WTC finalಗೆ ಕೋಡ್ ಮೂಲಕ ತಂಡ ಪ್ರಕಟಿಸಿದ ವಾಸಿಮ್ ಜಾಫರ್, ಕೋಡ್ ಬಿಡಿಸಿ!

ಸೌತಾಂಪ್ಟನ್: ಭಾರತ ಮತ್ತು ನ್ಯೂಜಿಲೆಂಡ್ ಮಧ್ಯೆ ಜೂನ್ 18-22ರ ವರೆಗೆ ಕುತೂಹಲಕಾರಿ ಐಸಿಸಿ ವರ್ಲ್ಡ್ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯ ನಡೆಯಲಿದೆ. ಟೆಸ್ಟ್ ಚಾಂಪಿಯನ್‌ಶಿಪ್ ಚೊಚ್ಚಲ ಆವೃತ್ತಿಯ ಫೈನಲ್ ಪಂದ್ಯವಿದು. ಸೌತಾಂಪ್ಟನ್‌ನ ಏಜಸ್‌ಬೌಲ್ ಸ್ಟೇಡಿಯಂನಲ್ಲಿ ಪಂದ್ಯ 3.30 PMಗೆ ಶುರುವಾಗಲಿದೆ.
ಭಾರತ ಮತ್ತು ನ್ಯೂಜಿಲೆಂಡ್ ಎರಡೂ ದೇಶಗಳೂ ಟೆಸ್ಟ್ ಚಾಂಪಿಯನ್‌ಶಿಪ್‌ಗಾಗಿ 15 ಜನರ ತಂಡಗಳನ್ನು ಪ್ರಕಟಿಸಿವೆ. ಎರಡೂ ತಂಡಗಳೂ ಬಲಿಷ್ಠವಾಗಿವೆ. ಭಾರತ 15 ಜನರ ತಂಡ ಪ್ರಕಟವಾದ ಬಳಿಕ ಟೀಮ್ ಇಂಡಿಯಾದ ಮಾಜಿ ಬ್ಯಾಟ್ಸ್‌ಮನ್ ವಾಸಿಮ್ ಜಾಫರ್ ತನ್ನ ನೆಚ್ಚಿನ ಭಾರತ ಪ್ಲೇಯಿಂಗ್ XI ಪ್ರಕಟಿಸಿದ್ದಾರೆ.
ವಿಶೇಷವೆಂದರೆ ಎಲ್ಲ ಕ್ರಿಕೆಟಿಗರೂ ತಮ್ಮ ನೆಚ್ಚಿನ ತಂಡವನ್ನು ಸಾಮಾನ್ಯವಾಗಿ ಪ್ರಕಟಿಸಿದ್ದಾರೆ. ಆದರೆ ವಾಸಿಮ್ ಜಾಫರ್ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ತಂಡಗಳನ್ನು ಆಟಗಾರರ ಸಾಲಿನಲ್ಲಿ ಹೆಸರಿಸಿದ್ದಾರೆ. 'ವರ್ಲ್ಡ್ ಟೆಸ್ಟ್ ಫೈನಲ್‌ಗೆ ನನ್ನ ನೆಚ್ಚಿನ ತಂಡ. ಈ ವಿಡಿಯೋದಲ್ಲಿ ಈ ಆಟಗಾರರನ್ನು ನಾನು ಡಿ-ಕೋಡ್ ಮಾಡಿದ್ದೇನೆ' ಎಂದು ಜಾಫರ್ ಟ್ವೀಟ್‌ನಲ್ಲಿ ಬರೆದುಕೊಂಡಿದ್ದಾರೆ.
ವಾಸಿಮ್ ಜಾಫರ್ ಅವರ ಈ ಪ್ಲೇಯಿಂಗ್ XI ಅನ್ನು ಡಿಕೋಡ್ ಮಾಡೋಕೆ ಆಗುತ್ತಾ ಟ್ರೈ ಮಾಡಿ, ಹಾಗೆ ಮೇಲಿನ ವಿಡಿಯೋ ಕೂಡ ನೋಡಿ. ವಿಡಿಯೋ ಲಿಂಕ್ ಮೇಲಿನ ಟ್ವೀಟ್‌ನಲ್ಲಿದೆ
ಜಾಫರ್ ನೆಚ್ಚಿನ ಭಾರತ ಪ್ಲೇಯಿಂಗ್ XI: 1- ಮುಂಬೈ ಇಂಡಿಯನ್ಸ್ (MI), 2- ಕೋಲ್ಕತ್ತಾ ನೈಟ್ ರೈಡರ್ಸ್ (KKR), 3- ಚೆನ್ನೈ ಸೂಪರ್ ಕಿಂಗ್ಸ್ (CSK), 4- ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB), 5- ಡೆಲ್ಲಿ ಕ್ಯಾಪಿಟಲ್ಸ್ (DC), 6- ಡೆಲ್ಲಿ ಕ್ಯಾಪಿಟಲ್ಸ್ (DC), 7- ಚೆನ್ನೈ ಸೂಪರ್ ಕಿಂಗ್ಸ್ (CSK), 8- DC, 9- ಡೆಲ್ಲಿ ಕ್ಯಾಪಿಟಲ್ಸ್ (DC), 10- ಪಂಜಾಬ್ ಕಿಂಗ್ಸ್ (PBKS), 11- ಮುಂಬೈ ಇಂಡಿಯನ್ಸ್ (MI).
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications