ಟಗರು ಬಂತು ಟಗರು ಎಂದ ಕ್ರಿಕೆಟರ್ ಡೇವಿಡ್ ವಾರ್ನರ್

ಆಸ್ಟ್ರೇಲಿಯಾದ ಸ್ಟಾರ್ ಬ್ಯಾಟ್ಸ್ ಮನ್ ಡೇವಿಡ್ ವಾರ್ನರ್ ಅವರಿಗೂ ಭಾರತಕ್ಕೂ ಅವಿನಾಭಾವ ಸಂಬಂಧವಿದೆ. ವಾರ್ನರ್ ಅವರು ಭಾರತದಲ್ಲಿ ಅಪಾರವಾದ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಭಾರತ ಒಂದು ರೀತಿ ಎರಡನೇ ಮನೆ ಎಂದೇ ಡೇವಿಡ್ ವಾರ್ನರ್ ಅವರು ಆಗಾಗ ಹೇಳಿಕೊಳ್ಳುತ್ತಿರುತ್ತಾರೆ. ಇನ್ನು ಡೇವಿಡ್ ವಾರ್ನರ್ ಅವರು ಭಾರತಕ್ಕೆ ಇಷ್ಟು ಹತ್ತಿರ ಆಗುವುದಕ್ಕೆ ಕಾರಣ ಇಂಡಿಯನ್ ಪ್ರೀಮಿಯರ್ ಲೀಗ್.
ಹೌದು ಇಂಡಿಯನ್ ಪ್ರೀಮಿಯರ್ ಲೀಗ್ ನಿಂದಾಗಿ ಡೇವಿಡ್ ವಾರ್ನರ್ ಅವರು ಭಾರತದಲ್ಲಿ ಅಪಾರ ಅಭಿಮಾನಿಗಳನ್ನು ಗಳಿಸಿದ್ದಾರೆ. ಸನ್ ರೈಸರ್ಸ್ ಪರ ಆಡುವ ಡೇವಿಡ್ ವಾರ್ನರ್ ಅವರು ಇತ್ತೀಚೆಗೆ ದಕ್ಷಿಣ ಭಾರತ ಚಿತ್ರರಂಗದ ಸಿನಿಮಾಗಳ ಹಾಡು ಮತ್ತು ಡೈಲಾಗ್ ಗಳಿಗೆ ಟಿಕ್ ಟಾಕ್ ಮಾಡುವ ಮುಖಾಂತರ ಮತ್ತಷ್ಟು ಭಾರತೀಯ ಅಭಿಮಾನಿಗಳಿಗೆ ಹತ್ತಿರವಾಗಿದ್ದರು. ಟಿಕ್ ಟಾಕ್ ಮಾತ್ರವಲ್ಲದೆ ಫೇಸ್ ಚೇಂಜರ್ ಬಳಸಿ ದಕ್ಷಿಣ ಭಾರತ ಚಿತ್ರಗಳ ದೃಶ್ಯಗಳಿಗೆ ತಮ್ಮ ಮುಖವನ್ನು ಜೋಡಿಸಿ ವಿಡಿಯೋ ಮಾಡಿ ಅದನ್ನು ಇನ್ ಸ್ಟಾಗ್ರಾಂ ಮೂಲಕ ಹಂಚಿ ಖುಷಿ ಪಡುತ್ತಿದ್ದರು ಡೇವಿಡ್ ವಾರ್ನರ್.
ಇನ್ನು ಈ ಬಾರಿಯ ಐಪಿಎಲ್ ನಲ್ಲಿ ಸನ್ ರೈಸರ್ಸ್ ಪರ ಆಡಲಿರುವ ಡೇವಿಡ್ ವಾರ್ನರ್ ಅವರು ಇತ್ತಿಚೆಗಷ್ಟೇ ಐಪಿಎಲ್ 2021 ಕುರಿತು ಇನ್ ಸ್ಟಾ ಗ್ರಾಂನಲ್ಲಿ ಪೋಸ್ಟ್ ಒಂದನ್ನು ಹಾಕಿದ್ದಾರೆ. ಅಭಿಮಾನಿಯೊಬ್ಬರು ಎಡಿಟ್ ಮಾಡಿ ಕಳುಹಿಸಿರುವ ಬ್ಯಾಟಿಂಗ್ ಹೈಲೈಟ್ಸ್ ಉಳ್ಳ ವಿಡಿಯೋವೊಂದನ್ನು ಡೇವಿಡ್ ವಾರ್ನರ್ ಅವರು ಪೋಸ್ಟ್ ಮಾಡಿದ್ದು ಅದರಲ್ಲಿ ಶಿವಣ್ಣ ಅಭಿನಯದ ಟಗರು ಬಂತು ಟಗರು ಹಾಡು ಬ್ಯಾಕ್ ಗ್ರೌಂಡ್ ಮ್ಯೂಸಿಕ್ ಆಗಿದೆ. ಆದಷ್ಟು ಬೇಗ ಐಪಿಎಲ್ ನಲ್ಲಿ ಪಾಲ್ಗೊಳ್ಳುವ ಇಂಗಿತವನ್ನು ವ್ಯಕ್ತ ಪಡಿಸಿರುವ ಡೇವಿಡ್ ವಾರ್ನರ್ ಅವರು ಮತ್ತೊಮ್ಮೆ ಕಪ್ ಗೆಲ್ಲುವ ವಿಶ್ವಾಸವನ್ನೂ ಸಹ ಈ ಇನ್ ಸ್ಟಾಗ್ರಾಂ ಪೋಸ್ಟ್ ನ ಮೂಲಕ ವ್ಯಕ್ತಪಡಿಸಿದ್ದಾರೆ.
ಇನ್ ಸ್ಟಾಗ್ರಾಂ ನಲ್ಲಿ ಡೇವಿಡ್ ವಾರ್ನರ್ ಅವರು ಪೋಸ್ಟ್ ಮಾಡಿರುವ ಟಗರು ಬಂತು ಟಗರು ವಿಡಿಯೋಗೆ ಸಕತ್ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು ಕನ್ನಡಿಗರು ಖುಷಿಯಿಂದ ಈ ವಿಡಿಯೋ ಮತ್ತು ವಾರ್ನರ್ ಕುರಿತು ಸಾಕಷ್ಟು ಕಾಮೆಂಟ್ ಗಳನ್ನು ಮಾಡಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications