Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಅಹರ್ನಿಶಿ ಟೆಸ್ಟ್ ಪಂದ್ಯ; ಪಿಂಕ್ ಬಾಲ್ ಗೋಚರತೆ ಬಗ್ಗೆ ಸೌರವ್ ಗಂಗೂಲಿ ಮಾತು

 Visibility with pink ball is easier than red ball, says Ganguly

ಭಾರತದ ಮೊದಲ ಅಹರ್ನಿಶಿ ಟೆಸ್ಟ್‌ ಪಂದ್ಯಕ್ಕೆ ಪ್ರೇಕ್ಷಕರು ನಿರೀಕ್ಷೆಗೂ ಮೀರಿ ಸ್ಪಂದಿಸಿದ್ದಾರೆ. ಹೀಗಾಗಿ ಹಗಲು ರಾತ್ರಿ ಪಂದ್ಯ ಸಾಕಷ್ಟು ಕಾರಣಕ್ಕೆ ಚರ್ಚೆಯ ಕೇಂದ್ರಬಿಂದುವಾಗಿದೆ. ಅದ್ರಲ್ಲೂ ಪ್ರಮುಖವಾಗಿ ಕೃತಕ ಬೆಳಕಿನಲ್ಲಿ ಚೆಂಡಿನ ಗೋಚರತೆ ಬಗ್ಗೆಯೂ ಚರ್ಚೆ ನಡೆದಿದೆ. ಚೆಂಡಿನ ಗೋಚರತೆಯ ಬಗ್ಗೆ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಪ್ರತಿಕ್ರಿಯಿಸಿದ್ದಾರೆ.

ಮಾಜಿ ಕ್ರಿಕೆಟಿಗರೂ ಆಗಿರುವ ಸೌರವ್ ಗಂಗೂಲಿ ಪಿಂಕ್ ಬಾಲ್‌ನ ಗೋಚರತೆ ಕೆಂಪು ಚೆಂಡಿಗಿಂತ ಉತ್ತಮವಾಗಿದೆ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಪಿಂಕ್ ಬಾಲನ್ನು ಕೆಂಪು ಚೆಂಡಿಗಿಂತಲೂ ಸುಲಭವಾಗಿ ಗುರುತಿಸಬಹುದು ಗಂಗೂಲಿ ಹೇಳಿದ್ದಾರೆ.

ಮೊದಲ ಅಹರ್ನಿಶಿ ಪಂದ್ಯ ಯಶಸ್ವಿಯಾಗಿ ನಡೆಯುತ್ತಿದ್ದು ಪ್ರೇಕ್ಷಕರು ಹಾಗೂ ತಜ್ಞರ ಪ್ರತಿಕ್ರಿಯೆಗಳಿಂದ ಗಂಗೂಲಿ ಸಂತಸಗೊಂಡಿದ್ದಾರೆ. ಈ ಸಂದರ್ಭದಲ್ಲಿ ಆಸ್ಟ್ರೇಲಿಯಾದಲ್ಲಿ ಮುಂದಿನ ವರ್ಷ ಹಗಲು ರಾತ್ರಿ ಪಂದ್ಯದಲ್ಲಿ ಪಾಲ್ಗೊಳ್ಳುವ ಬಗ್ಗೆಯೂ ಪ್ರಶ್ನೆ ಎದುರಾಯಿತು. ಆದರೆ ಈ ಬಗ್ಗೆ ಗಂಗೂಲಿ ಯಾವುದೇ ಸ್ಪಷ್ಟತೆಯನ್ನು ನೀಡಿಲ್ಲ.

ಡೇ-ನೈಟ್ ಪಂದ್ಯ ಈ ಪ್ರಮಾಣದಲ್ಲಿ ಯಶಸ್ಸು ಕಾಣಲು ಮುಖ್ಯ ಕಾರಣ ಸೌರವ್ ಗಂಗೂಲಿ. ಈಡನ್ ಗಾರ್ಡನ್‌ನಂತಾ ದೊಡ್ಡ ಮೈದಾನದಲ್ಲಿ ಸತತ ಎರಡನೇ ದಿನವೂ ಮೈದಾನ ತುಂಬಿತ್ತು. ಈ ವಿಚಾರವಾಗಿ ಗಂಗೂಲಿ ನಾನು ಯಾವುದೇ ರೀತಿಯ ಒತ್ತಡದಲ್ಲಿಲ್ಲ. ಆದರೆ ನಾನು ಬ್ಯುಸಿಯಾಗಿದ್ದೇನೆ ಎಂದು ಹೇಳಿದ್ದಾರೆ.

ಈ ಐತಿಹಾಸಿಕ ಸಂದರ್ಭದಲ್ಲಿ ಹಾಜರಿದ್ದ ಬಾಂಗ್ಲಾದೇಶದ ಪ್ರದಾನಿ ಶೇಕ್ ಹಸೀನಾ ಅವರಿಗೆ ಧನ್ಯವಾದವನ್ನು ಸೌರಬ್ ಗಂಗೂಲಿ ಸಲ್ಲಿಸಿದರು. ಮುಂದಿನ ವರ್ಷ ಬಾಂಗ್ಲಾದೇಶದಲ್ಲಿ ಬಾಂಗ್ಲಾ ದ ಪಿತಾಮಹ ಬಂಗಬಂಧು ಶೇಖ್ ಮುಜಿಬುರ್ ರೆಹಮಾನ್ ಅವರ ೧೦೦ನೇ ಜನ್ಮದಿನದ ಸ್ಮರಣಾರ್ಥ ನಡೆಯುವ ಆಲ್‌ ಸ್ಟಾರ್ XI ಮತ್ತು ವಿಶ್ವ XI ತಂಡಗಳ ಮಧ್ಯೆ ನಡೆಯುವ ಪಂದ್ಯದಲ್ಲಿ ಪಾಲ್ಗೊಳ್ಳುವುದಾಗಿ ತಿಳಿಸಿದ್ದಾರೆ.

Story first published: Sunday, November 24, 2019, 11:35 [IST]
Other articles published on Nov 24, 2019
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+