುತ್ತಿದ್ದಾರೆ.. ಅತ್ಯಂತ ಹಳೆಯ ಯುದ್ಧ ನೌಕೆಗೆ ಎಂದಿಗೂ ಕೊನೆ ಇಲ್ಲ. 30 ವರ್ಷಗಳ ಸಾರ್ಥಕ ಸೇವೆಯ ಬಳಿಕವೂ ಎಂದೆಂದಿಗೂ ನಮ್ಮ ಮನದಲ್ಲಿ ಐಎನ್ಎಸ್ ವಿರಾಟ್ ಇರುತ್ತದೆ" ಎಂದು ಸೆಹ್ವಾಗ್ ಟ್ವೀಟ್ ಮಾಡಿದ್ದರು.
(ಒನ್ಇಂಡಿಯಾ ಸುದ್ದಿ)