Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಪಂಜಾಬ್-ಮುಂಬೈ-ಟೀಮ್ ಇಂಡಿಯಾ ಸೇರಿದ ಮಾರ್ಕಂಡೇಯ ಕಂಡೀರಾ?

‘Wasn’t expecting this’ – Mayank Markande delighted after maiden India call-up

ಚಂಡೀಗಢ, ಫೆಬ್ರವರಿ 16: ಫೆಬ್ರವರಿ 24ರಿಂದ ಆರಂಭಗೊಳ್ಳಲಿರುವ ಪ್ರವಾಸಿ ಆಸ್ಟ್ರೇಲಿಯಾ ವಿರುದ್ಧ ಟಿ20 ಸರಣಿಗಾಗಿ ಭಾರತ ತಂಡದಲ್ಲಿ ಸ್ಥಾನ ಲಭಿಸಿರುವುದಕ್ಕೆ ಯುವ ಆಟಗಾರ ಮಯಾಂಕ್ ಮಾರ್ಕಂಡೆ ಸಂತಸ ವ್ಯಕ್ತಪಡಿಸಿದ್ದಾರೆ. ನಾನಿದನ್ನು ನಿರೀಕ್ಷಿಸಿರಲಿಲ್ಲ. ನನ್ನ ಪಾಲಿಗಿದು ಅನಿರೀಕ್ಷಿತ ಸಂಭ್ರಮ ಎಂದವರು ಹೇಳಿದ್ದಾರೆ.

ಆಸ್ಟ್ರೇಲಿಯಾ ವಿರುದ್ಧ ಎರಡು ಪಂದ್ಯಗಳ ಟಿ20 ಸರಣಿ ಮತ್ತು ಐದು ಪಂದ್ಯಗಳ ಏಕದಿನ ಸರಣಿಗಾಗಿ ಬಿಸಿಸಿಐ ಭಾರತ ತಂಡಗಳನ್ನು ಪ್ರಕಟಿಸಿತ್ತು. ಇದರಲ್ಲಿ ಮಯಾಂಕ್ ಮಾರ್ಕಂಡೆ ಹೆಸರನ್ನು ಟಿ20 ಸರಣಿಗಾಗಿ ಪ್ರಕಟಿಸಲಾದ 15 ಜನರ ತಂಡದಲ್ಲಿ ಹೆಸರಿಸಲಾಗಿತ್ತು.

ಪಂಜಾಬ್‌ನ ಪಾಟಿಯಾಲದಿಂದ ಮುಂಬೈ ಇಂಡಿಯನ್ಸ್‌ಗೆ ಅಲ್ಲಿಂದ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡುವುದರಲ್ಲಿರುವ ಉದಯೋನ್ಮುಖ ಆಟಗಾರ ಮಾರ್ಕಂಡೆ, ಆಸ್ಟ್ರೇಲಿಯಾ-ಭಾರತ ಟಿ20 ಸರಣಿಯಲ್ಲಿ ಅದೃಷ್ಟ ಪರೀಕ್ಷೆ ಮಾಡಿಕೊಳ್ಳುವುದರಲ್ಲಿದ್ದಾರೆ.

ಒಂದೇ ವರ್ಷದಲ್ಲಿ ಗಣನೀಯ ಸಾಧನೆ

ಒಂದೇ ವರ್ಷದಲ್ಲಿ ಗಣನೀಯ ಸಾಧನೆ

ರಿಸ್ಟ್ ಸ್ಪಿನ್ನರ್ ಮಯಾಂಕ್ ಈ ಹಿಂದೆ ದೇಸೀ ಕ್ರಿಕೆಟ್‌ನಲ್ಲಿ ಮಿಂಚಿದ್ದರು. ವಿಶೇಷವೆಂದರೆ ಮಾರ್ಕಂಡೆ ಒಂದೇ ವರ್ಷದಲ್ಲಿ ಲಿಸ್ಟ್ ಎ, ಐಪಿಎಲ್ (2018) ಮತ್ತು ರಣಜಿ ಟ್ರೋಫಿಗೆ ಪಾದಾರ್ಪಣೆ ಮಾಡಿ ಗಮನ ಸೆಳೆದಿದ್ದರು. ಇದೀಗ ಮಾರ್ಕಂಡೆಗೆ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಭಾರತವನ್ನು ಪ್ರತಿನಿಧಿಸುವ ಅವಕಾಶ ಒದಗಿ ಬಂದಿದೆ.

ಮುಂಬೈ ತಂಡದಲ್ಲಿ ಮಿಂಚು

ಮುಂಬೈ ತಂಡದಲ್ಲಿ ಮಿಂಚು

ಪಂಜಾಬ್‌ನ ಪಾಟಿಯಾಲದವರಾದ ಮಯಾಂಕ್ ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್ ತಂಡದಲ್ಲಿ ಉತ್ತಮ ಪ್ರದರ್ಶನ ನೀಡಿದ್ದರು. ಆದರೆ ಅಂತಾರಾಷ್ಟ್ರೀಯ ಪಂದ್ಯಕ್ಕಾಗಿ ಮಾರ್ಕಂಡೆಗೆ ಅವಕಾಶ ಲಭಿಸಿರುವುದು ಇತ್ತೀಚೆಗಷ್ಟೇ ಮುಕ್ತಾಯಗೊಂಡ ಭಾರತ ಎ-ಇಂಗ್ಲೆಂಡ್ ನಡುವಣ ಅನಧಿಕೃತ ಟೆಸ್ಟ್ ಸರಣಿಯ ಪ್ರದರ್ಶನದಿಂದ.

31 ರನ್‌ಗೆ 5 ವಿಕೆಟ್

31 ರನ್‌ಗೆ 5 ವಿಕೆಟ್

ಭಾರತ ಪ್ರವಾಸ ಕೈಗೊಂಡಿದ್ದ ಇಂಗ್ಲೆಂಡ್ ಲಯನ್ಸ್ ತಂಡ ಭಾರತ 'ಎ' ವಿರುದ್ಧ ಮೈಸೂರಿನಲ್ಲಿ ದ್ವಿತೀಯ ಅನಧಿಕೃತ ಟೆಸ್ಟ್ ಪಂದ್ಯವನ್ನಾಡಿತ್ತು. ಇದರಲ್ಲಿ ಭಾರತ ಒಂದು ಇನ್ನಿಂಗ್ಸ್ ಸಹಿತ 68 ರನ್ ಗೆಲುವನ್ನಾಚರಿಸಿತ್ತು. ದ್ವಿತೀಯ ಇನ್ನಿಂಗ್ಸ್‌ನಲ್ಲಿ ಇಂಗ್ಲೆಂಡ್ ಕೇವಲ 180 ರನ್ನಿಗೆ ಎಲ್ಲಾ ವಿಕೆಟ್ ಒಪ್ಪಿಸಿ ಶರಣಾಗಿತ್ತು. ಈ ವೇಳೆ ಮಾರ್ಕಂಡೆ ಕೇವಲ 31 ರನ್ನಿಗೆ ಇಂಗ್ಲೆಂಡ್ ನ 5 ವಿಕೆಟ್‌ಗಳನ್ನು ಕಸಿದುಕೊಳ್ಳುವ ಮೂಲಕ ಪಾರಮ್ಯ ಮೆರೆದಿದ್ದರು.

ಎರಡು ಪಂದ್ಯಗಳ ಟಿ20 ಸರಣಿಗೆ ಭಾರತ ತಂಡ

ಎರಡು ಪಂದ್ಯಗಳ ಟಿ20 ಸರಣಿಗೆ ಭಾರತ ತಂಡ

ವಿರಾಟ್ (ಸಿ), ರೋಹಿತ್ (ವಿಸಿ), ಕೆಎಲ್ ರಾಹುಲ್, ಶಿಖರ್ ಧವನ್, ರಿಷಬ್ ಪಂತ್, ದಿನೇಶ್ ಕಾರ್ತಿಕ್, ಎಂಎಸ್ ಧೋನಿ (ವಿಕೆ), ಹಾರ್ದಿಕ್ ಪಾಂಡ್ಯ, ಕೃನಾಲ್ ಪಾಂಡ್ಯ, ವಿಜಯ್ ಶಂಕರ್, ಯುಜುವೇಂದ್ರ ಚಾಹಲ್, ಜಸ್‌ಪ್ರೀತ್ ಬೂಮ್ರಾ, ಉಮೇಶ್ ಯಾದವ್, ಸಿದ್ಧಾರ್ಥ್ ಕೌಲ್, ಮಯಾಂಕ್ ಮಾರ್ಕೆಂಡೆ.

Story first published: Saturday, February 16, 2019, 15:59 [IST]
Other articles published on Feb 16, 2019
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+