ಧೋನಿ ಜೊತೆಗೆ ಇನ್ನಷ್ಟು ಕಾಲ ಕ್ರಿಕೆಟ್ ಆಡಲು ಬಯಸಿದ್ದೆ: ಕೆಎಲ್ ರಾಹುಲ್

ಈ ಬಾರಿಯ ಐಪಿಎಲ್ ಆವೃತ್ತಿಯಲ್ಲಿ ಕನ್ನಡಿಗ ಕೆಎಲ್ ರಾಹುಲ್ ಕಿಂಗ್ಸ್ XI ಪಂಜಾಬ್ ತಂಡವನ್ನು ಮುನ್ನಡೆಸಲು ಸಜ್ಜಾಗಿದ್ದಾರೆ. ಕರ್ನಾಟಕದ ಸ್ಟೈಲಿಶ್ ಆಟಗಾರ ಪಂಜಾಬ್ ತಂಡಕ್ಕೆ ಈವರೆಗೆ ಐಪಿಎಲ್‌ನಲ್ಲಿ ಸಾಧಿಸಲು ಅಸಾಧ್ಯವಾಗಿರುವ ಟ್ರೋಫಿಯನ್ನು ಗೆಲ್ಲುವ ಭರವಸೆಯಲ್ಲಿದ್ದಾರೆ. ಈಗಾಗಲೇ ಯುಎಇಯನ್ನು ಸೇರಿಕೊಂಡಿರುವ ಕೆಎಲ್ ರಾಹುಲ್ ಪಡೆ ಸದ್ಯ ಕ್ವಾರಂಟೈನ್‌ನಲ್ಲಿದೆ.
ಟೀಮ್ ಇಂಡಿಯಾ ಮಾಜಿ ನಾಯಕ ಎಂಎಸ್ ಧೋನಿ ವಿದಾಯ ಹೇಳಿದ ವಿವಾರವಾಗಿ ಕೆಎಲ್ ರಾಹುಲ್ ಮಾತಾಡಿದ್ದು ಅವರಿಂದ ತಾನು ಕಲಿತ ಸಂಗತಿಯನ್ನು ಹಂಚಿಕೊಂಡಿದ್ದಾರೆ. ಮಾತ್ರವಲ್ಲ ಟೀಮ್ ಇಂಡಿಯಾದಲ್ಲಿ ಧೊನಿಯ ಜೊತೆಯಲ್ಲಿ ತಾನು ಇನ್ನೂ ಸಾಕಷ್ಟು ಕಾಲ ಕ್ರಿಕೆಟ್ ಆಡಲು ಬಯಸಿದ್ದೆ ಎಂದು ರಾಹುಲ್ ಹೇಳಿದ್ದಾರೆ.
ಈ ಸಂದರ್ಭದಲ್ಲಿ ಕೆಎಲ್ ರಾಹುಲ್ ಮಾಜಿ ನಾಯಕ ಎಂಎಸ್ ಧೋನಿಯ ಶಾಂತತೆಯನ್ನು "ಹುಚ್ಚುತನ" ಎಂದು ಕರೆಯುವ ಮೂಲಕ ಅವರು ವಿವರಿಸಿದ್ದಾರೆ. ಡ್ರೆಸ್ಸಿಂಗ್ ರೂಮ್‌ನಲ್ಲಿ ಧೋನಿಯ ಉಪಸ್ಥಿತಿ ತಂಡಕ್ಕೆ ಅಮೂಲ್ಯವಾದದ್ದು ಎಂದು ಹೇಳಿದ್ದಾರೆ.
ಧೋನಿ ತಮ್ಮ ಶಾಂತ ಮನಸ್ಸು ಹಾಗೂ ನಂಬಿಕೆಯ ಮೂಲಕ ಪಂದ್ಯ ಗೆಲ್ಲಿಸಬಲ್ಲ ಆಟಗಾರರ ಬೆಂಬಲಕ್ಕೆ ನಿಲ್ಲುವಂತವರು. ವಿರಾಟ್ ಕೊಹ್ಲಿ ಮುನ್ನಡೆಸುವ ರೀತಿಯಲ್ಲಿ ಹುಡುಗರು ಉತ್ತಮ ಅತ್ಯುತ್ತಮವಾಗಬೇಕುಂದು ಬಯಸುವವರಾಗಿದ್ದಾರೆ. ರೋಹಿತ್ ಯಾವಾಗಲೂ ಬದ್ಧತೆ ಹಾಗೂ ಆಟಗಾರರನ್ನು ಬೆಂಬಲಿಸುವ ಮನಸ್ಥಿತಿಯವರಾಗಿದ್ದಾರೆ ಎಂದು ಕೆಎಲ್ ರಾಹುಲ್ ವಿವರಿಸಿದ್ದಾರೆ.
ಟೀಮ್ ಇಂಡಿಯಾದ ಮಾಜಿ ನಾಯಕ ಎಂಎಸ್ ಧೋನಿ ಆಗಸ್ಟ್ 15 ರಂದು ಎಲ್ಲಾ ಮಾದರಿಯ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯವನ್ನು ಘೋಷಿಸಿದ್ದರು. ಟೀಮ್ ಇಂಡಿಯಾಗೆ ಮರಳಬಹುದು ಎಂಬ ನಿರೀಕ್ಷೆಯಲ್ಲಿದ್ದ ಕ್ರಿಕೆಟಿಗರು ಹಾಗೂ ಅಭಿಮಾನಿಗಳಿಗೆ ಧೋನಿ ಈ ಮೂಲಕ ಆಘಾತವನ್ನು ನೀಡಿದ್ದರು. ಆದರೆ ಧೋನಿ ಐಪಿಎಲ್‌ನಲ್ಲಿ ಕಣಕ್ಕಿಳಿಯುತ್ತಿದ್ದಾರೆ
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications