Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಜಿಂಬಾಬ್ವೆ ಪ್ರವಾಸಕ್ಕೆ ವಿವಿಎಸ್‌ ಲಕ್ಷ್ಮಣ ಹೆಡ್‌ ಕೋಚ್‌, ಕನ್ನಡಿಗ ಸುನಿಲ್‌ ಜೋಶಿ ಬೌಲಿಂಗ್ ಕೋಚ್

ಟೀಮ್ ಇಂಡಿಯಾ ಸದ್ಯ ಇಂಗ್ಲೆಂಡ್ ಪ್ರವಾಸದಲ್ಲಿದೆ. ಈ ವೇಳೆ ಮೂರನೇ ಟಿ20 ಪಂದ್ಯ ನಾಟಿಂಗ್‌ಹ್ಯಾಮ್‌ನಲ್ಲಿ ಮಂಗಳವಾರ ನಡೆಯಲಿದೆ. ಈ ಸರಣಿಯಲ್ಲಿ ಈಗಾಗಲೇ 2 ಪಂದ್ಯಗಳು ಮುಕ್ತಾಯಗೊಂಡಿವೆ. ಇಂಗ್ಲೆಂಡ್‌ ಎರಡನೇ ಟಿ20 ಪಂದ್ಯವನ್ನು ಗೆದ್ದು ಕೊಂಡು ಸರಣಿಯಲ್ಲಿ ಮುನ್ನಡೆ ಸಾಧಿಸಿದೆ. ಈ ಸರಣಿ ಮುಗಿದ ಬಳಿಕ ಉಭಯ ದೇಶಗಳ ನಡುವಣ ಮೂರು ಪಂದ್ಯಗಳ ಏಕದಿನ ಸರಣಿ ನಡೆಯುತ್ತದೆ. ಈ ಸರಣಿಯ ಬಳಿಕ ಟೀಮ್ ಇಂಡಿಯಾ ಜಿಂಬಾಬ್ವೆ ಪ್ರವಾಸವನ್ನು ಕೈಗೊಳ್ಳಲಿದೆ. ಈ ಸರಣಿಯಲ್ಲಿ ಟೀಮ್ ಇಂಡಿಯಾದ ಹೆಡ್‌ ಕೋಚ್ ಆಗಿ ವಿವಿಎಸ್‌ ಲಕ್ಷ್ಮಣ ಜವಾಬ್ದಾರಿ ವಹಿಸಿಕೊಳ್ಳಲಿದ್ದಾರೆ. ಅಲ್ಲದೆ ಏಷ್ಯನ್‌ ಗೇಮ್ಸ್ ಕ್ರೀಡಾ ಕೂಟದಲ್ಲೂ ಇವರು ಇದೇ ಜವಾಬ್ದಾರಿ ನಿಭಾಯಿಸಲಿದ್ದಾರೆ.

ಟೀಮ್ ಇಂಡಿಯಾ ಸದ್ಯ ಬಿಡುವಿಲ್ಲದ ವೇಳಾಪಟ್ಟಿಯನ್ನು ಹೊಂದಿದೆ. ಬ್ಯಾಕ್‌ ಟು ಬ್ಯಾಕ್‌ ಸರಣಿಗಳನ್ನು ಭಾರತ ತಂಡ ಆಡುತ್ತಿದೆ. ಇಂಗ್ಲೆಂಡ್‌ನಲ್ಲಿ ಟಿ20 ಸರಣಿಗಳು ಮುಗಿದ ಬೆನ್ನಲ್ಲೆ ಟೀಮ್ ಇಂಡಿಯಾ ಮೂರು ಪಂದ್ಯಗಳ ಏಕದಿನ ಸರಣಿಯನ್ನು ಆಡಲಿದೆ. ಏಕದಿನ ಸರಣಿ ಜುಲೈ 19 ರಂದು ಮುಕ್ತಾಯಗೊಳ್ಳಲಿದೆ. ಈ ಸರಣಿ ಮುಗಿದ ಬಳಿಕ ಟೀಮ್ ಇಂಡಿಯಾ ಜಿಂಬಾಬ್ವೆ ವಿರುದ್ಧ ಜುಲೈ 23 ರಂದು ತನ್ನ ಮೊದಲ ಟಿ20 ಪಂದ್ಯ ಆಡಲಿದೆ. ಈ ಎರಡೂ ಸರಣಿಗಳ ನಡುವೆ ಹೆಚ್ಚಿನ ಸಮಯವಿಲ್ಲ. ಜಿಂಬಾಬ್ವೆ ವಿರುದ್ಧದ ಸರಣಿಗೆ ಬಿಸಿಸಿಐ ವಿವಿಎಸ್‌ ಲಕ್ಷ್ಮಣ್ ಅವರನ್ನು ಕೋಚ್ ಆಗಿ ನೇಮಿಸಿದೆ.

VVS Laxman

ಟೀಮ್ ಇಂಡಿಯಾದ ಟೆಸ್ಟ್‌ ಸ್ಪೆಷಲಿಸ್ಟ್‌ ಬ್ಯಾಟರ್ ವಿವಿಎಸ್‌ ಲಕ್ಷ್ಮಣ ಸದ್ಯ ಸೆಂಟರ್ ಆಫ್ ಎಕ್ಸಲೆನ್ಸ್ (ಸಿಒಇ) ಮುಖ್ಯಸ್ಥರಾಗಿದ್ದಾರೆ. ಇವರು ಕೆಲವು ಸರಣಿಗಳಲ್ಲಿ ಟೀಮ್ ಇಂಡಿಯಾದ ಹೆಡ್‌ ಕೋಚ್ ಆಗಿ ಸಹ ಸೇವೆ ಸಲ್ಲಿಸಿದ್ದಾರೆ. ಭಾರತ ತಂಡವು ಏಷ್ಯನ್ ಕ್ರೀಡಾಕೂಟದ ಜೊತೆಗೆ ವೆಸ್ಟ್ ಇಂಡೀಸ್ ವಿರುದ್ಧ ಸರಣಿಯನ್ನು ಒಂದೇ ಸಮಯದಲ್ಲಿ ಆಡಲಿದೆ. ಇದರರ್ಥ ಎರಡೂ ಪಂದ್ಯಾವಳಿಗಳು ಬಹುತೇಕ ಏಕಕಾಲದಲ್ಲಿ ನಡೆಯಲಿವೆ.

ಟೀಮ್ ಇಂಡಿಯಾದ ಖಾಯಂ ಕೋಚ್‌ ಗೌತಮ್ ಗಂಭೀರ್ ವೆಸ್ಟ್‌ ಇಂಡೀಸ್ ಪ್ರವಾಸದಲ್ಲಿ ಹಿರಿಯರ ತಂಡದ ತರಬೇತುದಾರರಾದರೆ, ವಿವಿಎಸ್ ಲಕ್ಷ್ಮಣ್ ಏಷ್ಯನ್ ಕ್ರೀಡಾಕೂಟಕ್ಕೆ ಟೀಮ್ ಇಂಡಿಯಾದೊಂದಿಗೆ ಹೋಗಲಿದ್ದಾರೆ. ಏಷ್ಯನ್ ಕ್ರೀಡಾಕೂಟದಲ್ಲಿ ಕ್ರಿಕೆಟ್ ಪಂದ್ಯಗಳನ್ನು ಟಿ 20 ಸ್ವರೂಪದಲ್ಲಿ ಆಡಲಾಗುತ್ತದೆ.

VVS Laxman

ಬೌಲಿಂಗ್ ಕೋಚ್ ಸುನಿಲ್ ಜೋಶಿ

ಜಿಂಬಾಬ್ವೆ ಪ್ರವಾಸಕ್ಕೆ ಲಕ್ಷ್ಮಣ್ ಬೌಲಿಂಗ್ ಕೋಚ್ ಆಗಿರುವುದು ಅಷ್ಟೇಅಲ್ಲದೆ, ಟೀಮ್ ಇಂಡಿಯಾದ ಮಾಜಿ ಸ್ಪಿನ್ ಬೌಲರ್‌ ಹಾಗೂ ಕನ್ನಡಿಗ ಸುನಿಲ್ ಜೋಶಿ ಅವರಿಗೂ ಬೌಲಿಂಗ್ ಕೋಚ್ ಜವಾಬ್ದಾರಿಯನ್ನು ನೀಡಲಾಗಿದೆ. ಅಲ್ಲದೆ ಭಾರತದ ಪರ ಆಡಿದ ಅನುಭವ ಹೊಂದಿರುವ ರಿಷಿಕೇಷ್ ಕಾನಿಟ್ಕರ್ ಬ್ಯಾಟಿಂಗ್ ಕೋಚ್ ಆಗಿರುತ್ತಾರೆ. ಈ ಬಾರಿ ಏಷ್ಯನ್ ಗೇಮ್ಸ್‌ ಕ್ರೀಡಾಕೂಟ ಜಪಾನ್‌ನಲ್ಲಿ ನಡೆಯಲಿದೆ. ವಿವಿಎಸ್‌ ಲಕ್ಷ್ಮಣ್ ಅವರ ಗರಡಿಯಲ್ಲಿ ಟೀಮ್ ಇಂಡಿಯಾ ಹೇಗೆ ಪ್ರದರ್ಶನ ನೀಡುತ್ತದೆ ಎಂಬುದೇ ಕುತೂಹಲ ಮೂಡಿಸಿದೆ.

Story first published: Tuesday, July 7, 2026, 16:51 [IST]
Other articles published on Jul 7, 2026
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+