ಭಾರತ vs ಆಸ್ಟ್ರೇಲಿಯಾ: ಬ್ರಿಸ್ಬೇನ್‌ನಲ್ಲಿ ದಾಖಲೆಯ ಜೊತೆಯಾಟವಾಡಿದ ಶಾರ್ದೂಲ್- ಸುಂದರ್

ಆಸ್ಟ್ರೇಲಿಯಾ ವಿರುದ್ಧದ ಅಂತಿಮ ಟೆಸ್ಟ್ ಪಂದ್ಯದಲ್ಲಿ ಭಾರತ ಅದ್ಭುತವಾಗಿ ತಿರುಗಿ ಬೀಳುವಲ್ಲಿ ಯಶಸ್ವಿಯಾಗಿದೆ. ಟೀಮ್ ಇಂಡಿಯಾದ ಕೆಳ ಕ್ರಮಾಂಕದ ಆಟಗಾರರಾದ ವಾಶಿಂಗ್ಟನ್ ಸುಂದರ್ ಹಾಗೂ ಶಾರ್ದೂಲ್ ಠಾಕೂರ್ ಶತಕದ ಜೊತೆಯಾಟವನ್ನು ನೀಡುವ ಮೂಲಕ ಟೀಮ್ ಇಂಡಿಯಾಗೆ ಆಸರೆಯಾದರು. ಬ್ರಿಸ್ಬೇನ್ ಅಂಗಳದಲ್ಲಿ ಈ ಜೋಡಿ ಭಾರತೀಯ ಆಟಗಾರರ ಪೈಕಿ 7ನೇ ವಿಕೆಟ್‌ಗೆ ದಾಖಲೆಯ ಜೊತೆಯಾಟವನ್ನು ನೋಡುವಲ್ಲಿ ಯಶಸ್ವಿಯಾಗಿದ್ದಾರೆ.
ಬ್ರಿಸ್ಬೇನ್ ಅಂಗಳದಲ್ಲಿ ಭಾರತೀಯ ಆಟಗಾರರ ಪೈಕಿ 7ನೇ ವಿಕೆಟ್‌ಗೆ 1991ರಲ್ಲಿ ಕಪಿಲ್ ದೇವ್ ಹಾಗೂ ಮನೋಜ್ ಪ್ರಭಾಕರ್ ಜೋಡಿ 58 ರನ್‌ಗಳ ಜೊತೆಯಾಟವನ್ನು ನೀಡಿದ್ದು ಈವರೆಗಿನ ಅತಿ ದೊಡ್ಡ ಜೊತೆಯಾಟವಾಗಿತ್ತು. ಆದರೆ ಶಾರ್ದೂಲ್ ಠಾಕೂರ್ ಹಾಗೂ ವಾಶಿಂಗ್ಟನ್ ಸುಂದರ್ ಜೋಡಿ ಭರ್ಜರಿ 123 ರನ್‌ಗಳ ಜೊತೆಯಾಟವನ್ನು ನೀಡಿದೆ.
ಬ್ರಿಸ್ಬೇನ್ ಟೆಸ್ಟ್‌ನಲ್ಲಿ ಆಸ್ಟ್ರೇಲಿಯಾ 369 ರನ್‌ಗಳನ್ನು ಗಳಿಸಿ ಆಲೌಟಾದ ಬಳಿಕ ಕಣಕ್ಕಿಳಿದ ಭಾರತದ ಪರವಾಗಿ ಹೇಳಿಕೊಳ್ಳುವಂತಾ ಜೊತೆಯಾಟ ದೊರಕಲಿಲ್ಲ. 186 ರನ್ ಗಳಿಸಿದ ಭಾರತ 6 ವಿಕೆಟ್ ಕಳೆದುಕೊಂಡಿಉ ಸಂಕಷ್ಟದ ಸ್ಥಿತಿಯಲ್ಲಿತ್ತು. ಆಗ ಜೊತೆಯಾಗಿದ್ದು ವಾಶಿಂಗ್ಟನ್ ಸುಂದರ್ ಹಾಗೂ ಶಾರ್ದೂಲ್ ಠಾಕೂರ್ ಜೋಡಿ.
ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಮೊಟ್ಟ ಮೊದಲ ಬಾರಿಗೆ ಟೆಸ್ಟ್ ಪಂದ್ಯದಲ್ಲಿ ಬ್ಯಾಟಿಂಗ್‌ಗೆ ಇಳಿದ ಈ ಇಬ್ಬರೂ ಆಟಗಾರರು ಭಾರತದ ಪರವಾಗಿ ಅಂತಿಮ ಪಂದ್ಯದ ಮೊಇದಲ ಇನ್ನಿಂಗ್ಸ್‌ನಲ್ಲಿ ದೊಡ್ಡ ಜೊತೆಯಾಟವನ್ನು ನೀಡಿದರು. 123 ರನ್‌ಗಳ ಜೊತೆಯಾಟದಲ್ಲಿ ಈ ಇಬ್ಬರೂ ಆಟಗಾರರು ಅರ್ಧ ಶತಕವನ್ನು ಬಾರಿಸಿದ್ದಾರೆ.
ಶಾರ್ದೂಲ್ ಠಾಕೂರ್ ಅದ್ಭುತವಾದ ಬ್ಯಾಟಿಂಗ್ ಕೌಶಲ್ಯವನ್ನು ಪ್ರದರ್ಶಿಸುತ್ತಾ 67 ರನ್ ಗಳಿಸಿದರು. ಆ ಬಳಿಕ ಪ್ಯಾಟ್ ಕಮ್ಮಿನ್ಸ್ ಎಸೆದ ಎಸೆತಕ್ಕೆ ಬೌಲ್ಡ್ ಆಗುವ ಮೂಲಕ ಈ ಜೋಡಿ ಬೇರ್ಪಟ್ಟಿದೆ. ಭಾರತ 300 ರನ್‌ಗಳ ಗಡಿ ದಾಟಲು ಈ ಜೋಡಿ ಉಪಯುಕ್ತ ಕೊಡುಗೆಯನ್ನು ನೀಡಿದ್ದು ಭಾರತ ಪಂದ್ಯದಲ್ಲಿ ತಿರುಗಿ ಬೀಳಲು ಕಾರಣರಾಗಿದ್ದಾರೆ. ಹೀಗಾಗಿ ಶಾರ್ದೂಲ್ ಠಾಕೂರ್ ಹಾಗೂ ವಾಶಿಂಗ್ಟನ್ ಸುಂದರ್ ಆಟಕ್ಕೆ ಸಾಕಷ್ಟು ಪ್ರಶಂಸೆಗಳು ವ್ಯಕ್ತವಾಗುತ್ತಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications