Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ವೈರಲ್ ವಿಡಿಯೋ: ಆ್ಯರನ್ ಫಿಂಚ್ ರನ್ ಔಟ್ ಸಿಟ್ಟಿಗೆ ಚೇರ್ ಬಲಿ!

Watch: Aaron Finch destroys chair after suffering unfortunate run out

ಸಿಡ್ನಿ, ಫೆಬ್ರವರಿ 18: ಆಸ್ಟ್ರೇಲಿಯಾ ಬ್ಯಾಟ್ಸ್ಮನ್ ಆ್ಯರನ್ ಫಿಂಚ್ ಸಿಟ್ಟಿಗೆ ಚೇರ್ ಬಲಿಯಾಗಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಓಡಾಡುತ್ತಿದೆ. ಬಿಗ್ ಬ್ಯಾಷ್ ಲೀಗ್ (ಬಿಬಿಎಲ್) ಫೈನಲ್ ಪಂದ್ಯದ ವೇಳೆ ಈ ವಿಡಿಯೋ ಸೆರೆಯಾಗಿತ್ತು.

ಭಾನುವಾರ (ಫೆಬ್ರವರಿ 17) ಮೆಲ್ಬರ್ನ್‌ನ ಡಕ್‌ಲ್ಯಾಂಡ್ ಸ್ಟೇಡಿಯಂನಲ್ಲಿ ಬಿಬಿಎಲ್ ಪ್ರಶಸ್ತಿ ಸುತ್ತಿನ ಪಂದ್ಯಕ್ಕಾಗಿ ಮೆಲ್ಬರ್ನ್ ರೆನೆಗಡೆಸ್ ಮತ್ತು ಮೆಲ್ಬರ್ನ್ ಸ್ಟಾರ್ಸ್ ತಂಡಗಳು ಮುಖಾಮುಖಿಯಾಗಿದ್ದವು. ಮೆಲ್ಬರ್ನ್ ರೆನೆಗಡೆಸ್ ಪ್ರತಿನಿಧಿಸಿದ್ದ ಫಿಂಚ್ ರನ್ ಔಟ್ ಆದರು. ಆ ಸಿಟ್ಟನ್ನು ಫಿಂಚ್ ಕುರ್ಚಿಯ ಮೇಲೆ ತೋರಿಸಿದ್ದರು.

ಮೆಲ್ಬರ್ನ್ ರೆನೆಗಡೆಸ್ ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿದಿತ್ತು. ಆರಂಭಿಕರಾಗಿ ಬ್ಯಾಟಿಂಗ್‌ಗೆ ಇಳಿದಿದ್ದ ನಾಯಕ ಆ್ಯರನ್ ಫಿಂಚ್ 6ನೇ ಓವರ್‌ನಲ್ಲಿ ಜಾಕ್ಸನ್ ಬರ್ಡ್ ಅವರ ಕೈಯಲ್ಲಿ ರನ್ ಔಟ್ ಆದರು. 10 ಎಸೆತಗಳನ್ನು ಎದುರಿಸಿದ್ದ ಫಿಂಚ್ ಕೇವಲ 13 ರನ್ನಿಗೆ ನಿರ್ಮಿಸಬೇಕಾಯ್ತು.

ಅನೀರೀಕ್ಷಿತ ಔಟ್‌ ಆ್ಯರನ್ ಅವರಿಗೆ ಸಿಟ್ಟು ತರಿಸಿತ್ತು. ಮೈದಾನದಿಂದ ಪೆವಿಲಿಯನ್‌ ಎಡೆಗೆ ನಿರ್ಗಮಿಸುವಾಗ ದಾರಿಯಲ್ಲಿ ಇದ್ದ ಚೇರ್‌ಗೆ ಬ್ಯಾಟ್ ಬೀಸಿ ಫಿಂಚ್ ಸಿಟ್ಟನ್ನು ತೋರಿಸಿಕೊಂಡರು. ಪಂದ್ಯವನ್ನು ಫಿಂಚ್ ಅವರ ಮೆಲ್ಬರ್ನ್ ರೆನೆಗಡೆಸ್ ತಂಡವೇ 13 ರನ್ ಗಳಿಂದ ಗೆದ್ದುಕೊಂಡಿತು.

Story first published: Monday, February 18, 2019, 19:00 [IST]
Other articles published on Feb 18, 2019
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+