ಪುಣೆಯ ಎಂಸಿಎ ಸ್ಟೇಡಿಯಂನಲ್ಲಿ ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಎರಡನೇ ಟೆಸ್ಟ್ ಪಂದ್ಯದಲ್ಲಿ ನಡೆಯುತ್ತಿದೆ. ಮೂರು ವರ್ಷಗಳ ಬಳಿಕ ಸ್ಟಾರ್ ಯುವ ಆಲ್‌ರೌಂಡರ್ ವಾಷಿಂಗ್ಟನ್ ಸುಂದರ್ ಭಾರತ ಟೆಸ್ಟ್ ತಂಡಕ್ಕೆ ಮರಳಿದ್ದು, ಅದ್ಭುತ ಪ್ರದರ್ಶನ ಬೌಲಿಂಗ್ ಪ್ರದರ್ಶನ ನೀಡುವ ಮೂಲಕ ಅವರು ಎಲ್ಲರ ಚಿತ್ತ ಕದ್ದಿದ್ದಾರೆ.
ಪುಣೆ ಟೆಸ್ಟ್ ಪಂದ್ಯಕ್ಕೆ ಕುಲದೀಪ್ ಯಾದವ್ ಬದಲಿಗೆ ವಾಷಿಂಗ್ಟನ್ ಸುಂದರ್ ಅವರಿಗೆ ಭಾರತದ ಆಡುವ ಹನ್ನೊಂದರ ಬಳಗದಲ್ಲಿ ಅವಕಾಶ ನೀಡಲಾಯಿತು. ಸಿಕ್ಕ ಅವಕಾಶವನ್ನು ಎರಡೂ ಕೈಯಿಂದ ಬಾಚಿಕೊಂಡ ವಾಷಿಂಗ್ಟನ್ ಸುಂದರ್ ನ್ಯೂಜಿಲೆಂಡ್ ತಂಡವನ್ನು ತಮ್ಮ ಸ್ಪಿಬ್ ಬೌಲಿಂಗ್ ಮೂಲಕ ಕಟ್ಟಿ ಹಾಕಿದರು. ಸುಂದರ್ 23.1 ಓವರ್ ಬೌಲಿಂಗ್ ಮಾಡಿ 2.54ರ ಸರಾಸರಿಯಲ್ಲಿ 59 ರನ್ ನೀಡಿ 7 ವಿಕೆಟ್‌ಗಳನ್ನು ಪಡೆದು ಮಿಂಚಿದರು. ಇದರೊಂದಿಗೆ ಅವರು ಭಾರತ ಟೆಸ್ಟ್ ತಂಡದಲ್ಲಿ ತಮ್ಮ ಸ್ಥಾನ ಭದ್ರಪಡಿಸಿಕೊಂಡಂತೆ ಕಾಣುತ್ತಿದೆ.

ನ್ಯೂಜಿಲೆಂಡ್ ವಿರುದ್ಧ ವಾಷಿಂಗ್ಟನ್ ಸುಂದರ್ ಅದ್ಭುತ ಪ್ರದರ್ಶನದ ನಂತರ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಮೈಖೇಲ್ ನಡೆಸಿದ ವಿಶೇಷ ಸಂದರ್ಶನದಲ್ಲಿ ವಾಷಿಂಗ್ಟನ್ ಸುಂದರ್ ಅವರ ಸಹೋದರಿ ಶೈಲಜಾ ಸುಂದರ್ ಪುಣೆ ಟೆಸ್ಟ್ ಪಂದ್ಯ ಯಶಸ್ಸಿನ ಬಗ್ಗೆ ಮಾತನಾಡಿದ್ದಾರೆ. ವಾಷಿಂಗ್ಟನ್ ಸುಂದರ್ ಎದುರಿಸಿದ ಗಾಯದ ಸಮಸ್ಯೆಗಳು ಹಾಗು ಸವಾಲುಗಳ ಕುರಿತು ಮೈಖೇಲ್ ವಿಶೇಷ ಸಂದರ್ಶನದಲ್ಲಿ ಶೈಲಜಾ ಸುಂದರ್ ಮಾಹಿತಿ ಹಂಚಿಕೊಂಡಿದ್ದಾರೆ.
ಮೊದಲು ಕ್ರಿಕೆಟ್‌ನಲ್ಲಿ ಫಿಟ್ನೆಸ್‌ಗೆ ಹೆಚ್ಚು ಒತ್ತು ನೀಡುತ್ತಿರಲಿಲ್ಲ. ಆದರೆ ಇಂದು ಫಿಟ್ನೆಸ್ ಎಂಬುದ ಅತ್ಯಂತ ಮುಖ್ಯವಾಗಿದೆ. ವಾಷಿಂಗ್ಟನ್ ಎಂದಿಗೂ ಫಿಟ್ನೆಸ್ ಬಿಟ್ಟಿಲ್ಲ. ಯಾವಗಾಲೂ ಅವರು ಫಿಟ್ ಆಗಿರಲು 100 ರಷ್ಟು ಪಯತ್ನಿಸುತ್ತಾರೆ. ಗಾಯದ ಸಮಯದಲ್ಲಿಯೂ ಸಹ ತಮ್ಮ ಫಿಟ್ನೆಸ್ ಕಡೆ ಹೆಚ್ಚು ಗಮನಹರಿಸಿದ್ದಾರೆ. ನಾನು ಅವನನ್ನು ಬಾಲ್ಯದಿಂದಲೂ ನೋಡಿದ್ದೇನೆ. ಅವನು ಯಾವಾಗಲೂ ತನ್ನ ಆಟವನ್ನು ಸುಧಾರಿಸುವ ಬಗ್ಗೆ ಜಾಗರೂಕನಾಗಿರುತ್ತಾನೆ. ಅವರ ಬಿಡುವಿಲ್ಲದ ತರಬೇತಿಯ ಫಲವೇ ಇಂದು ಅವರು ಸಾಧಿಸಿರುವ ಯಶಸ್ಸು ಎಂದು ಶೈಲಜಾ ಮೈಖೇಲ್ ಸಂದರ್ಶನದಲ್ಲಿ ಹೇಳಿದ್ದಾರೆ.
ಈ ಹಿಂದೆ ವಾಷಿಂಗ್ಟನ್ ಶತಕವನ್ನು ತಪ್ಪಿಸಿದಾಗ ಶೈಲಜಾ ತಮ್ಮ ತಂದೆ ಮಣಿ ಸುಂದರ್ ಮಾಡಿದ ತಮಾಷೆಯ ಸನ್ನಿವೇಶವನ್ನು ಸಂದರ್ಶನದಲ್ಲಿ ನೆನಪಿಸಿಕೊಂಡಿದ್ದಾರೆ. 'ವಾಷಿಂಗ್ಟನ್ ಒಂದು ಶತಕವನ್ನು ಬಾರಿಸುವುದರಲ್ಲಿ ಎಡುವಿದ್ದರು. ಇದಾದ ಬಳಿಕ ನಮ್ಮ ತಂದೆ ಅವನ ಕಾಲೆಳೆದಿದ್ದರು. ಶಿಕ್ಷಕರೊಬ್ಬರು ವಿದ್ಯಾರ್ಥಿಯನ್ನು ಏಕೆ ಓಡಿಸಿದ್ದರು ಎಂದು ತಮಾಷೆಯಾಗಿ ಪ್ರಶ್ನಿಸಿದ್ದರು. ಆದರೆ ಇಂದು, ಇಡೀ ಕುಟುಂಬವು ಹೆಮ್ಮೆಯಿಂದ ಬೀಗುತ್ತಿದೆ. ಏಕೆಂದರೆ ವಾಷಿಂಗ್ಟನ್ ಒಂದೇ ಇನ್ನಿಂಗ್ಸ್‌ನಲ್ಲಿ7 ವಿಕೆಟ್‌ಗಳನ್ನು ಪಡೆದಿದ್ದಾರೆ. ಟೆಸ್ಟ್ ಕ್ರಿಕೆಟ್ ನಿಜವಾದ ಆಟದ ರೂಪ. ಟೆಸ್ಟ್ ಕ್ರಿಕೆಟ್ ಆಟಗಾರನ ಕೌಶಲ್ಯಗಳಿಗೆ ಸವಾಲು ಹಾಕುತ್ತದೆ ಎಂದು ಶೈಲಜಾ ಸುಂದರ್ ತಿಳಿಸಿದ್ದಾರೆ.
ಪುಣೆ ಟೆಸ್ಟ್‌ನ ಯಶಸ್ಸಿನ ನಂತರ ವಾಷಿಂಗ್ಟನ್ ಅನ್ನು ದಿಗ್ಗಜ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಅವರಿಗೆ ಹೋಲಿಸಲಾಗುತ್ತಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಶೈಲಾಜಾ ಅವರು, 'ಅಶ್ವಿನ್ ಅವರನ್ನು ವಾಷಿಂಗ್ಟನ್‌ಗೆ
ಹೋಲಿಸುವುದು ಸರಿಯಲ್ಲ. ಅಶ್ವಿನ್ ಲೆಕ್ಕವಿಲ್ಲದಷ್ಟು ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ಆದರೆ ವಾಷಿಂಗ್ಟನ್ ಇನ್ನೂ ಅವರ ಹಾದಿಯನ್ನು ಕೆತ್ತುತ್ತಿದ್ದಾರೆ. ಅವರು ವಿಭಿನ್ನ ಶೈಲಿಗಳನ್ನು ಹೊಂದಿದ್ದಾರೆ. ಅಶ್ವಿನ್ ಏನನ್ನು ಹೊಂದಿದ್ದಾರೋ ಅದನ್ನು ಸಾಧಿಸಲು ವಾಷಿಂಗ್ಟನ್‌ಗೆ ದೇವರ ಆಶೀರ್ವಾದ ಬೇಕು. ವಾಷಿಂಗ್ಟನ್‌ಗೆ ಅಂತರಾಷ್ಟ್ರೀಯ ವೇದಿಕೆಯಲ್ಲಿ ಮಿಂಚಲು ಇನ್ನೂ ಹಲವು ವರ್ಷಗಳಿವೆ. ಅವರು ಹಲವಾರು ಪಂದ್ಯಗಳಲ್ಲಿ ಭಾರತವನ್ನು ಕೀರ್ತಿಗೆ ಕೊಂಡೊಯ್ಯಬೇಕು ಎಂಬುದು ನನ್ನ ಆಸೆ. ಟೀಮ್ ಇಂಡಿಯಾದಲ್ಲಿ ಅಶ್ವಿನ್ ಅವರ ಸ್ಥಾನವನ್ನು ತುಂಬುವುದು ಸಣ್ಣ ಕೆಲಸವಲ್ಲ ಎಂದು ಹೇಳಿದ್ದಾರೆ.