Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಐಪಿಎಲ್: 500 ಪ್ಲಸ್ ರನ್, ಕೊಹ್ಲಿ ದಾಖಲೆ ಮುರಿದ ವಾರ್ನರ್

Warner lead the list of Players scoring 500+ in an IPL season most times

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನ ಪ್ರತಿ ಸೀಸನ್ ನಲ್ಲಿ ಅತಿ ಹೆಚ್ಚು ರನ್ ಗಳಿಕೆ ಪಟ್ಟಿಯಲ್ಲಿ ಕಾಣಿಸಿಕೊಳ್ಳುವ ಹೆಸರೆಂದರೆ ಡೇವಿಡ್ ವಾರ್ನರ್ ಎಂದರೆ ತಪ್ಪಾಗಲಾರದು. ಐಪಿಎಲ್ 2020ರಲ್ಲೂ ವಾರ್ನರ್ ತಮ್ಮ ಲಯ ಕಂಡುಕೊಂಡು 500 ಪ್ಲಸ್ ರನ್ ಚೆಚ್ಚಿದ್ದಾರೆ. ಈ ಮೂಲಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ವಿರಾಟ್ ಕೊಹ್ಲಿ ದಾಖಲೆಯನ್ನು ಮುರಿದಿದ್ದಾರೆ.

ಸನ್ ರೈಸರ್ಸ್ ಹೈದರಾಬಾದ್ ತಂಡದ ನಾಯಕ ಡೇವಿಡ್ ವಾರ್ನರ್ ಅವರು 6ನೇ ಬಾರಿಗೆ ಐಪಿಎಲ್ ನಲ್ಲಿ 500 ಪ್ಲಸ್ ರನ್ ಕಲೆ ಹಾಕಿದ್ದಾರೆ. ಐಪಿಎಲ್ 2020ರಲ್ಲಿ 14 ಪಂದ್ಯಗಳಿಂದ 460ರನ್ ಗಳಿಸಿರುವ ಕೊಹ್ಲಿ ಅವರು ಇನ್ನು 40 ರನ್ ಗಳಿಸಿದರೆ ವಾರ್ನರ್ ಸಮಕ್ಕೆ ನಿಲ್ಲಲಿದ್ದಾರೆ.

ಐಪಿಎಲ್ ಆರೆಂಜ್ ಪಟ್ಟಿಯಲ್ಲಿ ಕಿಂಗ್ಸ್ ಎಲೆವನ್ ಪಂಜಾಬ್ ತಂಡದ ನಾಯಕ ಕೆಎಲ್ ರಾಹುಲ್ ಅವರು 14 ಪಂದ್ಯಗಳಲ್ಲಿ670ರನ್ ಗಳಿಸಿ, ಈಗಲೂ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ.

ಐಪಿಎಲ್ ನಲ್ಲಿ 500 ಪ್ಲಸ್ ಗಳಿಸಿದ ಆಟಗಾರರ ಪಟ್ಟಿ
ಡೇವಿಡ್ ವಾರ್ನರ್: 6 ಬಾರಿ
ವಿರಾಟ್ ಕೊಹ್ಲಿ: 5 ಬಾರಿ
ಶಿಖರ್ ಧವನ್: 4 ಬಾರಿ
ಕೆಎಲ್ ರಾಹುಲ್, ಕ್ರಿಸ್ ಗೇಲ್, ಸುರೇಶ್ ರೈನಾ, ಗೌತಮ್ ಗಂಭೀರ್ 3 ಬಾರಿ 500ರನ್ ಗಡಿ ದಾಟಿದ್ದಾರೆ.

ಈ ಪೈಕಿ ಕೆಎಲ್ ರಾಹುಲ್ ಅವರು ಸತತವಾಗಿ 3 ಬಾರಿ 500 ಪ್ಲಸ್ ರನ್ ಗಳಿಸಿದ್ದರೆ, ವಾರ್ನರ್ ಸತತ 4 ಬಾರಿ ಈ ಸಾಧನೆ ಮಾಡಿದ್ದಾರೆ.

Story first published: Wednesday, November 4, 2020, 9:44 [IST]
Other articles published on Nov 4, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+