ಐಪಿಎಲ್ 2021: ಗೇಲ್ ಯಾವ ಕ್ರಮಾಂಕದಲ್ಲಿ ಕಣಕ್ಕಿಳಿಯಲಿದ್ದಾರೆ ಎಂಬ ಸುಳಿವು ನೀಡಿದ ಕೋಚ್ ಜಾಫರ್

ಕಳೆದ ಐಪಿಎಲ್ ಆವೃತ್ತಿಯ ಆರಂಭದಲ್ಲಿ ಬೆಂಚ್ ಕಾದಿದ್ದ ಸ್ಪೋಟಕ ಬ್ಯಾಟ್ಸ್‌ಮನ್ ಕ್ರಿಸ್ ಗೇಲ್ ಬಳಿಕ ಅನಾರೋಗ್ಯಕ್ಕೆ ತುತ್ತಾಗಿ ಮೊದಲಾರ್ಧದ ಐಪಿಎಲ್‌ನಿಂದ ಹೊರಗುಳಿದಿದ್ದರು. ಬಳಿಕ ಆಡುವ ಬಳಗದಲ್ಲಿ ಸ್ಥಾನ ಪಡೆದುಕೊಂಡ ಕ್ರಿಸ್ ಗೇಲ್ ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದಿದ್ದರು. ಹೊಸ ಕ್ರಮಾಂಕದಲ್ಲಿ ಅದ್ಭುತವಾಗಿ ಬ್ಯಾಟ್ ಬೀಸಿದ್ದ ಕ್ರಿಸ್ ಗೇಲ್ ದ್ವಿತಿಯಾರ್ಧದಲ್ಲಿ ಅದ್ಭುತವಾಗಿ ಪಂಜಾಬ್ ತಂಡ ತಿರುಗಿ ಬೀಳಲು ಪ್ರಮುಖ ಕಾರಣರಾಗಿದ್ದರು.
ಆದರೆ ಈ ಬಾರಿಯ ಆವೃತ್ತಿಯಲ್ಲಿ ಕ್ರಿಸ್ ಗೇಲ್ ಯಾವ ಕ್ರಮಾಂಕದಲ್ಲಿ ಇಳಿಯುತ್ತಾರೆ ಎಂಬುದನ್ನು ಈವರೆಗೂ ತಂಡ ಖಚಿತವಾಗಿ ಹೇಳಿಲ್ಲ. ಆದರೆ ಪಂಜಾಬ್ ಕಿಂಗ್ಸ್ ತಂಡದ ಬ್ಯಾಟಿಂಗ್ ಕೋಚ್ ವಾಸಿಂ ಜಾಫರ್ ಈ ಬಗ್ಗೆ ಸುಳಿವನ್ನು ನೀಡಿದ್ದಾರೆ.
ಕಳೆದ ಬಾರಿಯ ಆವೃತ್ತಿಯಲ್ಲಿ ಮೂರನೇ ಕ್ರಮಾಂಕದಲ್ಲಿ ಮಿಂಚಿದ್ದ ಕ್ರೀಸ್ ಗೇಲ್ ಈ ಬಾರಿಯ ಆವೃತ್ತಿಯಲ್ಲಿಯೂ ಅದೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಇಳಿಯುವ ಸಾಧ್ಯತೆಯಿದೆ ಎಂದು ವಾಸಿಂ ಜಾಫರ್ ಹೇಳಿದ್ದಾರೆ. ಹೀಗಾಗಿ ಕಳೆದ ಬಾರಿ ಆರಂಭಿಕರಾಗಿ ಅತ್ಯುತ್ತಮ ಯಶಸ್ಸು ಪಡೆದಿದ್ದ ಕನ್ನಡಿಗ ಜೋಡಿಯಾದ ಕೆಎಲ್ ರಾಹುಲ್ ಹಾಗೂ ಮಯಾಂಕ್ ಅಗರ್ವಾಲ್ ಈ ಬಾರಿಯೂ ಆರಂಭಿಕರಾಗಿ ಮುಂದುವರಿಯುವುದು ಬಹುತೇಕ ಖಚಿತವಾಗಿದೆ.
"ನಮ್ಮ ಆರಂಭಿಕ ಜೋಡಿಯಾದ ಮಯಾಂಕ್ ಅಗರ್ವಾಲ್ ಹಾಗೂ ಕೆಎಲ್ ರಾಹುಲ್ ಕಳೆದ ವರ್ಷ ಕ್ರಿಸ್ ಗೇಲ್ ತಂಡವನ್ನು ಸೇರಿಕೊಳ್ಳುವ ಮುನ್ನ ಅತ್ಯದ್ಭುತವಾಗಿ ಪ್ರದರ್ಶನ ನೀಡಿದ್ದರು. ಬಳಿಕ ಗೇಲ್ ಮೂರನೇ ಕ್ರಮಾಂಕದಲ್ಲಿ ಶ್ರೇಷ್ಠ ಬಲವನ್ನು ನೀಡಿದರು. ಅದು ಅವರಿಗೆ ಹಾಗೂ ತಂಡಕ್ಕೆ ಹೊಸದಾಗಿತ್ತು. ಮಧ್ಯಮ ಓವರ್‌ಗಳಲ್ಲಿ ಎದುರಾಳಿ ತಂಡದ ಸ್ಪಿನ್ನರ್‌ಗಳಿಗೆ ಹಾಗೂ ಬೌಲರ್‌ಗಳಿಗೆ ಒತ್ತಡವನ್ನು ಉಂಟುಮಾಡುವಲ್ಲಿ ಗೇಲ್ ಯಶಸ್ವಿಯಾಗಿದ್ದರು"
"ಮಯಾಂಕ್, ಕೆಎಲ್ ಹಾಗೂ ಗೇಲ್ ಸಾಕಷ್ಟು ರನ್‌ಗಳನ್ನು ಹರಿಸಿದರು. ಆರಂಭಿಕ ಆಟಗಾರರು ಅದ್ಭುತವಾದ ಫಾರ್ಮ್‌ನಲ್ಲಿದ್ದರು. ಅವರಿಬ್ಬರೂ ತಂಡದ ಪ್ರಮುಖವಾದ ಆಟಗಾರರು. ಹೀಗಾಗಿ ಬ್ಯಾಟಿಂಗ್‌ನ ಕ್ರಮಾಂಕವನ್ನು ಬದಲಾವಣೆಯನ್ನು ಮಾಡಲು ನಾನು ಯಾವುದೇ ಕಾರಣಗಳನ್ನು ಹೊಂದಿಲ್ಲ. ಬಹುಶಃ ನಾವು ಈ ಬಾರಿಯೂ ಮಯಾಂಕ್ ಹಾಗೂ ಕೆಎಲ್ ಅವರ ಮೂಲಕ ಇನ್ನಿಂಗ್ಸ್‌ಅನ್ನು ಆರಂಭಿಸಲಿದ್ದೇವೆ. ಗೇಲ್ ಮೂರನೇ ಕ್ರಮಾಂಕದಲ್ಲಿ ಆಡಲಿದ್ದಾರೆ" ಎಂದು ವಾಸಿಂ ಜಾಫರ್ ಹೇಳಿಕೆಯನ್ನು ನೀಡಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications