Women's T20 World Cup 2026: ಫೈನಲ್ ಪಂದ್ಯದಲ್ಲಿ ಐತಿಹಾಸಿಕ ಜವಾಬ್ದಾರಿ ಹೊತ್ತ ಭಾರತದ ವೃಂದಾ ರಾಠಿ
ಇಂಗ್ಲೆಂಡ್‌ನಲ್ಲಿ ಮಹಿಳಾ ಟಿ20 ವಿಶ್ವಕಪ್ ರೋಚಕ ಘಟ್ಟ ತಲುಪಿದೆ. ಭಾನುವಾರ ಪ್ರಶಸ್ತಿ ಸುತ್ತಿನ ಕಾದಾಟದಲ್ಲಿ ಮಾಜಿ ಚಾಂಪಿಯನ್ ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ ಮಹಿಳಾ ತಂಡಗಳು ಕಾದಾಟ ನಡೆಸಲಿವೆ. ಈ ಲೀಗ್‌ನಲ್ಲಿ ಭಾರತ ಈಗಾಗಲೇ ಲೀಗ್ ಹಂತದಿಂದ ಹೊರ ನಡೆದಿದೆ. ಆದರೆ ಈಗ ಬರುತ್ತಿರುವ ಸುದ್ದಿ ಭಾರತೀಯ ಕ್ರಿಕೆಟ್ ಅಭಿಮಾನಿಗಳು ಹೆಮ್ಮೆಯ ಪಡುವಂತಹದ್ದಾಗಿದೆ.
ಐತಿಹಾಸಿಕ ಲಾರ್ಡ್ಸ್ ಅಂಗಳದಲ್ಲಿ ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ ತಂಡಗಳು ಕಾದಾಟ ನಡೆಸಲಿವೆ. ಈ ಪಂದ್ಯಕ್ಕೆ ಐಸಿಸಿ ಮ್ಯಾಚ್ ಅಂಪೈರ್‌ಗಳನ್ನು ಘೋಷಿಸಿದೆ. ಜುಲೈ 5 ರಂದು ರಾತ್ರಿ 8 ಗಂಟೆಗೆ ಭಾರತೀಯ ಕಾಲಮಾನದ ಪ್ರಕಾರ ನಡೆಯಲಿರುವ ಟಿ20 ವಿಶ್ವಕಪ್ ಫೈನಲ್‌ನಲ್ಲಿ ಭಾರತದ ಹೆಮ್ಮೆಯ ಕುವರಿ ವೃಂದಾ ರಾಠಿ ಮಹತ್ವದ ಜವಾಬ್ದಾರಿಯನ್ನು ಹೊತ್ತುಕೊಳ್ಳಲಿದ್ದಾರೆ.

ಐಸಿಸಿ ಘೋಷಿಸಿದ ಅಧಿಕಾರಿಗಳ ಪಟ್ಟಿಯಲ್ಲಿ, ಭಾರತದ ವೃಂದಾ ರಾಠಿ ಆನ್-ಫೀಲ್ಡ್ ಅಂಪೈರ್ ಆಗಿದ್ದಾರೆ. ಜಾಕ್ವೆಲಿನ್ ವಿಲಿಯಮ್ಸ್ ಮತ್ತೊಬ್ಬ ಅಂಪೈರ್ ಆಗಿರಲಿದ್ದಾರೆ. ಫೈನಲ್ ಪಂದ್ಯಕ್ಕೆ ಕಿಮ್ ಕಾಟನ್ ಮೂರನೇ ಅಂಪೈರ್ ಆಗಿ, ಭಾರತದ ಜಿ.ಎಸ್. ಲಕ್ಷ್ಮಿ ಅವರು ಮ್ಯಾಚ್ ರೆಫರಿಯಾಗಿರುತ್ತಾರೆ.
ವೃಂದಾ ರಾಠಿ ಮುಂಬೈ ವಿಶ್ವವಿದ್ಯಾಲಯದ ಪರ ಆಡಿ ಸೈ ಎನಿಸಿಕೊಂಡಿದ್ದಾರೆ. ಇವರಿಗೆ ಹಿರಿಯರ ತಂಡದಲ್ಲಿ ಆಡಲು ಅವಕಾಶಗಳು ಹೆಚ್ಚಾಗಿ ಲಭಿಸಲಿಲ್ಲ. ಆದರೆ ಇವರು ಕ್ರಿಕೆಟ್ ಅಂಗಳವನ್ನು ಬಿಟ್ಟು ದೂರ ಸರಿಯಲು ಆಗಲಿಲ್ಲ. ವೃಂದಾ ಅಂಪೈರಿಂಗ್‌ನಲ್ಲಿ ವೃತ್ತಿಜೀವನವನ್ನು ಮುಂದುವರಿಸಲು ನಿರ್ಧರಿಸಿದರು ಮತ್ತು ಇಲ್ಲಿಯವರೆಗೆ ಸಾಕಷ್ಟು ಯಶಸ್ವಿಯಾಗಿದ್ದಾರೆ.
ವಿಶ್ವಕಪ್ ಫೈನಲ್‌ನಲ್ಲಿ ಆನ್-ಫೀಲ್ಡ್‌ನಲ್ಲಿ ಅಂಪೈರ್ ಮಾಡಿದ ಎರಡನೇ ಭಾರತೀಯ ಅಂಪೈರ್ ಎಂಬ ಹೆಗ್ಗಳಿಕೆಗೆ ವೃಂದಾ ರಾಠಿ ಪಾತ್ರರಾಗಲಿದ್ದಾರೆ. ಈ ಹಿಂದೆ, ಭಾರತದ ರಾಮ್ ಬಾಬು ಗುಪ್ತಾ ಅವರು ಕೋಲ್ಕತ್ತಾದ ಈಡನ್ ಗಾರ್ಡನ್ಸ್ ಕ್ರೀಡಾಂಗಣದಲ್ಲಿ ನಡೆದ 1987 ರ ಪುರುಷರ ಏಕದಿನ ವಿಶ್ವಕಪ್ ಫೈನಲ್ ಪಂದ್ಯಕ್ಕೆ ಅಂಪೈರ್ ಆಗಿದ್ದರು.
ವೃಂದಾ ರಾಠಿ ಮೂರು ಸ್ವರೂಪಗಳಲ್ಲಿ ಅಂಪೈರಿಂಗ್ ಮಾಡಿದ ಅನುಭವ ಹೊಂದಿದ್ದಾರೆ. 2023 ರಲ್ಲಿ ಮುಂಬೈನಲ್ಲಿ ನಡೆದ ಭಾರತ ಮತ್ತು ಇಂಗ್ಲೆಂಡ್ ಮಹಿಳಾ ತಂಡಗಳ ನಡುವಿನ ಟೆಸ್ಟ್ ಪಂದ್ಯದಲ್ಲಿ ಅಂಪೈರ್ ಮಾಡಿದ ಮೊದಲ ಭಾರತೀಯ ಟೆಸ್ಟ್ ಅಂಪೈರ್ ಎಂಬ ಹೆಗ್ಗಳಿಕೆ ಇವರದ್ದಾಗಿದೆ. ಇಲ್ಲಿಯವರೆಗೆ, ವೃಂದಾ ಅವರು 20 ಏಕದಿನ, 77 ಟಿ20 ಪಂದ್ಯಗಳಲ್ಲಿ ಅಂಪೈರ್ ಆಗಿ ಕಾರ್ಯನಿರ್ವಹಿಸಿದ್ದಾರೆ.
ಎರಡನೇ ಪ್ರಶಸ್ತಿ ಕನಸಿನಲ್ಲಿ ಇಂಗ್ಲೆಂಡ್
ಇಂಗ್ಲೆಂಡ್ ಸತತ ಎರಡನೇ ಬಾರಿಗೆ ಮಹಿಳಾ ಟಿ20 ವಿಶ್ವಕಪ್ ಫೈನಲ್‌ಗೆ ಅರ್ಹತೆ ಪಡೆದಿದ್ದು, ಎರಡನೇ ಪ್ರಶಸ್ತಿಯ ಕನಸಿನಲ್ಲಿದೆ. ಇಂಗ್ಲೆಂಡ್ ಮಹಿಳಾ ತಂಡ 2009ರಲ್ಲಿ ಚಾಂಪಿಯನ್ ಪಟ್ಟವನ್ನು ಅಲಂಕರಿಸಿತ್ತು.
6 ಬಾರಿ ಪ್ರಶಸ್ತಿ ಗೆದ್ದಿರುವ ಆಸ್ಟ್ರೇಲಿಯಾ
ಆಸ್ಟ್ರೇಲಿಯಾ ಮಹಿಳಾ ತಂಡ ಟಿ20 ವಿಶ್ವಕಪ್‌ನಲ್ಲಿ ತನ್ನ ಪ್ರಾಬಲ್ಯ ಸಾಧಿಸಿದೆ. ಈ ವರೆಗೆ ಆಸೀಸ್ ಆರು ಬಾರಿ ಪ್ರಶಸ್ತಿ ಗೆದ್ದಿದೆ. 2010, 2012, 2014, 2018, 2020, 2023 ಚಾಂಪಿಯನ್ ಪಟ್ಟವನ್ನು ಅಲಂಕರಿಸಿತ್ತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications