For Quick Alerts
ALLOW NOTIFICATIONS  
For Daily Alerts
 

ವಿಂಡೀಸ್ ಟೆಸ್ಟ್ ಸರಣಿಯಲ್ಲಿ ಆತನಿಗೆ ಅವಕಾಶ ನೀಡಿ: ಯುವ ಆಟಗಾರನ ಪರ ವಾಸಿಂ ಜಾಫರ್ ಬ್ಯಾಟ್

ಟೀಮ್ ಇಂಡಿಯಾದ ವೆಸ್ಟ್ ಇಂಡೀಸ್ ಒಪ್ರವಾಸ ಈಗ ಕುತೂಹಲ ಮೂಡಿಸಿದ್ದು ಅನುಭವಿ ಆಟಗಾರರ ಬದಲಿಗೆ ಯುವ ಆಟಗಾರರಿಗೆ ಹೆಚ್ಚಿನ ಅವಕಾಶ ದೊರೆಯುವ ನಿರೀಕ್ಷೆಯಿದೆ. ನಾಯಕ ರೋಹಿತ್ ಶರ್ಮಾ ಸೇರಿದಂತೆ ಅನುಭವಿ ಆಟಗಾರರು ಈ ಪ್ರವಾಸದಿಂದ ಹಿಂದೆ ಸರಿದು ಯುವ ಆಟಗಾರರಿಗೆ ಅವಕಾಶ ಮಾಡಿಕೊಡುವ ಸಾಧ್ಯತೆ ಹೆಚ್ಚಿದೆ. ಹೀಗಾಗಿ ಯಾವೆಲ್ಲಾ ಯುವ ಕ್ರಿಕೆಟಿಗರಿಗೆ ಈ ಸರಣಿಯಲ್ಲಿ ಅವಕಾಶ ದೊರೆಯಬಹುದು ಎನ್ನುವುದು ಕುತೂಹಲ ಮೂಡಿಸಿದೆ.

ಈ ಸಂದರ್ಭದಲ್ಲಿ ಮಾಜಿ ಕ್ರಿಕೆಟಿಗ ವಾಸಿಂ ಜಾಫರ್ ಪ್ರತಿಕ್ರಿಯೆ ನೀಡಿದ್ದು ಯುವ ಆಟಗಾರ ಯಶಸ್ವಿ ಜೈಸ್ವಾಲ್‌ಗೆ ಈ ವೆಸ್ಟ್ ಇಂಡೀಸ್ ಪ್ರವಾಸದಲ್ಲಿ ಅವಕಾಶ ನೀಡಬೇಕು ಎಂದಿದ್ದಾರೆ. ವೆಸ್ಟ್ ಇಂಡೀಸ್ ವಿರುದ್ಧದ ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಅವಕಾಶ ಪಡೆಯಲು ಯಶಸ್ವಿ ಜೈಸ್ವಾಲ್ ಅರ್ಹರಾಗಿದ್ದಾರೆ ಎಂದಿದ್ದಾರೆ ವಾಸಿಂ ಜಾಫರ್. ಯಶಸ್ವಿ ಜೈಸ್ವಾಲ್ ದೇಶೀಯ ಕ್ರಿಕೆಟ್‌ನ ಎಲ್ಲಾ ಮಾದರಿಯಲ್ಲಿಯೂ ಅದ್ಭುತ ಪ್ರದರ್ಶನ ನೀಡಿದ್ದು ಐಪಿಎಲ್‌ನಲ್ಲಿ ಅನ್‌ಕ್ಯಾಪ್‌ಡ್ ಆಟಗಾರನಾಗಿ ಅತಿ ಹೆಚ್ಚು ರನ್‌ಗಳಿಸಿದ ಆಟಗಾರ ಎಂಬ ದಾಖಲೆಯನ್ನು ಕೂಡ ತನ್ನದಾಗಿಸಿಕೊಂಡಿದ್ದಾರೆ.

Wasim Jaffer bat for Yashasvi Jaiswal said he should get a chance in test series against WI

"ವೆಸ್ಟ್ ಇಂಡೀಸ್ ಪ್ರವಾಸದಲ್ಲಿ ಸ್ಥಾನ ಪಡೆಯುವ ಆಟಗಾರರ ಪೈಕಿ ಯಶಸ್ವಿ ಜೈಸ್ವಾಲ್ ಕೂಡ ಒಬ್ಬರಾಗಿರುತ್ತಾರೆ ಎಂಬುದು ನನ್ನ ವಿಶ್ವಾಸ. ಎಲ್ಲಾ ಮಾದರಿಯಲ್ಲಿಯೂ ಅವರು ಅದ್ಭುತವಾಗಿ ಪ್ರದರ್ಶನ ನೀಡಿದ್ದಾರೆ. ಐಪಿಎಲ್ ಆಗಿರಲಿ, ದೇಶೀಯ ಕ್ರಿಕೆಟ್ ಆಗಿರಲಿ ಅಥವಾ ಭಾರತ ಎ ತಂಡದ ಪರವಾಗಿಯೂ ಜೈಸ್ವಾಲ್ ಅತ್ಯಂತ ಸ್ಥರವಾದ ಪ್ರದರ್ಶನ ನೀಡಿಕೊಂಡು ಬಂದಿದ್ದಾರೆ. ಹಗಾಗಿ ಅವರು ಭಾರತದ ಟೆಸ್ಟ್ ತಂಡದಲ್ಲಿ ಸ್ಥಾನ ಪಡೆಯುವುದು ಅಗತ್ಯವಾಗಿದೆ" ಎಂದಿದ್ದಾರೆ ಟೀಮ್ ಇಂಡಿಯಾದ ಮಾಜಿ ಆಟಗಾರ ಯಶಸ್ವಿ ಜೈಸ್ವಾಲ್.

ಮುಂದುವರಿದು ಮಾತನಾಡಿದ ಅವರು ಯಶಸ್ವಿ ಜೈಸ್ವಾಲ್ ಅವರು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್ ಪಂದ್ಯದಲ್ಲಿ ಮೀಸಲು ಆಟಗಾರನಾಗಿ ತಂಡದಲ್ಲಿದ್ದರು. ಭವಿಷ್ಯದ ದೃಷ್ಟಿಯಿಂದ ತಂಡದ ಮ್ಯಾನೇಜ್‌ಮೆಂಟ್ ಆತನನ್ನು ಬೆಳಸಬೇಕಿದೆ ಎಂದಿದ್ದಾರೆ ವಾಸಿಂ ಜಾಫರ್. ಯಶಸ್ವಿ ಜೈಸ್ವಾಲ್ 15 ಪ್ರಥಮ ದರ್ಜೆ ಪಂದ್ಯಗಳನ್ನು ಆಡಿದ್ದು 80.21 ಸರಾಸರಿಯಲ್ಲಿ 1,845 ರನ್ ಗಳಿಸಿದ್ದಾರೆ. ಮುಂಬೈನ ಈ ಆರಂಭಿಕ ಆಟಗಾರ ಒಂಬತ್ತು ಶತಕ ಮತ್ತು ಎರಡು ಅರ್ಧ ಶತಕಗಳನ್ನು ಬಾರಿಸಿದ್ದಾರೆ. ಇನ್ನು 26 ಪ್ರಥಮ ದರ್ಜೆ ಇನ್ನಿಂಗ್ಸ್‌ಗಳಲ್ಲಿ 265 ಅವರ ಅವರ ಅತ್ಯುತ್ತಮ ಸ್ಕೋರ್ ಆಗಿದೆ.

"ಈ ಬಾರಿ ಆತನಿಗೆ ಅವಕಾಶವನ್ನು ನೀಡಬೇಕು. ಆತ ಕೂಡ ವಿಶ್ವ ಟೆಸ್ಟ್ ಚಾಂಪೊಯನ್‌ಶಿಪ್‌ನಲ್ಲಿ ತಂಡದ ಭಾಗವಾಗಿದ್ದರು ಕೂಡ ಆಡುವ ಬಳಗದಲ್ಲಿ ಆರಂಭಿಕರಾಗಿ ಶುಬ್ಮನ್ ಗಿಲ್ ಹಾಗೂ ರೋಹಿತ್ ಶರ್ಮಾ ಇದ್ದರು. ಹಾಗಾಗಿ ಸಹಜವಾಗಿಯೇ ಈತನಿಗೆ ಅವಕಾಶ ದೊರೆಯಲಿಲ್ಲ. ನನಗನಿಸುವುದೇನೆಂದರೆ ಆತನನ್ನು ತಂಡದೊಂದಿಗೆ ಕಳುಹಿಸಬೇಕು. ಆಗ ಆತ ಬೆಳವಣಿಗೆ ಸಾಧಿಸುತ್ತಾರೆ. ಯಾವಾಗ ಅವಕಾಶ ದೊರೆಯುತ್ತದೆಯೋ ಆಗ ಆತನಿಂದ ಉತ್ತಮ ಪ್ರದರ್ಶನ ಬರುತ್ತದೆ" ಎಂದಿದ್ದಾರೆ ಭಾತದ ಆಜಿ ಕ್ರಿಕೆಟಿಗ ವಾಸಿಂ ಜಾಫರ್.

ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್ ಪಂದ್ಯದ ಬಳಿಕ ಟೀಮ್ ಇಂಡಿಯಾ ಸುದೀರ್ಘ ಕಾಲದ ವಿಶ್ರಾಂತಿಯ ಸಮಯ ಹೊಂದಿದೆ. ಜುಲೈ ತಿಂಗಳಿನಲ್ಲಿ ವೆಸ್ಟ್ ಇಂಡೀಸ್ ಪ್ರವಾಸ ಕೈಗೊಳ್ಳಲಿದ್ದು

Story first published: Friday, June 16, 2023, 16:06 [IST]
Other articles published on Jun 16, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+