ಒಡೆಯರ್ ಕೆಪಿಎಲ್: ಸುದೀಪ್ ರಾಕ್ ಸ್ಟಾರ್ಸ್ ಎಂಟ್ರಿ
ಬೆಂಗಳೂರು, ಜು.30: ಕರ್ನಾಟಕ ಪ್ರಿಮಿಯರ್ ಲೀಗ್ (ಕೆಪಿಎಲ್) ಟ್ವೆಂಟಿ20 ಟೂರ್ನಮೆಂಟ್ ಲಾಂಛನ, ತಂಡಗಳು, ಕೆಪಿಎಲ್ ವೇಳಾಪಟ್ಟಿ, ಪ್ರಚಾರ ವಿಡಿಯೋಗಳನ್ನು ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್ (ಕೆಎಸ್ ಸಿಎ) ಬುಧವಾರ ಪ್ರಕಟಿಸಿದೆ. ಈ ಸಮಾರಂಭದಲ್ಲಿ ಟೀಂ ಇಂಡಿಯಾ ಆಟಗಾರ ವಿನಯ್ ಕುಮಾರ್, ನಟ ಕಿಚ್ಚ ಸುದೀಪ್ ಪಾಲ್ಗೊಂಡಿದ್ದರು.
ಬೆಂಗಳೂರು ಸೇರಿದಂತೆ ಮೈಸೂರು ಹಾಗೂ ಹುಬ್ಬಳ್ಳಿಯಲ್ಲಿ ಕೆಪಿಎಲ್ 2014 ಪಂದ್ಯಾವಳಿ ನಡೆಯಲಿದೆ. ಕೆಪಿಎಲ್ ಟೂರ್ನಿ ಹೆಸರನ್ನು ಮರು ನಾಮಕರಣ ಮಾಡಲಾಗಿದ್ದು, ಕೆಎಸ್ ಸಿಎ ಮಾಜಿ ಅಧ್ಯಕ್ಷ ದಿವಂಗತ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರ ಹೆಸರನ್ನು ಇಡಲಾಗಿದೆ. ಇನ್ಮುಂದೆ ಕೆಪಿಎಲ್ ಕಪ್ 'ಒಡೆಯರ್ ಕಪ್' ಎಂದು ಕರೆಯಲ್ಪಡುತ್ತದೆ.
ಈ ಬಾರಿ ಕನ್ನಡ ಚಿತ್ರರಂಗದ ಜನಪ್ರಿಯ ಕ್ರಿಕೆಟ್ ತಂಡ, ಸೆಲೆಬ್ರಿಟಿ ಕ್ರಿಕೆಟ್ ಲೀಗ್ ಗೆದ್ದಿರುವ ಕಿಚ್ಚ ಸುದೀಪ್ ಅವರ ನಾಯಕತ್ವದ ರಾಕ್ ಸ್ಟಾರ್ಸ್ ತಂಡ ಈ ಬಾರಿ ಕೆಪಿಎಲ್ ನಲ್ಲಿ ಆಡಲಿರುವುದು ವಿಶೇಷ. ಕರ್ನಾಟಕದ ಪ್ರತಿಭಾವಂತ ಕ್ರಿಕೆಟರ್ ಗಳ ಜತೆ ನಮ್ಮ ತಂಡ ಆಡುತ್ತಿರುವುದು ಸಂತಸ ತಂದಿದೆ. ನಾವು ಉತ್ತಮ ಪೈಪೋಟಿ ನೀಡುತ್ತೇವೆ ಎಂದು ನಟ, ತಂಡದ ನಾಯಕ ಕಿಚ್ಚ ಸುದೀಪ್ ಹೇಳಿದರು. ಕೆಪಿಲ್ ಬಗ್ಗೆ ಇನ್ನಷ್ಟು ಮಾಹಿತಿ ಮುಂದೆ. ಚಿತ್ರಕೃಪೆ: ಅಪ್ರಮೇಯ ಸಿ.

ಈ ಬಾರಿ ಬೆಂಗಳೂರಿನ ತಂಡವೇ ಇಲ್ಲ
ಕಳೆದ ಬಾರಿ ಎರಡು ಬೆಂಗಳೂರು ತಂಡವಿತ್ತು. ಈ ಬಾರಿ ಬೆಂಗಳೂರಿನ ಒಂದು ತಂಡವೂ ಇಲ್ಲದಿರುವುದು ಅಚ್ಚರಿಯಾಗಿದೆ. ಜತೆಗೆ ದಾವಣಗೆರೆ ಡೈಮಂಡ್ಸ್, ಸಂಸದ ಜಯಪ್ರಕಾಶ್ ಹೆಗ್ಡೆ ನೇತೃತ್ವದ ಮಲ್ನಾಡ್ ಗ್ಲಾಡಿಯೇಟರ್ಸ್ ತಂಡವನ್ನು ಕೈಬಿಡಲಾಗಿದೆ.
* ಉಳಿದಂತೆ ಮಂಗಳೂರು ಯುನೈಟೆಡ್, ಬೆಳಗಾವಿ ಪ್ಯಾಂಥರ್ಸ್, ಬಿಜಾಪುರ್ ಬುಲ್ಸ್ ಹಳೆ ತಂಡಗಳು ಮರಳಿವೆ.
* ಹೊಸ ತಂಡಗಳು: ಟೀಮ್ ಮೈಸೂರು, ಹುಬ್ಬಳ್ಳಿ ಟೈಗರ್ಸ್, ಬಳ್ಳಾರಿ ಟಸ್ಕರ್ಸ್, ರಾಕ್ ಸ್ಟಾರ್ಸ್(ಕಿಚ್ಚ ಸುದೀಪ್ ಚಿತ್ರ ತಂಡ). 2009ರಲ್ಲಿ ಕೊನೆ ಬಾರಿಗೆ ಕೆಪಿಎಲ್ ಆಡಲಾಗಿತ್ತು.

ಕೆಪಿಎಲ್ ವೇಳಾಪಟ್ಟಿ, ಲೋಗೋ ಪ್ರಕಟ
* ಆಗಸ್ಟ್ 28 ರಿಂದ ಸೆಪ್ಟೆಂಬರ್ 3 : ಮೈಸೂರು
* ಸೆಪ್ಟೆಂಬರ್ 5 ರಿಂದ 7 : ಬೆಂಗಳೂರು
* ಸೆಪ್ಟೆಂಬರ್ 9 ರಿಂದ 12 : ಹುಬ್ಬಳ್ಳಿ
* ಆಗಸ್ಟ್ 7 ರಂದು ಆಟಗಾರರ ಹರಾಜು ಪ್ರಕ್ರಿಯೆ ನಡೆಯಲಿದೆ.
* ಪ್ರತಿ ನಿತ್ಯ ಎರಡು ಪಂದ್ಯಗಳು ನಡೆಯಲಿವೆ. ಇಂಡಿಯನ್ ಪ್ರಿಮಿಯರ್ ಲೀಗ್ ಮಾದರಿಯಲ್ಲಿ 4 ಗಂಟೆ ಹಾಗೂ ರಾತ್ರಿ 8 ಗಂಟೆಗೆ ಪಂದ್ಯ ನಡೆಯುವ ಸಾಧ್ಯತೆಯಿದೆ.

ಹೊಸ ತಂಡಗಳು ಹಾಗೂ ಮಾಲೀಕರ ವಿವರ
* ಮಂಗಳೂರು ಯುನೈಟೆಡ್: ಫಿಜಾ ಡೆವಲಪರ್ಸ್ ಹಾಗೂ ಇಂಟರ್ ಟ್ರೇಡ್ ಪ್ರೈ.ಲಿ
* ಬೆಳಗಾವಿ ಪ್ಯಾಂಥರ್ಸ್: ಸುಭಾಷ್ ಎಂಟರ್ ಪ್ರೈಸಸ್ ಹಾಗೂ ಸಂಗೀತಾ ಕನ್ಸೋರ್ಟಿಯಂ
* ಬಿಜಾಪುರ ಬುಲ್ಸ್: ವಿವಿಡ್ ಕ್ರಿಯೇಷನ್ಸ್
* ಟೀಂ ಮೈಸೂರು: ಎನ್ ರಂಗರಾವ್ ಅಂಡ್ ಸನ್ಸ್
* ಹುಬ್ಳಿ ಟೈಗರ್ಸ್ : ಸುಶೀಲ್ ಜಿಂದಾಲ್
* ಬಳ್ಳಾರಿ ಟಸ್ಕರ್ಸ್: ಭಾಗ್ಯಲಕ್ಷ್ಮಿ ಹಾಗೂ ವೆಂಕಟೇಶ್ ರೆಡ್ಡಿ
* ರಾಕ್ ಸ್ಟಾರ್ಸ್ : ಸುದೀಪ್

ಮಂತ್ರಿ ಕೆಪಿಎಲ್ ಈಗ ಒಡೆಯರ್ ಕೆಪಿಎಲ್
ಈ ಮುಂಚೆ ಮಂತ್ರಿ ಕೆಪಿಎಲ್ ಎಂದು ಕರೆಯಲ್ಪಡುತ್ತಿದ್ದ ಕರ್ನಾಟಕ ಪ್ರಿಮಿಯರ್ ಲೀಗ್ ಟ್ವಿಂಟಿ20 ಕ್ರಿಕೆಟ್ ಟೂರ್ನಿ ಇನ್ಮುಂದೆ ಒಡೆಯರ್ ಕೆಪಿಎಲ್ ಎಂದೆನಿಸಲಿದೆ. ಮಂಗಳೂರು ಯುನೈಟೆಡ್ ಹಾಲಿ ಚಾಂಪಿಯನ್ ಆಗಿದ್ದಾರೆ. ಮೊದಲ ಸೀಸನ್ ನಲ್ಲಿ ಬೆಳಗಾವಿ ಪ್ಯಾಂಥರ್ಸ್ ತಂಡ ಸೋಲಿಸಿ ಬೆಂಗಳೂರು ಪ್ರಾವಿಡೆಂಟ್(ಗ್ರಾಮೀಣ) ತಂಡ ಕಪ್ ಎತ್ತಿತ್ತು. ಬೆಂಗಳೂರು ಗ್ರಾಮೀಣ ತಂಡ ಎರಡು ಸೀಸನ್ ನಲ್ಲೂ ಸೆಮಿಫೈನಲ್ ತಲುಪಿತ್ತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications