ಅನುಷ್ಕಾ ಮುಂದೆ ಕೊಹ್ಲಿ ಕಣ್ಣೀರು ಹಾಕಿದ್ದೇಕೆ? ಅವರೇ ಬಿಚ್ಚಿಟ್ಟ ಕಥೆ!
ಲಂಡನ್, ಜೂನ್ 13: ಸಾಮಾನ್ಯವಾಗಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹಾಗೂ ನಟಿ ಅನುಷ್ಕಾ ಶರ್ಮಾ ತಮ್ಮ ನಡುವಿನ ಪ್ರೇಮದ ವಿಚಾರಗಳನ್ನು ಬಹಿರಂಗವಾಗಿ ಎಲ್ಲೂ ಹಂಚಿಕೊಂಡಿದ್ದಿಲ್ಲ.
ಆದರೆ, ಇದೊಂದು ವಿಚಾರವನ್ನು ಕೊಹ್ಲಿ, ಅದೇಕೋ ಹಂಚಿಕೊಳ್ಳಬೇಕೆಂದೆನಿಸಿ ಹೇಳಿಕೊಂಡಿದ್ದಾರೆ. ಅದೊಂದು ದಿನ ತಾವು ಅನುಷ್ಕಾ ಶರ್ಮಾ ಮುಂದೆ ಕುಳಿತು ಕಣ್ಣೀರು ಹಾಕಿದ್ದನ್ನು ಅವರು ನೆನಪಿಸಿಕೊಂಡಿದ್ದಾರೆ.

ಅಂದಹಾಗೆ, ಅದು ದುಃಖದ ಕಣ್ಣೀರಲ್ಲ, ಆನಂದಬಾಷ್ಪ. 2015ರಲ್ಲಿ ಭಾರತ ತಂಡ, ಆಸ್ಟ್ರೇಲಿಯಾ ಕ್ರಿಕೆಟ್ ಪ್ರವಾಸದಲ್ಲಿದ್ದಾಗ ನಡೆದ ಘಟನೆಯಿದು. ಆಗ, ನಡೆಯುತ್ತಿದ್ದ ಟೆಸ್ಟ್ ಸರಣಿಯ ಮಧ್ಯದಲ್ಲೇ ಅಂದಿನ ಟೆಸ್ಟ್ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ, ತಮ್ಮ ನಾಯಕತ್ವವನ್ನು ತೊರೆದರು. ಆಗ, ವಿರಾಟ್ ಕೊಹ್ಲಿಯವರನ್ನು ನಾಯಕರನ್ನಾಗಿ ಬಿಸಿಸಿಐ ನೇಮಿಸಿತು.
ಆಗ ಅವರು, ಮೆಲ್ಬೋರ್ನ್ ನಲ್ಲಿದ್ದರಂತೆ. ಆಗ, ಅವರ ಪ್ರೇಯಸಿ ಅನುಷ್ಕಾ ಕೂಡ ಅಲ್ಲಿಗೇ ಹೋಗಿದ್ದರಂತೆ. ಆಗಲೇ, ಬಿಸಿಸಿಐನಿಂದ ಭಾರತ ಟೆಸ್ಟ್ ತಂಡದ ನಾಯಕರನ್ನಾಗಿ ಆರಿಸಲಾಗಿತ್ತಂತೆ. ಕ್ರಿಕೆಟ್ ಅನ್ನು ತಮ್ಮ ವೃತ್ತಿಜೀವನವನ್ನಾಗಿ ಆರಿಸಿಕೊಂಡಾಗ, ಮುಂದೊಂದು ದಿನ ಟೀಂ ಇಂಡಿಯಾ ನಾಯಕನಾಗುತ್ತೇನೆಂದು ಎಂದೂ ಅಂದುಕೊಳ್ಳದಿದ್ದ ಅವರಿಗೆ ಈ ಹೊಸ ಜವಾಬ್ದಾರಿ ಕಣ್ಣೀರು ತರಿಸಿತ್ತಂತೆ. ತಕ್ಷಣವೇ ಅನುಷ್ಕಾ ಮುಂದೆ ಹೋಗಿ ಗಳಗಳನೇ ಮಗುವಿನಂತೆ ಅತ್ತುಬಿಟ್ಟರಂತೆ. ಆಗ, ಅನುಷ್ಕಾ ಅವರು ಕೊಹ್ಲಿಯನ್ನು ಸಮಾಧಾನಪಡಿಸಿದ್ದರಂತೆ.
ಈ ಸುಮಧುರ ಘಟನೆಯನ್ನು ನಾನೆಂದಿಗೂ ಮರೆಯಲಾರೆ ಎಂದಿದ್ದಾರೆ ಕೊಹ್ಲಿ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications