ನಟರಾಜನ್ ಅದ್ದೂರಿ ಸ್ವಾಗತದ ವಿಡಿಯೋ ಶೇರ್ ಮಾಡಿದ ವೀರೇಂದ್ರ ಸೆಹ್ವಾಗ್

ಚೆನ್ನೈ: ಆಸ್ಟ್ರೇಲಿಯಾ ಪ್ರವಾಸವನ್ನು ಯಶಸ್ವಿಯಾಗಿ ಮುಗಿಸಿ ಭಾರತಕ್ಕೆ ವಾಪಸ್ಸಾಗಿರುವ ಟೀಮ್ ಇಂಡಿಯಾದ ಆಟಗಾರರನ್ನು ಅಭಿಮಾನಿಗಳು ಆದರದಿಂದ ಬರಮಾಡಿಕೊಂಡಿದ್ದಾರೆ. ಅದ್ದೂರಿಯಾಗಿ ಸ್ವಾಗತಿಸಿದ್ದಾರೆ. ಭಾರತದ ವೇಗಿ ಟಿ ನಟರಾಜನ್ ಅವರನ್ನು ಅವರ ತವರೂರಿನ ಜನ ಪ್ರೀತಿಯಿಂದ ಸ್ವಾಗತಿಸುತ್ತಿರುವ ವಿಡಿಯೋವನ್ನು ಮಾಜಿ ಬ್ಯಾಟ್ಸ್‌ಮನ್ ವಿರೇಂದ್ರ ಸೆಹ್ವಾಗ್ ಶೇರ್ ಮಾಡಿದ್ದಾರೆ.
ನೆಟ್ ಬೌಲರ್ ಆಗಿ ಆಸ್ಟ್ರೇಲಿಯಾ ಪ್ರವಾಸ ಕೈಗೊಂಡಿದ್ದ ಟಿ ನಟರಾಜನ್ ಅವರು ಏಕದಿನ, ಟಿ20ಐ ಮತ್ತು ಟೆಸ್ಟ್ ಈ ಮೂರೂ ಕ್ರಿಕೆಟ್ ಮಾದರಿಗಳಲ್ಲಿ ಭಾರತ ಪರ ಆಡಿ ಉತ್ತಮ ಪ್ರದರ್ಶನ ನೀಡಿದ್ದರು. ಮುಖ್ಯವಾಗಿ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಭಾರತ 2-1ರ ಐತಿಹಾಸಿಕ ಜಯ ದಾಖಲಿಸುವಲ್ಲಿ ನಟರಾಜನ್ ಕೊಡುಗೆಯೂ ಗಮನಾರ್ಹವಾಗಿತ್ತು.
ನಟರಾಜನ್ ಅವರನ್ನು ಸೇಲಂನ ಜನ ಸ್ವಾಗತಿಸುತ್ತಿರುವ ವಿಡಿಯೋ ಶೇರ್ ಮಾಡಿರುವ ವೀರೂ, 'ಇದು ಭಾರತ. ಇಲ್ಲಿ ಕ್ರಿಕೆಟ್ ಬರೀ ಆಟವಲ್ಲ. ಅದು ಬರೀ ಆಟ ಅನ್ನೋದಕ್ಕಿಂತಲೂ ಮಿಗಿಲು. ಸೇಲಂ ಜಿಲ್ಲೆಯ ಚಿನ್ನಪ್ಪಂಪಟ್ಟಿ ಗ್ರಾಮಕ್ಕೆ ಬಂದ ನಟರಾಜನ್ ಅವರನ್ನು ಅಲ್ಲಿನ ಜನ ಅದ್ದೂರಿಯಾಗಿ ಸ್ವಾಗತಿಸುತ್ತಿರುವುದು. ಏನು ಅದ್ಭುತ ಕತೆ' ಎಂದು ಬರೆದುಕೊಂಡಿದ್ದಾರೆ.
ಅಂತಿಮ ಟೆಸ್ಟ್‌ನಲ್ಲಿ ಆಡಿದ್ದ ನಟರಾಜನ್ 3 ವಿಕೆಟ್ ಪಡೆದು ತಂಡದ ಗೆಲುವಿಗೆ ಕಾರಣರಾಗಿದ್ದು. ಅದಕ್ಕೂ ಮುನ್ನ ಏಕದಿನ ಒಂದು ಪಂದ್ಯದಲ್ಲಿ 2, ಟಿ20ಐ ಮೂರು ಪಂದ್ಯಗಳಲ್ಲಿ ನಟರಾಜ್‌ಗೆ 6 ವಿಕೆಟ್‌ಗಳು ಲಭಿಸಿದ್ದವು. ನೆಟ್ ಬೌಲರ್ ಆಗಿ ತೆರಳಿದ್ದ ನಟರಾಜ್‌ನ ಅವರ ಈ ಸಾಧನೆಯನ್ನು ಸೆಹ್ವಾಗ್ ಶ್ಲಾಘಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications