Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಐಪಿಎಲ್ ಶೀರ್ಷಿಕೆ ಪ್ರಾಯೋಜಕತ್ವ ಬಿಟ್ಟುಕೊಡಲು ಸಿದ್ಧವಾಯಿತೇ ವಿವೋ?

Vivo open to giving away IPL title sponsorship rights

ನವದೆಹಲಿ, ಫೆಬ್ರವರಿ 11: ಕಳೆದ ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್) ಪಂದ್ಯಾವಳಿ ಪ್ರಾರಂಭಕ್ಕೂ ಮುನ್ನವೇ ಚೀನಾ ಮೂಲದ ಸಂಸ್ಥೆ ವಿವೊ ಟೈಟಲ್ ಪ್ರಾಯೋಜಕತ್ವದಿಂದ ಹಿಂದೆ ಸರಿದಿದ್ದು ನೆನಪಿರಬಹುದು. ಶೀರ್ಷಿಕೆ ಪ್ರಾಯೋಜಕತ್ವ ಅವಧಿ ವಿಸ್ತರಿಸದಿರಲು ವಿವೋ ನಿರ್ಧರಿಸಿದೆ ಎಂದು ಎಕಾನಾಮಿಕ್ ಟೈಮ್ಸ್ ವರದಿ ಮಾಡಿದೆ.

ಭಾರತ ಮತ್ತು ಚೀನಾ ನಡುವಿನ ಗಡಿ ವಿವಾದದ ನಂತರ, ವಿವೋ ಐಪಿಎಲ್ ಜೊತೆಗಿನ ಸಂಬಂಧವನ್ನು ಕೊನೆಗೊಳಿಸಲು ನಿರ್ಧರಿಸಿತ್ತು. ಆದರೆ, ವಿವೋ ಟೈಟಲ್ ಪ್ರಾಯೋಜಕತ್ವಕ್ಕಾಗಿ ಬಿಸಿಸಿಐಗೆ ವಾರ್ಷಿಕವಾಗಿ 440 ಕೋಟಿ ರೂ. ನೀಡುತ್ತಿದ್ದು, ಕಳೆದ ಸೀಸನ್ ಹೊರತುಪಡಿಸಿದರೂ ಇನ್ನೂ ಮೂರು ವರ್ಷ ಪ್ರಾಯೋಜಕತ್ವ ವಹಿಸಿಕೊಳ್ಳಬಹುದು.

ಕಳೆದ ಸೀಸನ್ ಐಪಿಎಲ್ ಟೈಟಲ್ ಪ್ರಾಯೋಜಕತ್ವ ಫ್ಯಾಂಟಸಿ ಗೇಮ್ ಕಂಪನಿ ಡ್ರೀಮ್ 11 ಪಾಲಾಗಿತ್ತು. ಬಿಡ್ ಮೊತ್ತ ತಗ್ಗಿಸಿ 222 ಕೋಟಿ ರು ಗಿಳಿಸಲಾಗಿತ್ತು. ಈಗ ಸೂಕ್ತ ಖರೀದಿದಾರರನ್ನು ಗುರುತಿಸುವಂತೆ ಗ್ರೂಪ್ ಎಂ ಸಂಸ್ಥೆಗೆ ವಿವೋ ತಿಳಿಸಿದೆ.

5 ವರ್ಷದ ಅವಧಿಗೆ 2,190 ಕೋಟಿ ರು ನೀಡಿ ಹಕ್ಕು ಪಡೆದುಕೊಂಡಿರುವ ವಿವೋ ಹಕ್ಕು ಪರಭಾರೆ ಮಾಡಬೇಕಾದರೆ ಶೇ 5ರಷ್ಟು ಶುಲ್ಕ ಪಾವತಿಸಬೇಕು ಹಾಗೂ ಮುಂಚಿತವಾಗಿ ಬಿಸಿಸಿಐಗೆ ತಿಳಿಸಬೇಕಾಗುತ್ತದೆ.

ಒಂದು ವೇಳೆ ಸೂಕ್ತ ಖರೀದಿದಾರರು ಸಿಕ್ಕರೂ ವರ್ಷಕ್ಕೆ 22 ಕೋಟಿ ರು ನಂತೆ ಸುಮಾರು 462 ಕೋಟಿ ರು ಗಿಂತಲೂ ಕಡಿಮೆ ಮೊತ್ತವನ್ನು ಪಾವಸಬೇಕಾಗುತ್ತದೆ. ಮಿಕ್ಕಿದ್ದನ್ನು ವಿವೋ ಸಂಸ್ಥೆಯಿಂದ ಬಿಸಿಸಿಐ ಪಡೆಯಲಿದೆ.

ವಿವೋ ಹೊಸ ಆಫರ್ ಜೊತೆಗೆ ಬಂದರೆ ಯಾವುದೇ ಟೆಂಡರ್ ಇಲ್ಲದೆ ಪ್ರಕ್ರಿಯೆ ಮುಗಿಯಲಿದೆ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ., ಒಟ್ಟಾರೆ, ಹರಾಜು ದಿನಾಂಕ ಹತ್ತಿರವಾಗುತ್ತಿದ್ದು, ಶೀರ್ಷಿಕೆ ಪ್ರಾಯೋಜಕತ್ವದ ಗೊಂದಲ ಮುಂದುವರೆದಿದೆ.

Story first published: Thursday, February 11, 2021, 16:40 [IST]
Other articles published on Feb 11, 2021
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+