Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Ind Vs SL: ಹೇಗಿರುತ್ತೆ ವಾಂಖೆಡೆ ಪಿಚ್? ಅಬ್ಬರಿಸುತ್ತಾ ಭಾರತದ ಬ್ಯಾಟಿಂಗ್ ಪಡೆ

ಪ್ರಸಕ್ತ ಏಕದಿನ ವಿಶ್ವಕಪ್ ನಲ್ಲಿ ಟೀಮ್ ಇಂಡಿಯಾ ಭರ್ಜರಿ ಪ್ರದರ್ಶನ ನೀಡುತ್ತಿದ್ದು, ಅಜೇಯ ಓಟವನ್ನು ಮುಂದುವರೆಸಿದೆ. ಈಗಾಗಲೇ ಟೀಮ್ ಇಂಡಿಯಾ ಆಡಿರುವ 6 ಪಂದ್ಯಗಳನ್ನೂ ಗೆದ್ದು ಬೀಗಿದೆ. ನವೆಂಬರ್ 2 ಗುರುವಾರದಂದು ಭಾರತ ಮುಂದಿನ ಪಂದ್ಯವನ್ನು ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಶ್ರೀಲಂಕಾ ವಿರುದ್ಧ ಆಡಲಿದೆ.

ಈ ಮೈದಾನ ಶ್ರೀಲಂಕಾ ವಿರುದ್ಧದ ಆಟ ಎಂದರೆ ನೆನಪಾಗುವುದು 2011 ಏಕದಿನ ವಿಶ್ವಕಪ್ ಫೈನಲ್. ಇದೇ ಮೈದಾನದಲ್ಲಿ ಎಂಎಸ್ ಧೋನಿ 12 ವರ್ಷಗಳ ಹಿಂದೆ ಇದೇ ತಂಡದ ವಿರುದ್ಧ ಸಿಕ್ಸರ್ ಬಾರಿಸುವ ಮೂಲಕ 28 ವರ್ಷಗಳ ನಂತರ ಭಾರತವನ್ನು ವಿಶ್ವ ಚಾಂಪಿಯನ್ ಮಾಡಿದ್ದರು. ಮತ್ತೊಮ್ಮೆ ಎರಡೂ ತಂಡಗಳು ಮುಖಾಮುಖಿಯಾಗಲಿವೆ.

Wankhede Stadium Pitch Report for World Cups 33rd Match Between IND vs SL

ಆಸ್ಟ್ರೇಲಿಯಾ, ಅಫ್ಘಾನಿಸ್ತಾನ, ಪಾಕಿಸ್ತಾನ, ಬಾಂಗ್ಲಾದೇಶ, ನ್ಯೂಜಿಲೆಂಡ್ ಮತ್ತು ಇಂಗ್ಲೆಂಡ್ ತಂಡಗಳನ್ನು ಸೋಲಿಸಿದ ಭಾರತ ತಂಡ ಇದೀಗ ಮುಂಬೈ ತಲುಪಿದೆ. ಶ್ರೀಲಂಕಾ ವಿರುದ್ಧವೂ ಗೆಲುವಿನ ಓಟ ಮುಂದುವರಿಸಲು ಭಾರತ ಬಯಸಿದೆ. ಮತ್ತೊಂದೆಡೆ, ಅಫ್ಘಾನಿಸ್ತಾನ ವಿರುದ್ಧ ಸೋತ ನಂತರ, ಶ್ರೀಲಂಕಾ ಮತ್ತೆ ಗೆಲುವಿನ ಟ್ರ್ಯಾಕ್‌ಗೆ ಮರಳಲು ಪ್ರಯತ್ನಿಸುತ್ತದೆ. ಹಾಗಾದರೆ ಈ ರೋಚಕ ಪಂದ್ಯದಲ್ಲಿ ಪಿಚ್ ಹೇಗಿರಲಿದೆ ಎಂಬ ಬಗ್ಗೆ ಪ್ರಶ್ನೆಗಳು ಮೂಡಿವೆ.

ರನ್ ಹೊಳೆ ಹರಿಯುವ ಸಾಧ್ಯತೆ

ಮುಂಬೈನ ವಾಂಖೆಡೆ ಸ್ಟೇಡಿಯಂನ ಪಿಚ್ ಬ್ಯಾಟಿಂಗ್ ಸ್ನೇಹಿಯಾಗಿದೆ. ಇಲ್ಲಿ ಬ್ಯಾಟ್ಸ್‌ಮನ್‌ಗಳು ಸಾಕಷ್ಟು ಸಹಾಯ ಪಡೆಯುತ್ತಾರೆ. ಉತ್ತಮ ಬೌನ್ಸ್‌ನಿಂದಾಗಿ ಚೆಂಡು ಸರಿಯಾಗಿ ಬ್ಯಾಟ್‌ಗೆ ಬಡಿಯುತ್ತದೆ. ಮುಂಬೈನಲ್ಲಿ ಬೌಲರ್‌ಗಳು ಸಾಮಾನ್ಯವಾಗಿ ಹೆಣಗಾಡುವುದನ್ನು ಕಾಣಬಹುದು. ಚಿಕ್ಕ ಮೈದಾನವಾದ್ದರಿಂದ ಸಾಕಷ್ಟು ಬೌಂಡರಿ, ಸಿಕ್ಸರ್ ಗಳು ಕಾಣಸಿಗುತ್ತವೆ. ಈ ಕೆಂಪು ಮಣ್ಣಿನ ಪಿಚ್‌ನಲ್ಲಿ ಸ್ಪಿನ್ನರ್‌ಗಳಿಗೂ ಸಹಾಯ ಸಿಗಲಿದೆ. ಬೌನ್ಸ್ ನಿಂದಾಗಿ ವೇಗದ ಬೌಲರ್ ಗಳಿಗೂ ಸ್ವಲ್ಪ ಅನುಕೂಲವಿದ್ದು, ವೇಗಿಗಳು ಬೇಗನೆ ಸ್ವಿಂಗ್ ಸಹ ಮಾಡಬಲ್ಲರು.

ಈ ಮೈದಾನದಲ್ಲಿ ಇದುವರೆಗೆ ಒಟ್ಟು 31 ಏಕದಿನ ಪಂದ್ಯಗಳು ನಡೆದಿದ್ದು, ಈ ಪೈಕಿ 16ರಲ್ಲಿ ಮೊದಲು ಬ್ಯಾಟ್ ಮಾಡಿದ ತಂಡ ಹಾಗೂ 15ರಲ್ಲಿ ಎರಡನೇ ಬಾರಿಗೆ ಬ್ಯಾಟಿಂಗ್ ಮಾಡಿದ ತಂಡ ಗೆದ್ದಿದೆ. ಟಾಸ್ ಗೆದ್ದ ನಾಯಕ ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಬಹುದು. ಇಲ್ಲಿ ಮೊದಲ ಇನಿಂಗ್ಸ್ ಸರಾಸರಿ ಸ್ಕೋರ್ 243 ಮತ್ತು ಎರಡನೇ ಇನ್ನಿಂಗ್ಸ್ 201 ಆಗಿದೆ. ಇಲ್ಲಿಯವರೆಗೆ, ಮುಂಬೈನಲ್ಲಿ ಎರಡು ವಿಶ್ವಕಪ್ ಪಂದ್ಯಗಳು ನಡೆದಿವೆ ಮತ್ತು ಎರಡೂ ಹೈ ಸ್ಕೋರ್ ಪಂದ್ಯಗಳಾಗಿವೆ. ಇಂತಹ ಪರಿಸ್ಥಿತಿಯಲ್ಲಿ ಭಾರತ ಮತ್ತು ಶ್ರೀಲಂಕಾ ನಡುವೆ ಹೆಚ್ಚಿನ ಸ್ಕೋರಿಂಗ್ ಪಂದ್ಯವನ್ನೂ ಕಾಣಬಹುದು.

Story first published: Wednesday, November 1, 2023, 16:54 [IST]
Other articles published on Nov 1, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+