Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ವಿಶೇಷ ಕ್ಲಬ್‌ ಸೇರಿದ ಟೀಮ್ ಇಂಡಿಯಾ ಆಲ್‌ರೌಂಡರ್‌

ಟೀಮ್ ಇಂಡಿಯಾ ಹಾಗೂ ನ್ಯೂಜಿಲೆಂಡ್ ನಡುವಣ ಎರಡನೇ ಟೆಸ್ಟ್‌ ಪಂದ್ಯದಲ್ಲಿ ಪ್ರವಾಸಿ ತಂಡ ಬಿಗಿ ಹಿಡಿತವನ್ನು ಸಾಧಿಸಿದೆ. ಈ ಪಂದ್ಯದಲ್ಲಿ ಆತಿಥೇಯ ಭಾರತ ಪ್ರದರ್ಶನ ನೀಡಿದ್ದರ ಹಿಂದೆ ವಾಷಿಂಗ್ಟನ್ ಸುಂದರ್‌ ಅವರ ಕೊಡುಗೆ ಅಪಾರ. ಎರಡನೇ ಟೆಸ್ಟ್‌ ಪಂದ್ಯದಲ್ಲಿ ಆಡುವ ಅವಕಾಶವನ್ನು ಪಡೆದ ವಾಷಿಂಗ್ಟನ್‌ ಸುಂದರ್‌ ಈಗ ವಿಶೇಷ ಕ್ಲಬ್‌ ಸೇರಿದ್ದಾರೆ. ನ್ಯೂಜಿಲೆಂಡ್‌ ವಿರುದ್ಧ ಮೊದಲ ಇನಿಂಗ್ಸ್‌ 7 ಹಾಗೂ ಎರಡನೇ ಇನಿಂಗ್ಸ್‌ನಲ್ಲಿ 4 ವಿಕೆಟ್‌ ಕಬಳಿಸಿರುವ ವಾಂಷಿಗ್ಟನ್‌ ಸುಂದರ್‌ 10 ವಿಕೆಟ್ ಸಾಧನೆ ಮಾಡಿದ್ದಾರೆ.

ನ್ಯೂಜಿಲೆಂಡ್ ವಿರುದ್ಧ ಟೆಸ್ಟ್‌ನಲ್ಲಿ ಈ ಸಾಧನೆ ಮಾಡಿದ ಭಾರತದ ಕೆಲವೇ ಕೆಲವು ಆಟಗಾರರ ಪಟ್ಟಿಗೆ ಇವರು ಸೇರಿಕೊಂಡಿದ್ದಾರೆ. ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್‌ನಲ್ಲಿ ಅತಿ ಹೆಚ್ಚು ಬಾರಿ 10 ವಿಕೆಟ್‌ಗಳನ್ನು ಪಡೆದ ಭಾರತೀಯ ಬೌಲರ್ ಎಂಬ ಹೆಗ್ಗಳಿಕೆ ರವಿಚಂದ್ರನ್ ಅಶ್ವಿನ್ ಅವರದ್ದಾಗಿದೆ. ಇವರು ಎರಡನೇ ಟೆಸ್ಟ್‌ನಲ್ಲೂ ತಂಡದ ಭಾಗವಾಗಿದ್ದಾರೆ.

Washington Sundar s 10 Wickets Keep India s Hopes Alive in Pune Test

ವಾಶಿಂಗ್ಟನ್‌ ಸುಂದರ ಬೌಲಿಂಗ್‌

ಅಶ್ವಿನ್‌ ಮೂರು ಬಾರಿ ನ್ಯೂಜಿಲೆಂಡ್ ವಿರುದ್ಧ 10 ವಿಕೆಟ್‌ ಕಬಳಿಸಿರುವ ಸಾಧನೆ ಮಾಡಿದ್ದಾರೆ. ಅನಿಲ್ ಕುಂಬ್ಳೆ ಇಎಸ್ ಪ್ರಸನ್ನ ಮತ್ತು ಎಸ್ ವೆಂಕಟರಾಘವನ್ ಕೂಡ ನ್ಯೂಜಿಲೆಂಡ್ ವಿರುದ್ಧ ತಲಾ 10 ವಿಕೆಟ್ ಕಬಳಿಸಿದ್ದಾರೆ. ಈಗ ಈ ಪಟ್ಟಿಗೆ ನೂತನವಾಗಿ ವಾಶಿಂಗ್ಟನ್ ಸುಂದರ್ ಹೆಸರು ಸೇರ್ಪಡೆಯಾಗಿದೆ. ಟೆಸ್ಟ್‌ ಕ್ರಿಕೆಟ್‌ನಲ್ಲಿ ಇದೇ ಮೊದಲ ಬಾರಿಗೆ ವಾಷಿಂಗ್ಟನ್ ಸುಂದರ್‌ 5 ವಿಕೆಟ್‌ ಸಾಧನೆ ಸಹ ಮಾಡಿದ್ದಾರೆ.

ಬೆಂಗಳೂರಿನಲ್ಲಿ ನಡೆದ ಮೊದಲ ಟೆಸ್ಟ್‌ ಪಂದ್ಯದಲ್ಲಿ ಟೀಮ್ ಇಂಡಿಯಾ 8 ವಿಕೆಟ್‌ ಸೋಲು ಕಂಡ ಮೇಲೆ ಆಯ್ಕೆದಾರರಿಗೆ ವಾಷಿಂಗ್ಟನ್‌ ಸುಂದರ್ ನೆನಪಾಗಿದ್ದಾರೆ. ಇವರು ಆಗ ರಣಜಿ ಟ್ರೋಫಿಯಲ್ಲಿ ತಮಿಳು ನಾಡು ಪರ ಆಡುತ್ತಿದ್ದರು. ಮೊದಲು ಪ್ರಕಟಿತ ತಂಡದಲ್ಲಿ ವಾಶಿಂಗ್ಟನ್ ಸುಂದರ್ ಅವರಿಗೆ ತಂಡದಲ್ಲಿ ಸ್ಥಾನವಿರಲಿಲ್ಲ. ಒಮ್ಮೆಲೆ ಇವರಿಗೆ ಬಿಸಿಸಿಐ ಆಯ್ಕೆ ಸಮಿತಿ ಬುಲಾವ್ ನೀಡಿತು. ತಂಡಕ್ಕೆ ಸೇರುತ್ತಿದ್ದಂತೆ ಆಡುವ ಅವಕಾಶವನ್ನು ಪಡೆದ ವಾಷಿಂಗ್ಟನ್‌ ಅಮೋಘ ಪ್ರದರ್ಶನ ನೀಡಿದರು.

ಟೀಮ್ ಇಂಡಿಯಾ ಮೊದಲ ಇನಿಂಗ್ಸ್‌ನಲ್ಲಿ ನ್ಯೂಜಿಲೆಂಡ್ ತಂಡವನ್ನು ಸಾಧಾರಣ ಮೊತ್ತಕ್ಕೆ ಕಟ್ಟಿ ಹಾಕಿತು. ಇದರಲ್ಲಿ ತಮಿಳುನಾಡಿನ ಇಬ್ಬರು ಸ್ಪಿನ್ ಬೌಲರ್‌ಗಳ ಕೊಡುಗೆ ಅಪಾರ. ವಾಷಿಂಗ್ಟನ್‌ ಸುಂದರ್‌ 7, ಅಶ್ವಿನ್‌ ಮೂರು ವಿಕೆಟ್‌ ಕಬಳಿಸಿದ್ದರು. ಆದರೆ ಮೊದಲ ಇನಿಂಗ್ಸ್‌ನಲ್ಲಿ ಬ್ಯಾಟರ್‌ಗಳು ಸ್ಥಿರ ಪ್ರದರ್ಶನ ನೀಡುವಲ್ಲಿ ವಿಫಲರಾದರು. ಕಿವೀಸ್‌ ಮೊದಲ ಇನಿಂಗ್ಸ್‌ನಲ್ಲಿ 100ಕ್ಕೂ ಹೆಚ್ಚು ರನ್‌ಗಳ ಮುನ್ನಡೆ ಸಾಧಿಸಿದ್ದು, ಈ ಪಂದ್ಯದಲ್ಲಿ ಬಿಗಿ ಹಿಡಿತ ಸಾಧಿಸಿದೆ.

Washington Sundar s 10 Wickets Keep India s Hopes Alive in Pune Test

ಟೀಮ್ ಇಂಡಿಯಾ ಎರಡನೇ ಇನಿಂಗ್ಸ್‌ನಲ್ಲಿ ಎಚ್ಚರಿಕಯ ಬ್ಯಾಟಿಂಗ್ ಮಾಡಿದ್ದೇ ಆದಲ್ಲಿ, ಗೆಲುವು ದಾಖಲಿಸಬಹುದು. ನಿಶ್ಚಿತವಾಗಿಯೂ ಭಾರತದ ಮುಂದೆ ಸವಾಲಿನ ಗುಡ್ಡವೇ ಇದೆ. ಈ ಸವಾಲನ್ನು ಟೀಮ್ ಇಂಡಿಯಾಗೆ ಮೆಟ್ಟಿ ನಿಲ್ಲುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

Story first published: Friday, October 25, 2024, 19:32 [IST]
Other articles published on Oct 25, 2024
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+