ಐಪಿಎಲ್ ಪ್ರಾಯೋಜಕತ್ವದಿಂದ ಹಿಂದೆ ಸರಿದ ವಿವೋ, ಬಿಸಿಸಿಐಗೆ ತಲೆಬಿಸಿ!

ಮುಂಬೈ, ಆಗಸ್ಟ್ 4: ಈ ವರ್ಷ ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ ನಡೆಯಲಿರುವ ನಗದು ಶ್ರೀಮಂತ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಗೆ ಪ್ರಮುಖ ಪ್ರಾಯೋಜಕತ್ವ ನೀಡುತ್ತಿದ್ದ ವಿವೋ, ಪ್ರಾಯೋಜಕತ್ವದಿಂದ ಹಿಂದೆ ಸರಿಯುವ ನಿರ್ಧಾರ ತಾಳಿದೆ.
ಲಡಾಕ್ ಸಂಘರ್ಷದ ಕಾರಣ ಭಾರತ ಸರ್ಕಾರ ಚೀನಾದ ಪ್ರಮುಖ ಆ್ಯಪ್‌ಗಳಿಗೆ ಭಾರತದಲ್ಲಿ ನಿರ್ಬಂಧ ಹೇರಿತ್ತು. ಭಾರತದಲ್ಲಿ ಚೀನಾ ಉತ್ಪನ್ನಗಳನ್ನು ಬಹಿಷ್ಕರಿಸುವಂತೆ ಆಕ್ರೋಶ ವ್ಯಕ್ತವಾಗಿತ್ತು. ಆದರೆ ಐಪಿಎಲ್‌ಗೆ ಪ್ರಮುಖ ಆರ್ಥಿಕ ಆಧಾರವಾಗಿದ್ದ ವಿವೋ ಪ್ರಾಯೋಜಕತ್ವವನ್ನು ಅನಿವಾರ್ಯವಾಗಿ ಮುಂದುವರೆಸಲು ಬೋರ್ಡ್ ಆಫ್ ಕಂಟ್ರೋಲ್ ಫಾರ್ ಕ್ರಿಕೆಟ್ ಇನ್ ಇಂಡಿಯಾ ನಿರ್ಧರಿಸಿತ್ತು.
ಬಿಸಿಸಿಐಯ ಈ ನಿರ್ಧಾರ ಭಾರತದ ಅಭಿಮಾನಿಗಳಿಗೆ ಬೇಸರ ಮೂಡಿಸಿತ್ತು. ಬಿಸಿಸಿಐ ಮತ್ತು ವಿವೋ ನಡುವಿನ ಹಗ್ಗಜಗ್ಗಾಟ ಈಗ ಕೊನೆಗೊಳ್ಳುವ ಹಂತಕ್ಕೆ ತಲುಪಿದೆ. ಈ ವರ್ಷದ ಮಟ್ಟಿಗಾದರೂ ಪ್ರಾಯೋಜಕತ್ವದಿಂದ ಹಿಂದೆ ಸರಿಯಲು ವಿವೋ ನಿರ್ಧರಿಸಿದೆ ಎನ್ನಲಾಗುತ್ತಿದೆ.
ಐಪಿಎಲ್ ಟೈಟಲ್ ಪ್ರಾಯೋಜಕತ್ವವಾಗಿ ಚೀನಾ ಮೂಲದ ವಿವೋ ಮೊಬೈಲ್ ಕಂಪನಿ ಬಿಸಿಸಿಐಗೆ 2199 ಕೋ.ರೂ. ನೀಡಿತ್ತು. ಬಿಸಿಸಿಐ ಮತ್ತು ವಿವೋ ಮಧ್ಯೆ ಐದು ವರ್ಷಗಳ ಒಪ್ಪಂದ ಇದಾಗಿತ್ತು. ಆದರೆ ವಿವೋ ಈಗ ಹಿಂದೆ ಸರಿಯುತ್ತಿರುವುದರಿಂದ ಬಿಸಿಸಿಐಗೆ ಆರ್ಧಿಕ ಹೊರೆ ಬಿದ್ದಿದೆ. ಭಾರತದ ಕ್ರಿಕೆಟ್ ಬೋರ್ಡ್‌ಗೆ ತಲೆನೋವು ಶುರುವಾಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications