ಎಂಎಸ್ ಧೋನಿಯಿಂದ ಭಾರತದ ನಾಯಕತ್ವ ಸಿಗಲಿಲ್ಲ: ಯುವರಾಜ್ ಸಿಂಗ್

ನವದೆಹಲಿ: 'ಕೆಚ್ಚೆದೆಯ ಮಹಾರಾಜ' ಎಂದು ಅಭಿಮಾನಿಗಳಿಂದ ಪ್ರೀತಿಯಿಂದ ಕರೆಸಿಕೊಳ್ಳುತ್ತಿದ್ದ ಯುವರಾಜ್ ಸಿಂಗ್ ಅವರು ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿ ಜೂನ್ 10ಕ್ಕೆ 2 ವರ್ಷಗಳಾಗುತ್ತಿದೆ. 2019 ಜೂನ್ 10ರಂದು ಯುವಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದರು. 2019ರ ವಿಶ್ವಕಪ್ ಆರಂಭವಾಗಿ ಒಂದು ವಾರ ಕಳೆಯುತ್ತಲೇ ಯುವಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ದೂರ ಉಳಿಯುವ ನಿಲುವು ಪ್ರಕಟಿಸಿದ್ದರು.
ಟೀಮ್ ಇಂಡಿಯಾದ ಪ್ರಮುಖ ಆಲ್ ರೌಂಡರ್‌ಗಳಲ್ಲಿ ಒಬ್ಬರಾಗಿದ್ದ ಯುವರಾಜ್ ಸಿಂಗ್ 2007 ಮತ್ತು 2011ರಲ್ಲಿ ಭಾರತದ ವಿಶ್ವಕಪ್ ಗೆಲುವಿನಲ್ಲಿ ಗಮನಾರ್ಹ ಕೊಡುಗೆ ನೀಡಿದ್ದರು. ಇಂಥ ಶ್ರೇಷ್ಠ ಕ್ರಿಕೆಟಿಗರ ಸಾಲಿನಲ್ಲಿದ್ದ ಯುವರಾಜ್ ಸಿಂಗ್ ಒಂದೇ ಒಂದು ಪಂದ್ಯದಲ್ಲಿ ತಂಡದ ನಾಯಕತ್ವ ವಹಿಸಿಕೊಂಡಿರಲಿಲ್ಲ.

ನಾಯಕತ್ವದ ಆಸೆಯಲ್ಲಿದ್ದ ಯುವಿ
ಸಿಕ್ಸ್ ಸಿಕ್ಸ್ ವಿಶ್ವದಾಖಲೆ ನಿರ್ಮಿಸಿದ್ದ ಯುವರಾಜ್ ಸಿಂಗ್‌ಗೆ ಒಮ್ಮೆಯಾದರೂ ಭಾರತ ತಂಡವನ್ನು ಮುನ್ನಡೆಸಬೇಕು ಅನ್ನೋ ಆಸೆಯಿತ್ತಂತೆ. ಇತ್ತೀಚೆಗೆಗ ಈ ಬಗ್ಗೆ ಮಾತನಾಡಿರುವ ಯುವರಾಜ್ ಸಿಂಗ್ ಈ ಬಗ್ಗೆ ವಿಷಾದ ವ್ಯಕ್ತಪಡಿಸಿದ್ದಾರೆ. ಮುಖ್ಯವಾಗಿ 2007ರ ಟಿ20 ವಿಶ್ವ ವೇಳೆ ತಂಡದ ನಾಯಕತ್ವದ ನಿರೀಕ್ಷೆಯಲ್ಲಿ ಯುವಿ ಇದ್ದರಂತೆ.

ಟೂರ್ನಿಯಿಂದ ಹೊರಗುಳಿಯುವ ಆಲೋಚನೆ
ಗೌರವ್ ಕಪೂರ್ ಜೊತೆಗಿನ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಯುವರಾಜ್ ಸಿಂಗ್, 2007ರ ಟಿ20 ವಿಶ್ವಕಪ್ ವೇಳೆ ಹಿರಿಯ ಆಟಗಾರರಾದ ಸಚಿನ್ ತೆಂಡೂಲ್ಕರ್, ಸೌರವ್ ಗಂಗೂಲಿ, ರಾಹುಲ್ ದ್ರಾವಿಡ್ ಮೊದಲಾದವರು ಟೂರ್ನಿಯಿಂದ ಹೊರಗುಳಿಯುವ ಆಲೋಚನೆಯಲ್ಲಿದ್ದರಿಂದ ಭಾರತ ತಂಡದ ನಾಯಕತ್ವ ನನಗೆ ಸಿಗಬಹುದು ಎಂದು ನಿರೀಕ್ಷಿಸಿದ್ದೆ ಎಂದಿದ್ದಾರೆ.

ಧೋನಿಯಿಂದ ತಪ್ಪಿದ ಅವಕಾಶ
'ಟಿ20 ವಿಶ್ವಕಪ್‌ಗೂ ಮುನ್ನ 50 ಓವರ್‌ಗಳ ವಿಶ್ವಕಪ್‌ನಲ್ಲಿ ಭಾರತ ಸೋತಿತ್ತು ಅಲ್ವಾ? ಆ ವೇಳೆ ಭಾರತೀಯ ಕ್ರಿಕೆಟ್‌ನಲ್ಲಿ ಸಾಕಷ್ಟು ಗಲಾಟೆ ನಡೆದಿತ್ತು. ಆ ಬಳಿಕ ಇಂಗ್ಲೆಂಡ್‌ಗೆ ಎರಡು ತಿಂಗಳ ಪ್ರವಾಸವಿತ್ತು. ದಕ್ಷಿಣ ಆಫ್ರಿಕಾ ಮತ್ತು ಐರ್ಲೆಂಡ್‌ಗೂ ಪ್ರವಾಸ ಸರಣಿಯಿತ್ತು. ಅದಾಗಿ ಟಿ20 ವಿಶ್ವಕಪ್ ಇತ್ತು. ಒಟ್ಟಾರೆ 4 ತಿಂಗಳು ಮನೆಯಿಂದ ಹೊರಗಿರಬೇಕಾಗಿದ್ದರಿಂದ ಹಿರಿಯ ಆಟಗಾರರಿಗೆಲ್ಲ ಬಿಡುವು ಬೇಕಾಗಿತ್ತು. ಯಾರೂ ಟಿ20 ವಿಶ್ವಕಪ್ ಅನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ. ಹೀಗಾಗಿ ನಾನು ಟಿ20 ವಿಶ್ವಕಪ್‌ನಲ್ಲಿ ನಾಯಕನಾಗುವ ನಿರೀಕ್ಷೆಯಲ್ಲಿದ್ದೆ. ಆದರೆ ಆಗ ಎಂಎಸ್ ಧೋನಿಯನ್ನು ನಾಯಕನಾಗಿ ಘೋಷಿಸಲಾಯ್ತು,' ಎಂದು ಯುವರಾಜ್ ಹೇಳಿಕೊಂಡಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications