ಭಾರತ ಸದ್ಯ ಆಸ್ಟ್ರೇಲಿಯಾ ಪ್ರವಾಸವನ್ನು ಬೆಳೆಸಿದೆ. ಈ ವೇಳೆ ಟೀಮ್ ಇಂಡಿಯಾ ಐದು ಪಂದ್ಯಗಳ ಟೆಸ್ಟ್ ಸರಣಿಯನ್ನು ಆಡಲಿದೆ. ಈ ಸರಣಿಯ ಎರಡು ಪಂದ್ಯಗಳು ಈಗ ಮುಗಿದಿವೆ. ಪರ್ತ್‌ನಲ್ಲಿ ಟೀಮ್ ಇಂಡಿಯಾ ಗೆಲುವು ದಾಖಲಿಸಿದರೆ, ಆಡಿಲೇಡ್‌ನಲ್ಲಿ 10 ವಿಕೆಟ್‌ಗಳ ಸೋಲು ಕಂಡಿದೆ. ಹೀಗಾಗಿ ಬ್ರಿಸ್ಬೇನ್‌ನಲ್ಲಿ ನಡೆಯಲಿರುವ ಪಂದ್ಯದ ಮೇಲೆ ಎಲ್ಲರ ಚಿತ್ತ ನೆಟ್ಟಿದೆ. ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಅನುಭವಿ ಆಫ್ ಸ್ಪಿನ್ ಬೌಲರ್ ಅಶ್ವಿನ್ ಬದಲಿಗೆ ವಾಷಿಂಗ್ಟನ್ ಸುಂದರ್ ಅವರಿಗೆ ಚಾನ್ಸ್ ನೀಡುವ ಸಾಧ್ಯತೆ ಇದೆ.
ಟೀಮ್ ಇಂಡಿಯಾ ಆಡಿಲೇಡ್‌ನಲ್ಲಿ ನಡೆದ ಟೆಸ್ಟ್ ಸರಣಿಯ ಎರಡನೇ ಪಂದ್ಯ ಡೇ-ಆಂಡ್ ನೈಟ್‌ನಲ್ಲಿ ನಡೆದಿತ್ತು. ಈ ವೇಳೆ ಭಾರತ ಈ ಪಂದ್ಯದಲ್ಲಿ ಅಶ್ವಿನ್ ಅವರಿಗೆ ಸ್ಥಾನ ನೀಡಿತ್ತು. ಆದರೆ ಅಶ್ವಿನ್ ತಮ್ಮ ಮೇಲೆ ತಂಡ ನಂಬಿಕೆಗೆ ತಕ್ಕನಾಗಿ ಪ್ರದರ್ಶನ ನೀಡಲಿಲ್ಲ. ಹೀಗಾಗಿ ಬ್ರಿಸ್ಬೇನ್ ಪಂದ್ಯದಲ್ಲಿ ಅಶ್ವಿನ್ ಬದಲಿಗೆ, ವಾಷಿಂಗ್ಟನ್ ಸುಂದರ್ ಅವರಿಗೆ ಚಾನ್ಸ್ ಸಿಗಬಹುದು. ವಾಷಿಂಗ್ಟನ್ ಸುಂದರ್ ಅವರಿಗೆ ಏಕೆ ಸ್ಥಾನ ನೀಡಬೇಕು ಎಂಬುದಕ್ಕೆ ಮೂರು ಕಾರಣಗಳು ಇಲ್ಲಿವೆ.

ಅಶ್ವಿನ್ ಅವರಿಗೆ ಹೋಲಿಸಿದರೆ, ವಾಷಿಂಗ್ಟನ್ ಸುಂದರ್ ಕೊಂಚ ಎತ್ತರವಾಗಿದ್ದಾರೆ. ಗಬ್ಬಾ ಪಿಚ್‌ನಲ್ಲಿ ಸ್ಪಿನ್ ಬೌಲರ್‌ಗಳಿಗೆ ಹೆಚ್ಚಿನ ನೆರವು ಇಲ್ಲ. ಇವರ ಬೌಲಿಂಗ್ ಆಕ್ಷನ್ ಸಹ, ಈ ಪಿಚ್‌ಗೆ ಹೊಂದಿಕೆ ಆಗುವಂತೆ ಇದೆ. ಅಶ್ವಿನ್ ಅವರಿಗೆ ಹೋಲಿಸಿದರೆ, ವಾಷಿಂಗ್ಟನ್ ಈ ಪಿಚ್‌ನಲ್ಲಿ ಪರಿಣಾಮಕಾರಿ ಎಂಬುದು ಸಾಬೀತಾಗುತ್ತದೆ.
ಈ ಪಿಚ್‌ನಲ್ಲಿ ಹೆಚ್ಚಿನ ಬೌನ್ಸ್ ಇದ್ದು, ವಾಷಿಂಗ್ಟನ್ ಸುಂದರ್ ಇದರ ಲಾಭವನ್ನು ಪಡೆಯಬಹುದು. ಇದೇ ಪಿಚ್‌ನಲ್ಲಿ ಕಳೆದ ಬಾರಿ ಅವರು ಪ್ರಭಾವಿ ಎನಿಸಿದ್ದರು. ಹೀಗಾಗಿ ತಂಡ ಇವರ ಮೇಲೆ ವಿಶ್ವಾಸವಿಟ್ಟು ತಂಡದಲ್ಲಿ ಸ್ಥಾನ ನೀಡಬಹುದು.

ವಾಷಿಂಗ್ಟನ್ ಅವರು ಒಬ್ಬ ಉತ್ತಮ ಆಲ್‌ರೌಂಡರ್. ಅಶ್ವಿನ್ ಅವರಿಗೆ ಹೋಲಿಸಿದರೆ, ಇವರ ತಂತ್ರ ಚೆನ್ನಾಗಿದೆ. ಇವರು ವೇಗದ ಬೌಲರ್‌ಗಳನ್ನು ಸಹ ಕೆಚ್ಚೆದೆಯಿಂದ ಎದುರಿಸಬಲ್ಲರು. ಇವರು ಮಧ್ಯಮ ಕೆಳಕ್ರಮಾಂಕದಲ್ಲಿ ಪರಿಣಾಮ ಕಾರಿ ಬ್ಯಾಟಿಂಗ್ ನಡೆಸಬಲ್ಲರು. ಇದರ ಲಾಭವನ್ನು ತಂಡ ಪಡೆಯಬಹುದು. ಇಷ್ಟೆಲ್ಲದರ ಮಧ್ಯೆ ಇವರೊಬ್ಬ ಲೆಫ್ಟ್ ಹ್ಯಾಂಡರ್ ಬ್ಯಾಟರ್.
ಭಾರತದಲ್ಲಿ ನಡೆದ ನ್ಯೂಜಿಲೆಂಡ್ ವಿರುದ್ಧದ ಸರಣಿಯಲ್ಲಿ ಟೀಮ್ ಇಂಡಿಯಾ ಪರ ಕಮ್‌ಬ್ಯಾಕ್ ಮಾಡಿದ ವಾಷಿಂಗ್ಟನ್ ಸುಂದರ್ ಪರಿಣಾಮಕಾರಿ ಬೌಲಿಂಗ್ ನಡೆಸಿದ್ದರು. ಇವರ ಇತ್ತೀಚಿನ ಪ್ರದರ್ಶನ ಅವರನ್ನು ತಂಡದಲ್ಲಿ ಸ್ಥಾನ ಉಳಿಸಿಕೊಳ್ಳುವಂತೆ ಮಾಡುತ್ತದೆ.