Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಜಿಂಬಾಬ್ವೆ ವಿರುದ್ಧ ದಾಖಲೆ ಬರೆದ ವಾಷಿಂಗ್ಟನ್ ಸುಂದರ್; ಈ ಸಾಧನೆ ಮಾಡಿದ ಮೊದಲ ಭಾರತೀಯ ಸ್ಪಿನ್ನರ್‌

ಜುಲೈ 15 ಸೋಮವಾರ, 5 ಟಿ20 ಪಂದ್ಯಗಳ ಸರಣಿಯಲ್ಲಿ ಟೀಮ್‌ ಇಂಡಿಯಾ 4-1 ಅಂತರದಲ್ಲಿ ಜಿಂಬಾಬ್ವೆಯನ್ನು ಸೋಲಿಸಿದೆ. ಈ ಸರಣಿಗೂ ಮುನ್ನವೇ ಭಾರತ ತಂಡದ ಸ್ಟಾರ್‌ ಅನುಭವಿ ಆಲ್‌ರೌಂಡರ್ ರವೀಂದ್ರ ಜಡೇಜಾ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಿಂದ ನಿವೃತ್ತಿಯಾಗಿದ್ದರು.

ಹೀಗಾಗಿ ಜಡೇಜಾ ಅನುಪಸ್ಥಿತಿಯಲ್ಲಿ ಮತ್ತೊರ್ವ ಯುವ ಆಲ್ ರೌಂಡರ್ ವಾಷಿಂಗ್ಟನ್ ಸುಂದರ್ ಅವರಿಗೆ ಈ ಸರಣಿಯಲ್ಲಿ ಅವಕಾಶ ನೀಡಲಾಗಿತ್ತು. ಈ ಅವಕಾಶವನ್ನು ಸದುಪಯೋಗಪಡಿಸಿಕೊಂಡ ಸುಂದರ್ ಸರಣಿ ಶ್ರೇಷ್ಠ ಪ್ರಶಸ್ತಿ ಗೆಲ್ಲುವುದರೊಂದಿಗೆ ತಮ್ಮ ಹೆಸರಿನಲ್ಲಿ ದೊಡ್ಡ ದಾಖಲೆ ನಿರ್ಮಿಸಿದ್ದಾರೆ.

Washington Sundar special record against Zimbabwe

ಜಿಂಬಾಬ್ಬೆ ವಿರುದ್ಧ ಸುಂದರ್ ಪ್ರದರ್ಶನ

ಜಿಂಬಾಬ್ಬೆ ಸರಣಿಯಲ್ಲಿ ಭಾರತದ ಆಫ್ ಸ್ಪಿನ್ನರ್ ವಾಷಿಂಗ್ಟನ್ ಸುಂದರ್ ಅದ್ಭುತ ಬೌಲಿಂಗ್ ಪ್ರದರ್ಶನ ನೀಡಿದರು. 5 ಟಿ20 ಪಂದ್ಯಗಳಲ್ಲಿ ಒಟ್ಟು 18 ಓವರ್‌ಗಳನ್ನು ಬೌಲ್ ಮಾಡಿ ಸುಂದರ್‌ 5.16 ರ ಆರ್ಥಿಕತೆಯೊಂದಿಗೆ 93 ರನ್‌ಗಳನ್ನು ನೀಡಿದರು. ಇದರೊಂದಿಗೆ ಒಟ್ಟು 8 ವಿಕೆಟ್ ಪಡೆದು ಮಿಂಚಿದರು.

ಸುಂದರ ಅವರ ಈ ಅಮೋಘ ಪ್ರದರ್ಶನಕ್ಕಾಗಿ ಸರಣಿ ಶ್ರೇಷ್ಠ ಪ್ರಶಸ್ತಿ ನೀಡಲಾಯಿತು. ಈ ಸರಣಿಯಲ್ಲಿ ಬೌಲಿಂಗ್‌ ಮಾತ್ರವಲ್ಲದೆ 2 ಇನ್ನಿಂಗ್ಸ್‌ಗಳಲ್ಲಿ ಬ್ಯಾಟಿಂಗ್‌ ಮಾಡಿದ ಸುಂದರ್‌ 28 ​​ರನ್ ಗಳಿಸಿದರು. ಅವರಿಗೆ ಹೆಚ್ಚಿನ ಸಂದರ್ಭಗಳಲ್ಲಿ ಬ್ಯಾಟಿಂಗ್ ಮಾಡುವ ಅವಕಾಶವೂ ಸಿಗಲಿಲ್ಲ. ಈ ಮೂಲಕ ಸುಂದರ್ ತಮ್ಮ ಹೆಸರಿನಲ್ಲಿ ದೊಡ್ಡ ದಾಖಲೆ ಬರೆದರು.

ಸುಂದರ್‌ ಸಾಧನೆ ಏನು?

ಈ ಹಿಂದೆ ಜಿಂಬಾಬ್ವೆ ವಿರುದ್ಧ 6 ಟಿ20 ಪಂದ್ಯಗಳಲ್ಲಿ ಅಕ್ಷರ್ 7 ವಿಕೆಟ್ ಪಡೆದಿದ್ದರು. ಇದೀಗ ಸುಂದರ್ ಜಿಂಬಾಬ್ವೆ ವಿರುದ್ಧ 5 ಟಿ20ಯಲ್ಲಿ 8 ವಿಕೆಟ್ ಉರುಳಿಸಿ ಅತಿ ಹೆಚ್ಚು ವಿಕೆಟ್ ಪಡೆದ ಮೊದಲ ಬೌಲರ್ ಎನಿಸಿಕೊಂಡಿದ್ದಾರೆ. ಈ ವರೆಗೆ ಜಿಂಬಾಬ್ವೆ ವಿರುದ್ಧ ಅತಿ ಹೆಚ್ಚು ವಿಕೆಟ್‌ ಪಡೆದ ಸ್ಪಿನ್ನರ್‌ ಎಂಬ ದಾಖಲೆಯನ್ನು ಅಕ್ಷರ್‌ ಪಟೇಲ್‌ ಹೊಂದಿದರು.

ಇದೀಗ ಅಕ್ಷರ್‌ ಪಟೇಲ್‌ ಅವರನ್ನು ಸುಂದರ್‌ ಹಿಂದಿಕ್ಕಿ ಜಿಂಬಾಬ್ವೆ ವಿರುದ್ಧ ಈ ಸಾಧನೆ ಮಾಡಿದ ಮೊದಲ ಭಾರತೀಯ ಸ್ಪಿನ್ನರ್‌ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ . ಇದರೊಂದಿಗೆ ಜಿಂಬಾಬ್ವೆ ವಿರುದ್ಧ ಅತಿ ಹೆಚ್ಚು ವಿಕೆಟ್ ಪಡೆದ ಭಾರತೀಯ ಬೌಲರ್‌ಗಳ ಪೈಕಿ ದೀಪಕ್ ಚಹಾರ್ (8), ಮುಖೇಶ್ ಕುಮಾರ್ (8) ಮತ್ತು ವಾಷಿಂಗ್ಟನ್ ಸುಂದರ್ (8) ವಿಕೆಟ್‌ಗಳೊಂದಿಗೆ ಜಂಟಿಯಾಗಿ 1ನೇ ಸ್ಥಾನದಲ್ಲಿದ್ದಾರೆ.

Story first published: Monday, July 15, 2024, 13:05 [IST]
Other articles published on Jul 15, 2024
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+