For Quick Alerts
ALLOW NOTIFICATIONS  
For Daily Alerts
 

ವಿರಾಟ್‌ ಕೊಹ್ಲಿ ಶತಕಗಳ ದಾಖಲೆ ಸರಿಗಟ್ಟಿದ ಡೇವಿಡ್‌ ವಾರ್ನರ್‌!

Warner equals Kohli, completes 16 ODI tons in 110 innings

ನಾಟಿಂಗ್‌ಹ್ಯಾಮ್‌, ಜೂನ್‌ 20: ಪ್ರಸಕ್ತ ವಿಶ್ವಕಪ್‌ ಟೂರ್ನಿಯಲ್ಲಿ ಅಮೋಘ ಪ್ರದರ್ಶನ ನೀಡುತ್ತಿರುವ ಆಸ್ಟ್ರೇಲಿಯಾ ತಂಡದ ಆರಂಭಿಕ ಬ್ಯಾಟ್ಸ್‌ಮನ್‌ ಡೇವಿಡ್‌ ವಾರ್ನರ್‌, ಗುರುವಾರ ನಡೆದ ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ಸಿಡಿಲಬ್ಬರದ ಶತಕ ದಾಖಲಿಸಿ ಟೀಮ್‌ ಇಂಡಿಯಾದ ನಾಯಕ ವಿರಾಟ್‌ ಕೊಹ್ಲಿ ಅವರ ದಾಖಲೆಯನ್ನು ಸರಿಗಟ್ಟಿದ್ದಾರೆ.

ವಿಶ್ವಕಪ್‌ ವೇಳಾಪಟ್ಟಿ / ಮುಖಾಮುಖಿ ದಾಖಲೆಗಳು / ಅಂಕಪಟ್ಟಿ

ಬಾಂಗ್ಲಾದೇಶ ವಿರುದ್ಧ 147 ಎಸೆತಗಳಲ್ಲಿ 14 ಫೋರ್‌ ಮತ್ತು 5 ಮನಮೋಹ ಸಿಕ್ಸರ್‌ಗಳನ್ನು ಒಳಗೊಂಡ 166 ರನ್‌ಗಳನ್ನು ಚೆಚ್ಚಿದ ವಾರ್ನರ್‌, ಏಕದಿನ ಕ್ರಿಕೆಟ್‌ ವೃತ್ತಿ ಬದುಕಿನಲ್ಲಿ ತಮ್ಮ 16ನೇ ಶತಕ ಪೂರೈಸಿದರು. ಆಸ್ಟ್ರೇಲಿಯಾ ಪರ 110 ಇನಿಂಗ್ಸ್‌ಗಳಲ್ಲಿ 16 ಶತಕಗಳನ್ನು ಸಿಡಿಸಿರುವ ವಾರ್ನರ್‌, ಈ ಮೂಲಕ ಒಟಿಐ ಕ್ರಿಕೆಟ್‌ನಲ್ಲಿ ಅತ್ಯಂತ ಕಡಿಮೆ ಇನಿಂಗ್ಸ್‌ಗಳಲ್ಲಿ 16 ಶತಕಗಳನ್ನು ದಾಖಲಿಸಿದ 2ನೇ ಬ್ಯಾಟ್ಸ್‌ಮನ್‌ ಎಂಬ ದಾಖಲೆಯನ್ನು ಕೊಹ್ಲಿ ಜೊತೆಗೆ ಹಂಚಿಕೊಂಡಿದ್ದಾರೆ.

ದಕ್ಷಿಣ ಆಫ್ರಿಕಾದ ಅನುಭವಿ ಬ್ಯಾಟ್ಸ್‌ಮನ್‌ ಹಶೀಮ್‌ ಆಮ್ಲಾ ಮಾತ್ರವೇ ಈ ಪಟ್ಟಿಯಲ್ಲಿ ಮುಂದಿದ್ದು, ಕೇವಲ 94 ಇನಿಂಗ್ಸ್‌ಗಳಲ್ಲಿ 16 ಶತಕಗಳನ್ನು ಸಿಡಿಸುವ ಮೂಲಕ ಈ ವಿಭಾಗದಲ್ಲಿನ ವಿಶ್ವದಾಖಲೆ ಹೊಂದಿದ್ದಾರೆ.

ಪ್ರಸಕ್ತ ವಿಶ್ವಕಪ್‌ನಲ್ಲಿ ವಾರ್ನರ್‌ ದಾಖಲಿಸಿದ ಎರನೇ ಶತಕ ಇದಾಗಿದ್ದು, ಟೌನ್ಟನ್‌ನಲ್ಲಿ ಪಾಕಿಸ್ತಾನ ಎದುರು ಮೊದಲ ಶತಕ ಬಾರಿಸಿದ್ದರು. ಇದಕ್ಕೂ ಮುನ್ನ ಭಾರತ ವಿರುದ್ಧದ ಪಂದ್ಯದಲ್ಲಿ ಅರ್ಧಶತಕ ದಾಖಲಿಸಿದ್ದ ವಾರ್ನರ್‌, ಇದಕ್ಕೂ ಮೊದಲು ಅಫಘಾನಿಸ್ತಾನ ಎದುರು ಅಜೇಯ 89 ರನ್‌ಗಳನ್ನು ಚಚ್ಚಿದ್ದರು.

ಬಾಲ್‌ ಟ್ಯಾಂಪರಿಂಗ್‌ನಲ್ಲಿ ಸಿಕ್ಕಿಬಿದ್ದು ಕ್ರಿಕೆಟ್‌ ಆಸ್ಟ್ರೇಲಿಯಾದಿಂದ 1 ವರ್ಷ ನಿಷೇಧ ಶಿಕ್ಷೆಗೆ ಗುರಿಯಾಗಿದ್ದ ವಾರ್ನರ್‌, ವಿಶ್ವಕಪ್‌ಗೂ ಮುನ್ನ ನಿಷೇಧ ಶಿಕ್ಷೆಯಿಂದ ಹೊರಬಂದು ತಂಡಕ್ಕೆ ಆಯ್ಕೆಯಾಗಿದ್ದರು. ಅಲ್ಲದೆ ಪ್ರಸಕ್ತ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟಿ20 ಟೂರ್ನಿಯಲ್ಲಿ 12 ಪಂದ್ಯಗಳಿಂದ 692 ರನ್‌ಗಳನ್ನು ಬಾರಿಸಿ ಅಬ್ಬರಿಸಿದ್ದರು.

ಇದೇ ವೇಳೆ ಮತ್ತೊಂದು ವಿಶ್ವ ದಾಖಲೆ ವಾರ್ನರ್‌ ಮುಡಿಗೇರಿದ್ದು, ಏಕದಿನ ಕ್ರಿಕೆಟ್‌ ವಿಶ್ವಕಪ್‌ ಇತಿಹಾಸದಲ್ಲಿ ಎರಡು ಬಾರಿ 150ಕ್ಕೂ ಹೆಚ್ಚು ರನ್‌ಗಳನ್ನು ಗಳಿಸಿದ ವಿಶ್ವದ ಮೊದಲ ಆಟಗಾರ ಎಂಬ ಕೀರ್ತಿ ಪಡೆದಿದ್ದಾರೆ.

Story first published: Thursday, June 20, 2019, 21:33 [IST]
Other articles published on Jun 20, 2019
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+