For Quick Alerts
ALLOW NOTIFICATIONS  
For Daily Alerts
 

ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ರವಿ ಶಾಸ್ತ್ರಿ ಗೌರವ

ಮುಂಬೈನ ಐತಿಹಾಸಿಕ ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಅದೆಷ್ಟೋ ದಿಗ್ಗಜ ಕ್ರಿಕೆಟ್‌ ಆಟಗಾರರ ಸ್ಟ್ಯಾಂಡ್‌ಗಳನ್ನು ನಿರ್ಮಿಸಲಾಗಿದೆ. ಇದೇ ಮೈದಾನದಲ್ಲಿ ಆಡಿದ ಅದೆಷ್ಟೋ ಆಟಗಾರರು ದೇಶಕ್ಕಾಗಿ ಆಡಿ ಕೀರ್ತಿ ತಂದಿದ್ದಾರೆ. ಸ್ಟಾರ್‌ ಆಟಗಾರರ ಸ್ಟ್ಯಾಂಡ್‌ಗಳು ಈಗಾಗಲೇ ವಾಂಖೆಡೆಯಲ್ಲಿ ರಾರಾಜಿಸುತ್ತಿವೆ. ದಿಗ್ಗಜ ಸುನಿಲ್ ಗವಾಸ್ಕರ್, ಸಚಿನ್ ತೆಂಡೂಲ್ಕರ್ ಹಾಗೂ ಟಿ20 ವಿಶ್ವಕಪ್‌ನಲ್ಲಿ ಭಾರತಕ್ಕೆ ಕೀರ್ತಿ ತಂದಿರುವ ರೋಹಿತ್ ಶರ್ಮಾ ಸೇರಿದಂತೆ ಹಲವು ಆಟಗಾರ ಸ್ಟ್ಯಾಂಡ್‌ಗಳು ಮುಂಬೈನ ವಾಂಖೆಡೆ ಮೈದಾನದಲ್ಲಿವೆ. ಈಗ ಈ ಪಟ್ಟಿಗೆ ಮತ್ತೊಂದು ಹೆಸರು ಸೇರ್ಪಡೆಯಾಗಲಿದೆ.

ಫೆಬ್ರವರಿ 27ರಂದು ಮುಂಬೈ ಕ್ರಿಕೆಟ್ ಅಸೋಸಿಯೇಷನ್ ಅಪೆಕ್ಸ್ ಕೌನ್ಸಿಲ್ ಸಭೆ ನಡೆಯಿತು. ಈ ಸಭೆಯಲ್ಲಿ ಮಹತ್ವದ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಈ ಸಭೆಯಲ್ಲಿ ಕೈ ಗೊಂಡ ನಿರ್ಣಯದಂತೆ ಪ್ರೆಸ್ ಬಾಕ್ಸ್‌ನ ಕೆಳಗಿನ ಲೆವೆಲ್ 1 ಸ್ಟ್ಯಾಂಡ್‌ಗೆ ಮಾಜಿ ಭಾರತೀಯ ಆಲ್‌ರೌಂಡರ್ ಮತ್ತು ಕೋಚ್ ರವಿ ಶಾಸ್ತ್ರಿ ಅವರ ಹೆಸರು ಇಡಲು ನಿರ್ಧರಿಸಲಾಗಿದೆ.

Wankhede Stadium

ಮುಂಬೈ ಕ್ರಿಕೆಟ್‌ ಪರ ಆಡಿದ ಸ್ಟಾರ್‌ ಆಟಗಾರರ ಬಲವಾದ ಅಡಿಪಾಯದ ಮೇಲೆ ನಿಂತಿದೆ. ಇವರು ಸ್ಥಿರ ಪ್ರದರ್ಶನ ನೀಡಿ ರಾಜ್ಯ ಹಾಗೂ ದೇಶಕ್ಕೆ ಕೀರ್ತಿ ತಂದ ಆಟಗಾರರನ್ನು ಗೌರವಿಸುತ್ತದೆ. ಇದೇ ಪರಂಪರೆಯನ್ನು ಮುಂದುವರಿಸುತ್ತಿದ್ದು, ಪ್ರೆಸ್ ಬಾಕ್ಸ್‌ನ ಕೆಳಗಿನ ಲೆವೆಲ್ 1 ಸ್ಟ್ಯಾಂಡ್‌ಗೆ ರವಿಶಾಸ್ತ್ರಿ ಅವರ ಹೆಸರನ್ನು ಇಡಲು ನಿರ್ಧರಿಸಲಾಗಿದೆ. ಇವರು ಭಾರತೀಯ ಕ್ರೀಡೆಗೆ ಆಟಗಾರ, ನಾಯಕ, ಕೋಚ್‌ ಆಗಿ ಅಪಾರ ಸೇವೆ ಸಲ್ಲಿಸಿದ್ದಾರೆ. ಇವರ ಕೊಡುಗೆಗಳನ್ನು ಗೌರವಿಸಲಾಗುತ್ತಿದೆ ಎಂದು ಎಂಸಿಎ ಅಧ್ಯಕ್ಷ ಅಜಿಂಕ್ಯ ನಾಯಕ್ ತಿಳಿಸಿದ್ದಾರೆ.

ಎಂಸಿಎ ಕ್ರೀಡಾಂಗಣದ ಮೂರು ದ್ವಾರಗಳನ್ನು ದಂತಕಥೆ ಆಟಗಾರರಿಗೆ ಅರ್ಪಿಸಲು ನಿರ್ಧರಿಸಿದೆ. ದ್ವಾರಗಳಿಗೆ ದಿಲೀಪ್ ಸರ್ದೇಸಾಯಿ, ಏಕನಾಥ್ ಸೋಲ್ಕರ್ ಮತ್ತು ಡಯಾನಾ ಎಡುಲ್ಜಿ ಅವರ ಹೆಸರನ್ನು ಇಡಲು ತೀರ್ಮಾನಿಸಲಾಗಿದೆ. ಈ ಮೂಲಕ ಮೈದಾನದಲ್ಲಿ ಬೆವರು ಹರಿಸಿದ ಆಟಗಾರರಿಗೆ ಗೌರವ ಸೂಚಿಸುವುದು ನಮ್ಮ ಕರ್ತವ್ಯವಾಗಿದೆ ಎಂದು ಎಂಸಿಎ ಅಧ್ಯಕ್ಷ ಅಜಿಂಕ್ಯ ನಾಯಕ್ ಹೇಳಿದ್ದಾರೆ.

Wankhede Stadium

ರವಿ ಶಾಸ್ತ್ರೀ ಸಾಧನೆ

ಟೀಮ್ ಇಂಡಿಯಾದ ಪರ ರವಿ ಶಾಸ್ತ್ರಿ 80 ಟೆಸ್ಟ್‌ ಹಾಗೂ 150 ಏಕದಿನ ಪಂದ್ಯಗಳನ್ನು ಆಡಿದ್ದಾರೆ. ಈ ವೇಳೆ ಇವರು ಟೆಸ್ಟ್‌ನಲ್ಲಿ 11 ಶತಕ ಹಾಗೂ 12 ಅರ್ಧಶತಕ ಸೇರಿದಂತೆ ಒಟ್ಟು 3830 ರನ್‌ ಕಲೆ ಹಾಕಿದ್ದಾರೆ. ಅಲ್ಲದೆ 151 ವಿಕೆಟ್‌ ಪಡೆದಿದ್ದಾರೆ. ಇನ್ನು ಏಕದಿನ ಕ್ರಿಕೆಟ್‌ನಲ್ಲಿ 4 ಶತಕ ಹಾಗೂ 18 ಅರ್ಧಶತಕ ನೆರವಿನಿಂದ 3108 ರನ್‌ ಬಾರಿಸಿದ್ದು, 129 ವಿಕೆಟ್‌ ಕಬಳಿಸಿದ್ದಾರೆ. ಇವರು 2017 ರಿಂದ 2021 ರವರೆಗೆ ಭಾರತ ತಂಡದ ಮುಖ್ಯ ತರಬೇತುದಾರರಾಗಿಯೂ ಸೇವೆ ಸಲ್ಲಿಸಿದರು. ಅವರ ಅವಧಿಯಲ್ಲಿ, ಭಾರತ 2019 ರ ಏಕದಿನ ವಿಶ್ವಕಪ್‌ನ ಸೆಮಿಫೈನಲ್ ತಲುಪಿತು. ಶಾಸ್ತ್ರಿ ಅವರ ಮುಂದಾಳತ್ವದಲ್ಲಿ ಭಾರತ ಮೊದಲ ಬಾರಿಗೆ ಆಸ್ಟ್ರೇಲಿಯಾದಲ್ಲಿ ಟೆಸ್ಟ್‌ ಸರಣಿ ಜಯ ಸಾಧಿಸಿತ್ತು.

Story first published: Saturday, February 28, 2026, 11:41 [IST]
Other articles published on Feb 28, 2026
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+