ಆತನಲ್ಲಿ ನನಗಿಂತಲೂ ಹೆಚ್ಚಿನ ಸ್ವಾಭಾವಿಕ ಸಾಮರ್ಥ್ಯವಿದೆ: ರವಿಶಾಸ್ತ್ರಿ

ಟೀಮ್ ಇಂಡಿಯಾ ಕೋಚ್ ರವಿ ಶಾಸ್ತ್ರಿ ಭಾರತೀಯ ತಂಡದ ಯುವ ಆಲ್‌ರೌಂಡರ್ ಬಗ್ಗೆ ಪ್ರಶಂಸೆಯ ಮಾತುಗಳನ್ನು ಆಡಿದ್ದಾರೆ. ಭಾರತೀಯ ಕ್ರಿಕೆಟ್ ತಣಡದ ಆಲ್‌ರೌಂಡರ್ ಆಗಿದ್ದ ಶಾಸ್ತ್ರಿ ಯುವ ಆಲ್‌ರೌಂಡರ್ ಬಳಿ ತನ್ನಲ್ಲಿದ್ದ ಸಾಭಾವಿಕ ಸಾಮರ್ಥ್ಯಕ್ಕಿಂತಲೂ ಹೆಚ್ಚಿನ ಸಾಮರ್ಥ್ಯವಿದೆ ಎಂದು ಹೇಳಿದ್ದಾರೆ.
ಟೀಮ್ ಇಂಡಿಯಾ ಕೋಚ್ ರವಿಶಾಸ್ತ್ರಿಯಿಂದ ಪ್ರಶಂಸೆಗೆ ಒಳಪಟ್ಟ ಆಲ್‌ರೌಂಡರ್ ಆಟಗಾರ ಬೇರೆ ಯಾರೂ ಅಲ್ಲ, ಅದು ವಾಶಿಂಗ್ಟನ್ ಸುಂದರ್. ಭಾರತೀಯ ತಂಡದಲ್ಲಿ ಸಕ್ರಿಯನಾಗಿದ್ದ ಕಾಲದಲ್ಲಿ ತನ್ನನ್ನು ಯಾವ ರೀತಿಯಲ್ಲಿ ಬಳಸಿಕೊಳ್ಳಲಾಗಿತ್ತೋ ಅದೇ ರೀತಿಯಲ್ಲಿ ವಾಶಿಂಗ್ಟನ್ ಸುಂದರ್ ಅವರನ್ನು ಕೂಡ ಬಳಸಿಕೊಳ್ಳಬಹುದು ಎಂದಿದ್ದಾರೆ ರವಿ ಶಾಸ್ತ್ರಿ.
ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ವಾಶಿಂಗ್ಟನ್ ಸುಂದರ್ ಒಟ್ಟು ನಾಲ್ಕು ಪಂದ್ಯಗಳಲ್ಲಿ ಟೀಮ್ ಇಂಡಿಯಾವನ್ನು ಪ್ರತಿನಿಧಿಸಿದ್ದು ಮೂರು ಅರ್ಧ ಶತಕ ಬಾರಿಸಿ ಮಿಂಚಿದ್ದಾರೆ. ಬೌಲಿಂಗ್‌ನಲ್ಲಿ ಆರು ವಿಕೆಟ್‌ಗಳನ್ನು ಕಿತ್ತಿದ್ದು ಇದರಲ್ಲಿ ಜೋ ರೂಟ್ ಹಾಗೂ ಸ್ಟೀವ್ ಸ್ಮಿತ್ ವಿಕೆಟ್‌ಗಳು ಕೂಡ ಸೇರಿದೆ.
"ನನ್ನ ಪ್ರಕಾರ ವಾಶಿ ನಾನು ಹೊಂದಿದ್ದಕ್ಕಿಂತ ಹೆಚ್ಚಿನ ಸ್ವಾಭಾವಿಕ ಸಾಮರ್ಥ್ಯವನ್ನು ಹೊಂದಿದ್ದಾರೆ. ಆತನ ಬಳಿ ಸಾಕಷ್ಟು ಸಾಮರ್ಥ್ಯವಿದೆ. ಆತ ಈ ಮಟ್ಟಕ್ಕೆ ಸೇರಿದವರಾಗಿದ್ದಾರೆ. ಆತ ಬಹಳ ದೂರ ಸಾಗಲಿದ್ದಾರೆ" ಎಂದು ರವಿ ಶಾಸ್ತ್ರಿ ವಾಶಿಂಗ್ಟನ್ ಸುಂದರ್ ಬಗ್ಗೆ ಪ್ರಶಂಸೆಯ ಮಾತುಗಳನ್ನು ಆಡಿದ್ದಾರೆ.
"ಆತನ ಸಾಮರ್ಥ್ಯಕ್ಕೆ ಆತ ತನ್ನ ರಾಜ್ಯಕ್ಕಾಗಿ ಅಗ್ರ ನಾಲ್ಕರ ಕ್ರಮಾಂಕದಲ್ಲಿ ಬ್ಯಾಟಿಂಗ್ ನಡೆಸಬಲ್ಲರು. ಆ ಬಗ್ಗೆ ಯಾವುದೇ ಅನುಮಾನಗಳು ಇಲ್ಲ. ಈ ಬಗ್ಗೆ ನಾನು ತಮಿಳುನಾಡು ಆಯ್ಕೆ ಮಂಡಳಿ ಅಥವಾ ನಾಯಕ ದಿನೇಶ್ ಕಾರ್ತಿಕ್ ಅವರೊಂದಿಗೆ ಮಾತನಾಡಲಿದ್ದೇನೆ. ನನ್ನ ಪ್ರಕಾರ ಆತ ಅಗ್ರ ನಾಲ್ಕರಲ್ಲಿ ಬ್ಯಾಟಿಂಗ್ ನಡೆಸಬಲ್ಲ ಸಾಮರ್ಥ್ಯವನ್ನು ಹೊಂದಿದ್ದಾರೆ" ಎಂದು ರವಿ ಶಾಸ್ತ್ರಿ ಹೇಳಿದ್ದಾರೆ
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications