Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಐಪಿಎಲ್ ಶೀರ್ಷಿಕೆ ಪ್ರಾಯೋಜಕತ್ವ ಉಳಿಸಿಕೊಂಡ ವಿವೋ ಕಂಪನಿ

VIVO will be the title sponsor for IPL 2021

ನವದೆಹಲಿ, ಫೆಬ್ರವರಿ 18: ಕಳೆದ ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್) ಪಂದ್ಯಾವಳಿ ಪ್ರಾರಂಭಕ್ಕೂ ಮುನ್ನವೇ ಚೀನಾ ಮೂಲದ ಸಂಸ್ಥೆ ವಿವೊ ಟೈಟಲ್ ಪ್ರಾಯೋಜಕತ್ವದಿಂದ ಹಿಂದೆ ಸರಿದಿದ್ದು ನೆನಪಿರಬಹುದು. ಶೀರ್ಷಿಕೆ ಪ್ರಾಯೋಜಕತ್ವ ಅವಧಿ ವಿಸ್ತರಿಸದಿರಲು ವಿವೋ ನಿರ್ಧರಿಸಿದೆ ಎಂಬ ಸುದ್ದಿಯೂ ಹಬ್ಬಿತ್ತು. ಆದರೆ, ವಿವೋ ತನ್ನ ಪ್ರಯೋಜಕತ್ವವನ್ನು ಮುಂದುವರೆಸಲು ನಿರ್ಧರಿಸಿದೆ..

ಐಪಿಎಲ್ 2021 ಹರಾಜು ಪ್ರಕ್ರಿಯೆ ಆರಂಭವಾಗಿದ್ದು, ಉದ್ಘಾಟನಾ ಭಾಷಣದಲ್ಲಿ ಐಪಿಎಲ್ ಚೇರ್ಮನ್ ಬ್ರಿಜೇಶ್ ಪಟೇಲ್ ಅವರು ಈ ಬಗ್ಗೆ ಸ್ಪಷ್ಟನೆ ನೀಡಿ, ಈ ಬಾರಿ ವಿವೋ ಐಪಿಎಲ್ ಎಂದೇ ಕರೆಯಲಾಗುತ್ತದೆ ಎಂದು ಹೇಳಿದರು.

ಭಾರತ ಮತ್ತು ಚೀನಾ ನಡುವಿನ ಗಡಿ ವಿವಾದದ ನಂತರ, ವಿವೋ ಐಪಿಎಲ್ ಜೊತೆಗಿನ ಸಂಬಂಧವನ್ನು ಕೊನೆಗೊಳಿಸಲು ನಿರ್ಧರಿಸಿತ್ತು. ಆದರೆ, ವಿವೋ ಟೈಟಲ್ ಪ್ರಾಯೋಜಕತ್ವಕ್ಕಾಗಿ ಬಿಸಿಸಿಐಗೆ ವಾರ್ಷಿಕವಾಗಿ 440 ಕೋಟಿ ರೂ. ನೀಡುತ್ತಿದ್ದು, ಕಳೆದ ಸೀಸನ್ ಹೊರತುಪಡಿಸಿದರೂ ಇನ್ನೂ ಮೂರು ವರ್ಷ ಪ್ರಾಯೋಜಕತ್ವ ವಹಿಸಿಕೊಳ್ಳಬಹುದು.

ಕಳೆದ ಸೀಸನ್ ಐಪಿಎಲ್ ಟೈಟಲ್ ಪ್ರಾಯೋಜಕತ್ವ ಫ್ಯಾಂಟಸಿ ಗೇಮ್ ಕಂಪನಿ ಡ್ರೀಮ್ 11 ಪಾಲಾಗಿತ್ತು. ಬಿಡ್ ಮೊತ್ತ ತಗ್ಗಿಸಿ 222 ಕೋಟಿ ರು ಗಿಳಿಸಲಾಗಿತ್ತು.

5 ವರ್ಷದ ಅವಧಿಗೆ 2,190 ಕೋಟಿ ರು ನೀಡಿ ಹಕ್ಕು ಪಡೆದುಕೊಂಡಿರುವ ವಿವೋ ಹಕ್ಕು ಪರಭಾರೆ ಮಾಡಬೇಕಾದರೆ ಶೇ 5ರಷ್ಟು ಶುಲ್ಕ ಪಾವತಿಸಬೇಕು ಹಾಗೂ ಮುಂಚಿತವಾಗಿ ಬಿಸಿಸಿಐಗೆ ತಿಳಿಸಬೇಕಾಗಿತ್ತು. ಆದರೆ, ವಿವೋ ಶೀರ್ಷಿಕೆ ಪ್ರಾಯೋಜಕತ್ವ ಉಳಿಸಿಕೊಂಡಿರುವುದರಿಂದ ಶೀರ್ಷಿಕೆ ಪ್ರಾಯೋಜಕತ್ವದ ಗೊಂದಲಕ್ಕೆ ತೆರೆ ಎಳೆದಂತಾಗಿದೆ.

Story first published: Thursday, February 18, 2021, 15:53 [IST]
Other articles published on Feb 18, 2021
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+