Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಐಪಿಎಲ್ ಪ್ರಾಯೋಜಕತ್ವ: ಬಿಸಿಸಿಐಗೆ 2 ಸಾವಿರ ಕೋಟಿ ರು. ಕೊಟ್ಟ ವಿವೊ

ಮುಂಬೈ, ಜೂನ್ 27: ಚೀನಾದ ಮೊಬೈಲ್ ಕಂಪನಿಯಾದ ವಿವೊ, ಐಪಿಎಲ್ ಶೀರ್ಷಿಕೆ ಪ್ರಾಯೋಜಕತ್ವಕ್ಕಾಗಿ ಮುಂದಿನ ಐದು ವರ್ಷಗಳಿಗೆ ಅನ್ವಯವಾಗುವಂತೆ ಬಿಸಿಸಿಐಗೆ 2,200 ಕೋಟಿ ರು. ನೀಡಿ ಹಕ್ಕುಗಳನ್ನು ಪಡೆದುಕೊಂಡಿದೆ.

ಐದು ವರ್ಷಗಳ ಐಪಿಎಲ್ ಗಳಿಗೆ ಪ್ರತಿ ವರ್ಷದ ಆವೃತ್ತಿಗೆ ತಲಾ 440 ಕೋಟಿ ರು. ಲೆಕ್ಕಾಚಾರದಲ್ಲಿ ಈ ಹಣ ನೀಡಲಾಗಿದೆ.

VIVO retains IPL title sponsorship for five years with Rs 2,199 crore bid

2016 ಹಾಗೂ 2017ರ ಐಪಿಎಲ್ ಗಳ ಶೀರ್ಷಿಕೆ ಪ್ರಾಯೋಜಕತ್ವವನ್ನು ಇದೇ ವಿವೊ ಕಂಪನಿಯೇ ಪಡೆದುಕೊಂಡಿತ್ತು. ಆ ಎರಡು ಆವೃತ್ತಿಗಳಲ್ಲಿ ತಲಾ 100 ಕೋಟಿ ರು.ಗಳನ್ನು ವಿವೊ ಗಳಿಸಿದೆ ಎಂದು ಹೇಳಲಾಗಿದೆ.

ಇದೀಗ, 2018ರಿಂದ 2022ರವರೆಗೆ ಹಕ್ಕುಗಳನ್ನು ಪಡೆದಿರುವುದು ಕಂಪನಿಯ ವಾರ್ಷಿಕ ಗಳಿಕೆಯನ್ನು ಮತ್ತಷ್ಟು ಹೆಚ್ಚಿಸಬಹುದೆಂದು ನಿರೀಕ್ಷಿಸಲಾಗಿದೆ.

ಕೆಲ ದಿನಗಳ ಹಿಂದಷ್ಟೇ, ಐಪಿಎಲ್ ಶೀರ್ಷಿಕೆ ಪ್ರಾಯೋಜಕತ್ವಕ್ಕಾಗಿ ಬಿಸಿಸಿಐ ಟೆಂಡರ್ ಆಹ್ವಾನಿಸಿತ್ತು. ಈ ಟೆಂಡರ್ ನಲ್ಲಿ ಜಯಿಸಿರುವ ವಿವೊಗೆ ಈ ಹಕ್ಕುಗಳು ಲಭ್ಯವಾಗಿವೆ.

Story first published: Wednesday, January 3, 2018, 10:05 [IST]
Other articles published on Jan 3, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+