ಕೊರೊನಾ ವಿರುದ್ಧ ಹೋರಾಟ: ತಲೆ ಬೋಳಿಸಿ ಡೇವಿಡ್ ವಾರ್ನರ್ ಬೆಂಬಲ, ಕೊಹ್ಲಿಗೆ ಸವಾಲು

ಕೊರೊನಾ ವೈರಸ್ ವಿರುದ್ಧ ಜಗತ್ತು ಹೋರಾಡುತ್ತಿದೆ. ಕೊರೊನಾ ವೈರಸ್ ವಿರುದ್ಧದ ಹೋರಾಟಕ್ಕಾಗಿ ಭಾರತ ಸೇರಿದಂತೆ ಅನೇಕ ದೇಶಗಳಲ್ಲಿ ಲಾಕ್‌ಡೌನ್ ಘೋಷಿಸಲಾಗಿದೆ. ಸಂಪೂರ್ಣ ವಹಿವಾಟುಗಳು ಸ್ಥಬ್ಧವಾಗಿದೆ. ಆದರೆ ವೈದ್ಯಕೀಯ ಸಿಬ್ಬಂದಿಗಳು ಮಾತ್ರ ಈ ಸಂದರ್ಭದಲ್ಲಿ ಹಗಲು ರಾತ್ರಿಯೆನ್ನದೆ ಕೊರೊನಾ ವೈರಸ್ ವಿರುದ್ಧ ನೇರ ಹೋರಾಟವನ್ನು ನಡೆಸುತ್ತಿದ್ದಾರೆ.
ಈ ಹಿನ್ನೆಲೆಯಲ್ಲಿ ವಿಶ್ವಾದ್ಯಂತ ವೈದ್ಯಕೀಯ ಸಿಬ್ಬಂದಿಗಳ ಕಾರ್ಯಕ್ಕೆ ಮೆಚ್ಚಗುಗೆ ವ್ಯಕ್ತವಾಗುತ್ತಿದೆ. ಈ ಮಧ್ಯೆ ಆಸ್ಟ್ರೇಲಿಯಾದ ಸ್ಪೋಟಕ ಬ್ಯಾಟ್ಸ್‌ಮನ್ ಡೇವಿಡ್ ವಾರ್ನರ್ ವಿಶಿಷ್ಟ ರೀತಿಯಲ್ಲಿ ಕೊರೊನಾ ವೈರಸ್ ವಿರುದ್ಧ ಹೋರಾಡುತ್ತಿರುವ ವೈದ್ಯಕೀಯ ಸಿಬ್ಬಂಧಿಗಳಿಗೆ ಪ್ರೋತ್ಸಾಹವನ್ನು ನೀಡಿದ್ದಾರೆ.
ಹಾಗಾದ್ರೆ ಡೇವಿಡ್ ವಾರ್ನರ್ ಯಾವ ರೀತಿ ಬೆಂಬಲವನ್ನು ವ್ಯಕ್ತಪಡಿಸಿದ್ದಾರೆ ಮುಂದೆ ಓದಿ

ಕೇಶ ಮುಂಡನ ಮಾಡಿ ಬೆಂಬಲ
ಡೇವಿಡ್ ವಾರ್ನರ್ ತಮ್ಮ ತಲೆಕೂದಲನ್ನು ಸಂಪೂರ್ಣ ಬೋಳಿಸಿಕೊಂಡು ತಮ್ಮ ಬೆಂಬಲವನ್ನು ವೈದ್ಯಕೀಯ ಸಿಬ್ಬಂದಿಗಳಿಗೆ ಘೋಷಿಸಿದ್ದಾರೆ. ಈ ಮೂಲಕ ಕೊರೊನಾ ವೈರಸ್ ವಿರುದ್ಧ ನೇರವಾಗಿ ಹೋರಾಡುತ್ತಿರುವವರಿಗೆ ನೈತಿಕ ಬಲವನ್ನು ತುಂಬುವ ಪ್ರಯತ್ನ ಮಾಡಿದ್ದಾರೆ. ಈ ಮೂಲಕ '#ಶೇವ್ ಮೈ ಹೆಡ್' ಅಭಿಯಾನ ಆರಂಭಿಸಿದ್ದಾರೆ.
ಇನ್ಸ್ಟಾಗ್ರಾಮ್‌ನಲ್ಲಿ ವಾರ್ನರ್ ವಿಡಿಯೋ
ಡೇವಿಡ್ ವಾರ್ನರ್ ಮಂಗಳವಾರ ಬೆಳಗ್ಗೆ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಕೇಶಮುಂಡನ ಮಾಡಿಕೊಳ್ಳುತ್ತಿರುವ ವೀಡಿಯೋವನ್ನು ಹಾಕಿಕೊಂಡಿದ್ದಾರೆ. ಇದರ ಉದ್ದೇಶವನ್ನು ಕೂಡ ಈ ವಿಡಿಯೋದ ಜೊತೆಗೆ ಡೇವಿಡ್ ವಾರ್ನರ್ ಬರೆದುಕೊಂಡಿದ್ದಾರೆ.

ಬೆಂಬಲ ಕೋರಿ ಸವಾಲು ಹಾಕಿದ ವಾರ್ನರ್
ಡೇವಿಡ್ ವಾರ್ನರ್ ತಾವು ಮಾತ್ರವೇ ವಿಶಿಷ್ಟ ರೀತಿಯಲ್ಲಿ ವೈದ್ಯಕೀಯ ಸಿಬ್ಬಂದಿಗೆ ಬೆಂಬಲವನ್ನು ನೀಡುತ್ತಿಲ್ಲ. ಈ ಸಂದರ್ಭದಲ್ಲಿ ವಾರ್ನರ್ ಅನೇಕರಿಗೆ ಈ ಸವಾಲನ್ನು ಸ್ವೀಕರಿಸುವಂತೆ ಮನವಿಯನ್ನು ಮಾಡಿಕೊಂಡಿದ್ದಾರೆ. ಆಸ್ಟ್ರೇಲಿಯಾದ ಕ್ರಿಕೆಟಿಗರ ಜೊತೆಗೆ ಟೀಮ್ ಇಂಡಿಯಾ ನಾಯಕನಿಗೂ ಈ ಚಾಲೆಂಜ್ ಹಾಕಲಾಗಿದೆ.

ಕೊಹ್ಲಿಗೆ ವಾರ್ನರ್ ಸವಾಲು
ಈ ವಿಡಿಯೋವನ್ನು ಹಂಚಿಕೊಂಡಿರುವ ವಾರ್ನರ್ ವಿಡಿಯೋ ಜೊತೆಗೆ ಟೀಮ್ ಇಂಡಿಯಾ ನಾಯಕನಿಗೂ ಈ ಸವಾಲನ್ನು ಸ್ವೀಕರಿಸುವಂತೆ ಸವಾಲು ಹಾಕಿದ್ದಾರೆ. ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಆಸ್ಟ್ರೇಲಿಯಾ ಮಾಜಿ ನಾಯಕ ಸ್ಟೀವ್ ಸ್ಮಿತ್, ಪ್ಯಾಟ್ ಕಮ್ಮಿನ್ಸ್ ಸೇರಿದಂತೆ ಅನೇಕರಿಗೆ ಈ ಸವಾಲೆಸೆದಿದ್ದಾರೆ ಡೇವಿಡ್ ವಾರ್ನರ್.

ಆಸ್ಟ್ರೇಲಿಯಾದಲ್ಲೂ ಕೊರೊನಾ ಕಾಟ
ಕೊರೊನಾ ವೈರಸ್ ಆಸ್ಟ್ರೇಲಿಯಾದಲ್ಲು ಸಾಕಷ್ಟು ವ್ಯಾಪಿಸಿದೆ. ಇಂದು ಮುಂಜಾನೆಯ ವೇಳೆಗೆ ಆಸ್ಟ್ರೇಲಿಯಾದಲ್ಲಿ ಕೊರೊನಾ ವೈರಸ್‌ಗೆ ತುತ್ತಾದವರ ಸಂಖ್ಯೆ 4460 ಆಗಿದೆ. ಕೊರೊನಾ ವೈರಸ್‌ಗೆ ಆಸ್ಟ್ರೇಲಿದಲ್ಲಿ ಈವರೆಗೆ 19 ಮಂದಿ ಮೃತಪಟ್ಟಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications