For Quick Alerts
ALLOW NOTIFICATIONS  
For Daily Alerts
 

1329 ದಿನಗಳ ಬಳಿಕ ಟೀಮ್ ಇಂಡಿಯಾಕ್ಕೆ ವಾಶಿಂಗ್ಟನ್‌ ಸುಂದರ್ ಭರ್ಜರಿ ಕಂ ಬ್ಯಾಕ್‌

ಭಾರತ ಹಾಗೂ ನ್ಯೂಜಿಲೆಂಡ್ ನಡುವಣ ಎರಡನೇ ಟೆಸ್ಟ್ ಪುಣೆಯಲ್ಲಿ ನಡೆಯುತ್ತಿದೆ. ಈ ಪಂದ್ಯದಲ್ಲಿ ನ್ಯೂಜಿಲೆಂಡ್‌ ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್ ಮಾಡಿತು. ಪ್ರವಾಸಿ ನ್ಯೂಜಿಲೆಂಡ್ ತಂಡದ ಬ್ಯಾಟರ್‌ಗಳಿಗೆ ತಮಿಳು ನಾಡಿನ ಸ್ಪಿನ್ ಬೌಲರ್‌ ಕಾಟ ನೀಡಿದರು. ಇವರ ಪಿರ್ಕಿ ಬೌಲಿಂಗ್ ಎದುರಿಸುವಲ್ಲಿ ನ್ಯೂಜಿಲೆಂಡ್ ಕಕ್ಕಾಬಿಕ್ಕಿ ಆಯಿತು.

ಎರಡನೇ ಟೆಸ್ಟ್‌ ಪಂದ್ಯಕ್ಕಾಗಿ ಭಾರತ ಮೂರು ಬದಲಾವಣೆಗಳನ್ನು ಮಾಡಿಕೊಂಡಿತ್ತು. ಈ ವೇಳೆ ಎಲ್ಲರ ಚಿತ್ತ ಕದ್ದ ಬದಲಾವಣೆ, ವಾಶಿಂಗ್ಟನ್‌ ಸುಂದರ್‌. ಪುಣೆ ಅಂಗಳದಲ್ಲಿ ಮನಮೋಹಕ ಸ್ಪೇಲ್‌ ಮಾಡಿದ ವಾಶಿಂಗ್ಟನ್‌ ಸುಂದರ್ ದಾಖಲೆ ನಿರ್ಮಿಸಿದರು. 1329 ದಿನಗಳ ಭಾರತದ ಟೆಸ್ಟ್‌ ಜೆರ್ಸಿ ತೊಟ್ಟ ಅಂಗಳಕ್ಕೆ ಇಳಿದರು. ಟೀಮ್ ಇಂಡಿಯಾ ಭರ್ಜರಿ ಕಂ ಬ್ಯಾಕ್ ಮಾಡಿದ ವಾಶಿಂಗ್ಟನ್‌ ಸುಂದರ್ 59 ರನ್‌ಗಳಿಗೆ ಏಳು ವಿಕೆಟ್‌ ಕಬಳಿಸಿದರು.

Washington Sundar Takes 7 Wickets on Return After 1329 Days

ವಾಷಿಂಗ್ಟನ್ ಸುಂದರ್ ತಮ್ಮ ಕೊನೆಯ ಟೆಸ್ಟ್ ಪಂದ್ಯವನ್ನು 2021 ರಲ್ಲಿ ಆಡಿದ್ದರು. ಭಾರತ ಪ್ರವಾಸವನ್ನು ಬೆಳೆಸಿದ್ದ ಇಂಗ್ಲೆಂಡ್‌ ವಿರುದ್ಧ ಕೊನೆಯ ಬಾರಿಗೆ ಸುಂದರ್ ಕಣಕ್ಕೆ ಇಳಿದಿದ್ದರು. ಅಂದಿನಿಂದ ಅವರು ಟೆಸ್ಟ್‌ ಆಡಿರಲಿಲ್ಲ. ಎರಡನೇ ಟೆಸ್ಟ್‌ ಪಂದ್ಯದಲ್ಲಿ ಆಡುವ ಅವಕಾಶವನ್ನು ಪಡೆದ ವಾಶಿಂಗ್ಟನ್ ಸುಂದರ್‌, ಅನುಭವಿ ರವಿಚಂದ್ರನ್‌ ಅಶ್ವಿನ್‌ ಅವರಿಗೆ ಉತ್ತಮ ಸಾಥ್ ನೀಡಿದರು. ತಮ್ಮ ಕ್ಲಾಸಿಕ್‌ ರಚಿನ್ ರವೀಂದ್ರರನ್ನು ಬೌಲ್ಡ್ ಮಾಡಿ, ಭರ್ಜರಿ ಕಂ ಬ್ಯಾಕ್‌ ಮಾಡಿದರು.

ಐದು ಬೋಲ್ಡ್‌

ವಾಶಿಂಗ್ಟನ್ ಸುಂದರ್ ನ್ಯೂಜಿಲೆಂಡ್ ವಿರುದ್ಧ ಏಳು ವಿಕೆಟ್‌ ಪಡೆದರೆ, ಇದರಲ್ಲಿ ಐವರು ಬ್ಯಾಟರ್‌ಗಳು ಬೋಲ್ಡ್‌ ಆಗಿದ್ದಾರೆ. ಕಿವೀಸ್ ತಂಡದ ಮಧ್ಯಮ ಕ್ರಮಾಂಕದ ರಚಿನ್ ರವೀಂದ್ರ, ಟಾಮ್ ಬ್ಲಂಡೆಲ್, ಮಿಚೆಲ್ ಸ್ಯಾಂಟ್ನರ್, ಟೀಮ್ ಸೌಥಿ, ಅಜಾಜ್‌ ಪಟೇಲ್‌ ಅವರನ್ನು ಕ್ಲೀನ್ ಬೋಲ್ಡ್ ಮಾಡಿದರು.

Washington Sundar Takes 7 Wickets on Return After 1329 Days

ಬಹು ವರ್ಷಗಳ ನಂತರ ವಾಷಿಂಗ್ಟನ್ ಸುಂದರ್ ಟೆಸ್ಟ್ ಕ್ರಿಕೆಟ್‌ಗೆ ಮರಳಿದ್ದಾರೆ. ಈ ಮೊದಲು ಆಡಿದ ಎಲ್ಲಾ ಪಂದ್ಯಗಳಲ್ಲಿ ವಷಿಂಗ್ಟನ್‌ ಸುಂದರ್ ಪ್ರದರ್ಶನ ಉತ್ತಮವಾಗಿತ್ತು. ಗಾಯದ ಸಮಸ್ಯೆ ಇವರನ್ನು ಬಹುವಾಗಿ ಕಾಡಿತ್ತು. ಇವರು ಭಾರತಕ್ಕೆ ಭರ್ಜರಿ ಕಂ ಬ್ಯಾಕ್ ಮಾಡಿದ್ದಾರೆ. ಇವರು ಈ ಹಿಂದಿನ ಐದು ಪಂದ್ಯಗಳಲ್ಲಿ ನೀಡದ ಪ್ರದರ್ಶನವನ್ನು, ಕಂ ಬ್ಯಾಕ್ ಪಂದ್ಯದಲ್ಲಿ ಮಾಡಿ ಮಿಂಚಿದರು.

ವಾಷಿಂಗ್ಟನ್‌ ಸುಂದರ್‌ ನ್ಯೂಜಿಲೆಂಡ್‌ ತಂಡದ ಎಡಗೈ ಹಾಗೂ ಬಲಗೈ ಆಟಗಾರರನ್ನು ಕಾಡಿದರು. ಇವರು ಈ ಟೆಸ್ಟ್‌ಗೂ ಮೊದಲು ಐದು ಟೆಸ್ಟ್‌ ಪಂದ್ಯಗಳಲ್ಲಿ ಆರು ವಿಕೆಟ್ ಕಬಳಿಸಿದ್ದರು. ಆರನೇ ಟೆಸ್ಟ್‌ನಲ್ಲಿ ಅಮೋಘ ಬೌಲಿಗ್‌ ನಡೆಸಿದ ಸುಂದರ್ ಏಳು ವಿಕೆಟ್‌ ಪಡೆದರು. ಅವರು ಬ್ಯಾಟಿಂಗ್‌ನಲ್ಲಿಯೂ ಸ್ವಲ್ಪ ರನ್ ಗಳಿಸಿದರೆ, ಉಳಿದ ಬೌಲರ್‌ಗಳಿಗೆ ಕಂಠಕವಾಗಬಲ್ಲರು.

Story first published: Thursday, October 24, 2024, 16:12 [IST]
Other articles published on Oct 24, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+