ಲಾರಾ 400* ದಾಖಲೆ ಮುರಿಯಲು ಈ ಭಾರತೀಯನಿಂದ ಸಾಧ್ಯ: ಡೇವಿಡ್ ವಾರ್ನರ್

ಪಾಕಿಸ್ತಾನದ ವಿರುದ್ಧ ತ್ರಿಶತಕ ಬಾರಿಸಿದ ಡೇವಿಡ್ ವಾರ್ನರ್(335) ಲಾರಾ ದಾಖಲೆ ದಾಖಲೆಯನ್ನು ಮುರಿಯುವ ಅವಕಾಶವನ್ನು ಹೊಂದಿದ್ದರು. ಲಾರಾ ಅವರ 400 ರನ್ ದಾಖಲೆಯನ್ನು ಮುರಿಯಲು 65 ರನ್ ಹಿಂದೆಯಿದ್ದಾಗ ಆಸ್ಟ್ರೇಲಿಯಾ ನಾಯಕ ಟಿಮ್ ಫೈನ್ ಇನ್ನಿಂಗ್ಸನ್ನು ಡಿಕ್ಲೇರ್ ಮಾಡಿದ್ದರು. ಹೀಗಾಗಿ ಆಸ್ಟ್ರೇಲಿಯಾ ಡ್ಯಾಶಿಂಗ್ ಓಪನರ್ ವಾರ್ನರ್‌ಗೆ ಈ ಅವಕಾಶ ತಪ್ಪಿದಂತಾಯಿತು. ಅದ್ಭುತ ತ್ರಿಶತಕ ದಾಖಲಿಸಿದ ಬಳಿಕ ಡೇವಿಡ್ ವಾರ್ನರ್ ಹೇಳಿಕೆಯನ್ನು ನೀಡಿದ್ದಾರೆ. ಈ ಹೇಳಿಕೆ ಭಾರತೀಯ ಅಭಿಮಾನಿಗಳಿಗೆ ಹೆಮ್ಮೆಯನ್ನುಂಟು ಮಾಡುವಂತಿದೆ.
ವೆಸ್ಟ್ ಇಂಡೀಸ್ ಕ್ರಿಕೆಟ್ ದಿಗ್ಗಜ ಬ್ರಿಯಾನ್ ಲಾರಾ ಅವರ 400 ರನ್ ದಾಖಲೆಯನ್ನು ಹಿಂದಿಕ್ಕುವ ಅವಕಾಶವನ್ನು ಸಧ್ಯ ಭಾರತೀಯ ಕ್ರಿಕೆಟಿಗ ರೋಹಿತ್ ಶರ್ಮಾ ಹೊಂದಿದ್ದಾರೆ. ಮುಂದಿನ ದಿನಗಳಲ್ಲಿ ಈ ದಾಖಲೆಯನ್ನು ರೋಹಿತ್ ಮುರಿಯಲಿದ್ದಾರೆ ಎಂದು ಹೇಳಿಕೆಯನ್ನು ವಾರ್ನರ್ ನೀಡಿದ್ದಾರೆ. ಬ್ರಿಯಾನ್ ಲಾರಾ 2004 ರಲ್ಲಿ ಇಂಗ್ಲೆಂಡ್ ವಿರುದ್ಧ ಅಜೇಯ 400 ರನ್ ಬಾರಿಸಿರುವುದು ಇಲ್ಲಿಯವರೆಗಿನ ವೈಯಕ್ತಿಕ ಅತಿ ಹೆಚ್ಚಿನ ಸ್ಕೋರ್ ಆಗಿದೆ.
ಏಕದಿನ ಕ್ರಿಕೆಟ್‌ನಲ್ಲಿ ಅತ್ಯುತ್ತಮ ಬ್ಯಾಟ್ಸ್‌ಮನ್ ಆಗಿರುವ ರೋಹಿತ್ ಶರ್ಮಾ ಟೆಸ್ಟ್ ಕ್ರಿಕೆಟ್‌ನಲ್ಲಿ ಅಷ್ಟೇನು ಸಕ್ಸಸ್ ಆಗಿರಲಿಲ್ಲ. ಆದರೆ ಕಳೆದ ಎರಡು ಟೆಸ್ಟ್ ಸರಣಿಯಲ್ಲಿ ಆರಂಭಿಕನಾಗಿ ಭಡ್ತಿ ಪಡೆದ ರೋಹಿತ್ ಶರ್ಮಾ ಅದ್ಭುತ ಕಮ್‌ಬ್ಯಾಕ್ ಮಾಡಿದ್ದು ಟೆಸ್ಟ್‌ನಲ್ಲೂ ಭರವಸೆಯನ್ನು ನೀಡಿದ್ದಾರೆ.
ತ್ರಿಶತಕ ಬಾರಿಸಿದ ಬಳಿಕ ವಾರ್ನರ್ ಭಾರತದ ಮತ್ತೋರ್ವ ಮಾಜಿ ಆಟಗಾರನ ಬಗ್ಗೆಯೂ ಮಾತನಾಡಿದ್ದಾರೆ. ಐಪಿಎಲ್‌ನಲ್ಲಿ ಡೆಲ್ಲಿ ಪರವಾಗಿ ಆಡುತ್ತಿದ್ದ ಸಂದರ್ಭದಲ್ಲಿ ವೀರೇಂದ್ರ ಸೆಹ್ವಾಗ್ ಅವರನ್ನು ಭೇಟಿಯಾಗಿದ್ದಾಗ, ಸೆಹ್ವಾಗ್ ನನ್ನನ್ನು ಕುರಿತು ನೀನು ಟಿ-ಟ್ವೆಂಟಿಗಿಂತ ಉತ್ತಮ ಟೆಸ್ಟ್ ಕ್ರಿಕೆಟಿಗನಾಗುತ್ತಿ ಎಂದಿದ್ದರು ಎಂದು ನೆನಪಿಸಿಕೊಂಡಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications