ಧೋನಿ ಅಲ್ಲ: ವಾಸಿಮ್ ಜಾಫರ್ ಹೆಸರಿಸಿದ ಚಾಣಾಕ್ಷ ಕ್ರಿಕೆಟಿಗ ಯಾರು?!

ವಿಶ್ವಕಂಡ ಚಾಣಾಕ್ಷ ಕ್ರಿಕೆಟಿಗ ಯಾರು ಅಂದರೆ ಬಹುಶಃ ಹೆಚ್ಚಿನವರ ಉತ್ತರ ಅದು ಮಹೇಂದ್ರ ಸಿಂಗ್ ಧೋನಿ ಎಂಬುದೇ ಆಗಿರುತ್ತದೆ. ಅದರಲ್ಲೂ ಭಾರತೀಯರಲ್ಲಿ ಈ ಪ್ರಶ್ನೆಯನ್ನು ಕೇಳಿದರೆ ಧೋನಿ ಹೊರತುಪಡಿಸಿ ಬೇರೆ ಯಾರ ಹೆಸರನ್ನೂ ಹೇಳಲು ಸಾಧ್ಯವಿಲ್ಲ.
ಧೋನಿ ಆಟದ ಶೈಲಿಯ ಬಗ್ಗೆ ಅನೇಕರಿಗೆ ತಕರಾರಿದ್ದರೂ ಆಟದಲ್ಲಿ ತೋರ್ಪಡಿಸುತ್ತಿದ್ದ ನಿರ್ಣಯಗಳು, ನಿರ್ಧಾರಗಳು ಎಲ್ಲರಿಗೂ ಮೆಚ್ಚುಗೆಯಾಗುವಂತೆಯೇ ಇರುತ್ತಿತ್ತು. ಹೀಗಾಗಿ ಧೋನಿಯನ್ನು ಚಾಣಾಕ್ಷ ನಾಯಕ ಎಂದು ಕರೆಯಲಾಗುತ್ತದೆ.
ಆದರೆ ಈ ಪ್ರಶ್ನೆ ಟೀಮ್ ಇಂಡಿಯಾದ ಮಾಜಿ ಟೆಸ್ಟ್ ಆಟಗಾರ ವಾಸಿಮ್ ಜಾಫರ್ ಅವರಿಗೆ ಸಾಮಾಜಿಕ ಜಾಲತಾಣದಲ್ಲಿ ಕೇಳಲಾಗಿತ್ತು. ಈ ಪ್ರಶ್ನೆಗೆ ಜಾಫರ್ ಕೊಟ್ಟ ಉತ್ತರ ಅನಿರೀಕ್ಷಿತವಾಗಿತ್ತು.

ಧೋನಿಯನ್ನು ಹೆಸರಿಸದ ಜಾಫರ್
ಟ್ವಿಟ್ಟರ್‌ನಲ್ಲಿ ವಾಸಿಮ್ ಜಾಫರ್ ಅವರಿಗೆ ಈ ಪ್ರಶ್ನೆ ಎದುರಾಗಿತ್ತು. ಆದರೆ ಈ ಪ್ರಶ್ನೆಗೆ ವಾಸಿಮ್ ಜಾಫರ್ ಟೀಮ್ ಇಂಡಿಯಾದ ಮಾಜಿ ನಾಯಕ ಧೋನಿ ಹೆಸರನ್ನು ತೆಗೆದುಕೊಂಡಿಲ್ಲ. ಬದಲಾಗಿ ಮತ್ತೋರ್ವ ಕ್ರಿಕೆಟಿನ ಹೆಸರನ್ನು ಹೇಳಿ ಆಶ್ಚರ್ಯವನ್ನುಂಟು ಮಾಡಿದ್ದಾರೆ.

ಜಾಫರ್ ಹೇಳಿದ್ದು ಹಿಟ್‌ಮ್ಯಾನ್ ಹೆಸರು
ಟೀಮ್ ಇಂಡಿಯಾ ಟೆಸ್ಟ್ ತಂಡದ ಮಾಜಿ ಆರಂಭಿಕ ಆಟಗಾರ ವಾಸಿಮ್ ಜಾಫರ್ ಯಾರು ಚಾಣಾಕ್ಷ ಕ್ರಿಕೆಟಿಗ ಎಂಬ ಪ್ರಶ್ನೆಗೆ ಕೊಟ್ಟ ಉತ್ತರ ರೋಹಿತ್ ಶರ್ಮಾ. ಹೌದು ಟೀಮ್ ಇಂಡಿಯಾದ ಉಪನಾಯಕ ರೋಹಿತ್ ಶರ್ಮಾ ಕ್ರಿಕೆಟ್‌ನ ಚಾಣಾಕ್ಷ ಆಟಗಾರ ಎಂದು ಜಾಫರ್ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ಚಾಣಾಕ್ಷತೆಗೆ ಧೋನಿ ಹೆಸರುವಾಸಿ:
ಟೀ್ ಇಂಡಿಯಾದ ಮಾಜಿ ನಾಯಕ ಧೋನಿ ಭಾರತಕ್ಕೆ ಒಂದಲ್ಲ ಎರಡಲ್ಲ ಮೂರು ಐಸಿಸಿ ಟ್ರೋಫಿಯನ್ನು ತಂದುಕೊಟ್ಟ ನಾಯಕ. ಒತ್ತಡದ ಸಂದರ್ಭದಲ್ಲ ಧೋನಿ ತೆಗೆದುಕೊಳ್ಳುತ್ತಿದ್ದ ಅಚ್ಚರಿಯ ನಿರ್ಧಾರಗಳು ಆತನ್ನು ಚಾಣಾಕ್ಷ ಎಂದು ಕರೆಸಿಕೊಳ್ಳವಂತೆ ಮಾಡಿದೆ. ಆದರೆ ಜಾಫರ್ ಧೋನಿ ಹೆಸರನ್ನುರನ್ನು ಉಲ್ಲೇಖಿಸದೆ ರೋಹಿತ್‌ಗೆ ಈ ಬಿರುದು ನೀಡಿದ್ದಾರೆ.

2023ರ ವಿಶ್ವಕಪ್‌ಗೆ ರೋಹಿತ್ ಮುನ್ನಡೆಸಲಿ
ಇದೇ ಸಂದರ್ಭದಲ್ಲಿ ವಾಸಿಮ್ ಜಾಫರ್ ಮುಂದಿನ ಏಕದಿನ ವಿಶ್ವಕಪ್‌ನಲ್ಲಿ ಟೀಮ್ ಇಂಡಿಯಾವನ್ನು ರೋಹಿತ್ ಶರ್ಮಾ ಮುನ್ನಡೆಸಲಿ ಎಂಬ ಆಶಯವನ್ನು ವ್ಯಕ್ತಪಡಿಸಿದ್ದಾರೆ. ರೋಹಿತ್ ನಾಯಕತ್ವದಲ್ಲಿ ಭಾರತವನ್ನು ಮುಂದಿನ ವಿಶ್ವಕಪ್‌ನಲ್ಲಿ ಕಾದಾಡುವುದನ್ನು ನೋಡಲು ಇಷ್ಟಪಡುತ್ತೇನೆ ಎಂದು ಜಾಫರ್ ಹೇಳಿದ್ದಾರೆ.

ಐಪಿಎಲ್‌ನಲ್ಲಿ ಅದ್ಭುತ ಆಟ
ರೋಹಿತ್ ಶರ್ಮಾ ಐಪಿಎಲ್‌ನಲ್ಲಿ ತಾವು ಮುನ್ನಡೆಸುವ ಮುಂಬೈ ಇಂಡಿಯನ್ಸ್ ತಣಡವನ್ನು ಮೂರುಬಾರಿ ಚಾಂಪಿಯನ್ ಪಟ್ಟದಲ್ಲಿ ಕೂರಿಸಿದ್ದಾರೆ. ಮಾತ್ರವಲ್ಲ ರೋಹಿತ್ ಶರ್ಮಾ ಭಾರತದ ಉತ್ತಮ ಸ್ಥಿರತೆಯುಳ್ಳ ಆಟಗಾರ. ಏಕದಿನದಲ್ಲಿ 224 ಪಂದ್ಯಗಳನ್ನಾಡಿರುವ ರೋಹಿತ್ 49.3ರ ಸರಾಸರಿಯಲ್ಲಿ 9115 ರನ್‌ಗಳಿಸಿದರೆ, ಟಿ20ಯಲ್ಲಿ 32.6 ಸರಾಸರಿಯಲ್ಲಿ ಬ್ಯಾಟಿಂಗ್ ಮಾಡಿದ್ದು 138.8ರಷ್ಟು ಸ್ಟ್ರೈಕ್‌ರೇಟ್ ಹೊಂದಿದ್ದಾರೆ.

ಜಾಫರ್‌ಗೆ ಫೇವರೀಟ್ ಜೊತೆಗಾರ ಯಾರು?
ವಾಸಿಮ್ ಜಾಫರ್ ಇನ್ನು ಹಲವು ಪ್ರಶ್ನೆಗಳಿಗೆ ಉತ್ತರವನ್ನು ನೀಡಿದ್ದಾರೆ. ಅದರಲ್ಲಿ ಮತ್ತೊಂದು ಪ್ರಮುಖ ಪ್ರಶ್ನೆಯೆಂದರೆ " ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ನಿಮ್ಮ ಇಷ್ಟದ ಜೊತೆಗಾರ ಯಾರು?" ಎಂದು ಇದಕ್ಕೆ ವಾಸಿಮ್ ಜಾಫರ್ ವಿರೇಂದ್ರ ಸೆಹ್ವಾಗ್ ಹೆಸರನ್ನು ಹೇಳಿದ್ದಾರೆ.

2000ನೇ ಇಸವಿಯಲ್ಲಿ ಟೀಮ್ ಇಂಡಿಯಾ ಪ್ರವೇಶ
ವಾಸಿಮ್ ಜಾಫರ್ 2000ನೇ ಇಸವಿಯಲ್ಲಿ ಟೀಮ್ ಇಂಡಿಯಾಗೆ ಪದಾರ್ಪಣೆ ಮಾಡಿದರು. 2008ರಲ್ಲಿ ತಮ್ಮ ಕೊನೆಯ ಅಂತಾರಾಷ್ಟ್ರೀಯ ಟೆಸ್ಟ್ ಪಂದ್ಯವನ್ನಾಡಿದರು. ದೇಸಿ ಕ್ರಿಕೆಟ್‌ನಲ್ಲಿ ಅದ್ಭುತ ದಾಖಲೆ ಹೊಂದಿರುವ ಜಾಫರ್ ಇತ್ತೀಚೆಗಷ್ಟೇ ದೇಸಿ ಕ್ರಿಕೆಟ್‌ಗೆ ನಿವೃತ್ತಿಯನ್ನು ಹೇಳಿದ್ದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications