Team India: ಒಂದೇ ತಿಂಗಳು ಸಂಚಲನ ಮೂಡಿಸಿದ ಭಾರತ ತಂಡದ ಆಲ್‌ರೌಂಡರ್; ಐಸಿಸಿಯ ವಿಶೇಷ ಪ್ರಶಸ್ತಿಗೆ ನಾಮನಿರ್ದೇಶನ!
ಆಗಸ್ಟ್ 6 ಮಂಗಳವಾರ, ಟಿ20 ವಿಶ್ವಕಪ್ 2024ರ ಗೆಲುವಿನ ಬಳಿಕ ಭಾರತ ತಂಡದ ಸ್ಟಾರ್ ಆಟಗಾರರಾದ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಮತ್ತು ರವೀಂದ್ರ ಜಡೇಜಾ ಚುಟುಕು ಕ್ರಿಕೆಟ್‌ಗೆ ವಿದಾಯ ಹೇಳಿದ್ದರು. ಹೀಗಾಗಿ ಯಂಗ್ ಟೀಮ್ ಇಂಡಿಯಾ ಕಟ್ಟುವ ಸಲುವಾಗಿ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಆಯ್ಕೆ ಸಮಿತಿ ಯುವ ಆಟಗಾರರಿಗೆ ಅವಕಾಶವನ್ನು ನೀಡಿತ್ತು.
ಜುಲೈ ತಿಂಗಳು ಆಟಗಾರರಿಗೆ ಸುವರ್ಣಾವಕಾಶ ಸಿಕ್ಕತ್ತು. ಈ ತಿಂಗಳು ಕೆಲವರು ವಿಫಲರಾದರೆ, ಇನ್ನುಳಿದವರುಮೈದಾನದಲ್ಲಿ ಬೌಂಡರಿ-ಸಿಕ್ಸರ್ ಹೊಡೆಯುವ ಮೂಲಕ ಬಿಸಿಸಿಐ ಆಯ್ಕೆಗಾರರ ಗಮನ ಸೆಳೆದರು. ಈ ಪಟ್ಟಿಯಲ್ಲಿ ಟೀಮ್ ಇಂಡಿಯಾ ಸ್ಟಾರ್ ಆಲ್‌ರೌಂಡರ್ ಹೆಸರು ಕೂಡ ಸೇರಿದೆ.

ಈ ಯುವ ಆಲ್‌ರೌಂಡರ್ ಬೇರೆ ಯಾರು ಅಲ್ಲ, ವಾಷಿಂಗ್ಟನ್ ಸುಂದರ್. ಜಿಂಬಾಬ್ವೆ ಪ್ರವಾಸದಿಂದ ಶ್ರೀಲಂಕಾ ಪ್ರವಾಸದವರೆಗೆ ತಮ್ಮ ಆಲ್‌ರೌಂಡರ್ ಪ್ರದರ್ಶನದ ಮೂಲಕ ಸುಂದರ್ ಸಾಕಷ್ಟು ಸುದ್ದಿ ಮಾಡಿದ್ದಾರೆ. ಹೀಗಾಗಿ ಸುಂದರ್ ಹೆಸರು ಐಸಿಸಿ ತಿಂಗಳ ಆಟಗಾರನ ಪ್ರಶಸ್ತಿಗೆ ನಾಮನಿರ್ದೇಶನ ಪಟ್ಟಿಯಲ್ಲಿ ಕಾಣಿಸಿಕೊಂಡಿದೆ.
ಜಿಂಬಾಬ್ವೆ ಪ್ರವಾಸದಲ್ಲಿ ಅಮೋಘ ಪ್ರದರ್ಶನ
ಟಿ20 ವಿಶ್ವಕಪ್ 2024ರ ನಂತರ, ಟೀಮ್ ಇಂಡಿಯಾ ಜಿಂಬಾಬ್ವೆ ಪ್ರವಾಸ ಕೈಗೊಂಡಿತ್ತು. ಐದು ಟಿ20 ಪಂದ್ಯ ಸರಣಿಯನ್ನು ಆಡಿತ್ತು. ಶುಭಮನ್ ಗಿಲ್ ನಾಯಕತ್ವದಲ್ಲಿ ಸುಂದರ್ ಮೊದಲ ಪಂದ್ಯದಿಂದಲೇ ಅವಕಾಶ ಪಡೆದರು. ವಾಷಿಂಗ್ಟನ್ ಸುಂದರ್ 5 ಟಿ20 ಪಂದ್ಯಗಳ ಸರಣಿಯಲ್ಲಿ 8 ವಿಕೆಟ್ ಪಡೆದು ದಾಖಲೆ ಬರೆದಿದ್ದರು.
ಇದಾದ ಬಳಿಕ ಸುಂದರ್ ಶ್ರೀಲಂಕಾ ಪ್ರವಾಸದಲ್ಲಿ ಏಕದಿನ ಮತ್ತು ಟಿ20 ಸರಣಿಗಳಿಗೆ ಆಯ್ಕೆಯಾದರು. ಲಂಕಾ ಪ್ರವಾಸದಲ್ಲಿ, ಸುಂದರ್ ಅವರು ಟಿ20 ಸರಣಿಯಲ್ಲಿ 2 ವಿಕೆಟ್‌ಗಳನ್ನು ಪಡೆದರೆ, 25 ರನ್ ಗಳಿಸಿದರು. ಈಗ ಎರಡು ಏಕದಿನ ಪಂದ್ಯಗಳಲ್ಲಿ ಸುಂದರ್ 4 ವಿಕೆಟ್ ಕಬಳಿಸಿದ್ದು, 20 ರನ್ ಬಾರಿಸಿದ್ದಾರೆ.
ಆಂಗ್ಲ ಯುವ ಬೌಲರ್ ಹೆಸರೂ ನಾಮನಿರ್ದೇಶನ
ಇಂಗ್ಲೆಂಡ್‌ನ ವೇಗದ ಬೌಲರ್ ಗಸ್ ಅಟ್ಕಿನ್ಸನ್ ಅವರ ಹೆಸರು ಕೂಡ ನಾಮನಿರ್ದೇಶನ ಪಟ್ಟಿಯಲ್ಲಿ ಸೇರಿಸಲಾಗಿದೆ. ಅಟ್ಕಿನ್ಸನ್ ಅವರು ದಿಗ್ಗಜ ಜೇಮ್ಸ್ ಆಂಡರ್ಸನ್ ವಿದಾಯ ಪಂದ್ಯದಲ್ಲಿ ಪಾದಾರ್ಪಣೆ ಮಾಡಿದರು.
ತನ್ನ ಮೊದಲ ಟೆಸ್ಟ್ ಪಂದ್ಯದಲ್ಲೇ ಈ ಯುವ ಬೌಲರ್ ಮಾಡಿದ ದಾಖಲೆಯನ್ನು ಸುಲಭವಾಗಿ ಯಾವೊಬ್ಬ ಬೌಲರ್ ಮುರಿಯುವಂತೆ ಕಾಣುತ್ತಿಲ್ಲ. ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಪಂದ್ಯದಲ್ಲಿ ಅಟ್ಕಿನ್ಸನ್ ಒಟ್ಟು 12 ವಿಕೆಟ್ ಪಡೆದರು. ಈ ವೇಳೆ ಎರಡೂ ಇನ್ನಿಂಗ್ಸ್‌ಗಳಲ್ಲಿ ತಲಾ ಐದು ವಿಕೆಟ್‌ಗಳನ್ನು ಉರುಳಿಸಿ ಮಿಂಚಿದ್ದರು.
ಸ್ಕಾಟ್ಲೆಂಡ್ ಬೌಲರ್ ವಿಶ್ವ ದಾಖಲೆ
ಜುಲೈ ತಿಂಗಳು ಸ್ಕಾಟ್ಲೆಂಡ್‌ನ ಬೌಲರ್ ಚಾರ್ಲಿ ಕ್ಯಾಸನ್ ಅಬ್ಬರಿಸಿದ್ದರು. ಒಮನ್ ವಿರುದ್ಧದ ಏಕದಿನ ಪಂದ್ಯದಲ್ಲಿ 21 ರನ್‌ಗಳಿಗೆ 7 ವಿಕೆಟ್‌ಗಳನ್ನು ಕಬಳಿಸಿದ್ದರು. ಇದರೊಂದಿಗೆ ದಕ್ಷಿಣ ಆಫ್ರಿಕಾದ ಸ್ಟಾರ್ ವೇಗಿ ಕಗಿಸೊ ರಬಾಡ ಅವರ 9 ವರ್ಷಗಳ ಹಳೆಯ ದಾಖಲೆಯನ್ನು ಚಾರ್ಲಿ ಕ್ಯಾಸನ್ ಮುರಿದಿದ್ದರು.
ಇದೀಗ ಚಾರ್ಲಿ ಕ್ಯಾಸನ್ ಏಕದಿನ ಚೊಚ್ಚಲ ಪಂದ್ಯದಲ್ಲೇ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎಂಬ ದಾಖಲೆಯನ್ನು ಸಷ್ಟಿಸಿದ್ದಾರೆ. ಕ್ಯಾಸನ್ ತಮ್ಮ ಚೊಚ್ಚಲ ಪಂದ್ಯದ ಮೊದಲ ಎರಡು ಎಸೆತಗಳಲ್ಲಿ ಎರಡು ವಿಕೆಟ್ ಪಡೆದು ವಿಶ್ವ ಕ್ರಿಕೆಟ್ ಗಮನ ಸೆಳೆದಿದ್ದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications