Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ವಿಡಿಯೋ: ವೃದ್ಧ ಮೇಲೆ ಹಲ್ಲೆ ಮಾಡಿದ ರಾಯುಡು

ಹೈದರಾಬಾದ್, ಸೆ. 01 : ಟೀಂ ಇಂಡಿಯಾ ಆಟಗಾರ ಅಂಬಟಿ ರಾಯುಡು ಅವರು ವೃದ್ಧರೊಬ್ಬರ ಮೇಲೆ ಹಲ್ಲೆ ಮಾಡಿದ ಘಟನೆ ನಡೆದಿದೆ. ಅಡ್ಡಾದಿಡ್ದಿ ಕಾರು ಚಲಾಯಿಸಿದ್ದಲ್ಲದೆ, ಆಕ್ಷೇಪ ವ್ಯಕ್ತಪಡಿಸಿದ ವೃದ್ಧರ ಮೇಲೆ ಹಲ್ಲೆ ಮಾಡಿದ ಆರೋಪವನ್ನು ರಾಯುಡು ಹೊತ್ತಿದ್ದಾರೆ.

ಗುರುವಾರ ಮುಂಜಾನೆ ವಾಯು ವಿಹಾರಕ್ಕೆ ತೆರಳುತ್ತಿದ್ದ ವೃದ್ಧರ ಗುಂಪೊಂದು ರಸ್ತೆ ದಾಟುವ ಸಂದರ್ಭದಲ್ಲಿ ಅಂಬಟಿ ರಾಯುಡು ಅವರಿದ್ದ ಕಾರು ಅಡ್ಡ ಬಂದಿದೆ. ಉಪ್ಪಾಳ್ ನಲ್ಲಿರುವ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಸ್ಟೇಡಿಯಂಗೆ ತೆರಳುತ್ತಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ.

Watch: Ambati Rayudu slaps senior citizen for objecting to rash driving

ರಾಯುಡು ಅವರು ಕಾರಿನಿಂದ ಕೆಳಗಿಳಿದು ವೃದ್ಧರನ್ನು ಅವಾಚ್ಯ ಪದಗಳಿಂದ ಬೈದು, ಹಲ್ಲೆಗೆ ಮುಂದಾದ ದೃಶ್ಯ ಕಂಡಿದೆ. ಸ್ಟೇಡಿಯಂಗೆ ವಾಕಿಂಗ್ ಬಂದಿದ್ದ ಹಿರಿಯ ನಾಗರಿಕರೊಂದಿಗೆ ಅಂಬಟಿ ರಾಯುಡು ಅವರು ಜಗಳಾವಾಡಿದ್ದಾರೆ. ನಂತರ ಅಲ್ಲಿದ್ದ ಉಳಿದವರು, ಇಬ್ಬರನ್ನು ಸಮಾಧಾನಪಡಿಸಿ ಕಳಿಸಿದ್ದಾರೆ.

ವಾಹನವನ್ನು ನಿಧಾನಗತಿಯಿಂದ ಓಡಿಸುವಂತೆ ಹೇಳಿದ್ದಕ್ಕೆ ರಾಯುಡುಗೇಕೆ ಇಷ್ಟು ಸಿಟ್ಟು ಬಂತು? ಗೊತ್ತಿಲ್ಲ. ಇಬ್ಬರ ನಡುವೆ ಮಾತಿನ ಚಕಮಕಿ ನಡೆದು, ಕೈ ಕೈ ಮಿಲಾಯಿಸುವ ಹಂತಕ್ಕೆ ತಿರುಗಿದ್ದನ್ನು ಅಲ್ಲಿದ್ದವರೊಬ್ಬರು ಮೊಬೈಲ್ ನಲ್ಲಿ ಸೆರೆ ಹಿಡಿದು, ಸಾಮಾಜಿಕ ಜಾಲ ತಾಣಗಳಲ್ಲಿ ಹಂಚಿದ್ದಾರೆ. ಈ ಘಟನೆ ಕುರಿತಂತೆ ಸದ್ಯಕ್ಕೆ ಯಾವುದೇ ದೂರು ದಾಖಲಾಗಿಲ್ಲ.

ಈ ಹಿಂದೆ ಮುಂಬೈ ಇಂಡಿಯನ್ಸ್ ಪರ ಆಡುವ 31 ವರ್ಷ ವಯಸ್ಸಿನ ಬ್ಯಾಟ್ಸ್ ಮನ್ ರಾಯುಡು ಅವರು ಹರ್ಭಜನ್ ಸಿಂಗ್ ಅವರ ಜತೆಗೆ ಫೀಲ್ಡಿಂಗ್ ವಿಷಯಕ್ಕೆ ಕಿತ್ತಾಡಿಕೊಂಡಿದ್ದರು. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸರ್ಫರಾಜ್ ಖಾನ್ ಜತೆ ಕೂಡಾ ಮಾತಿನ ಚಕಮಕಿ ನಡೆಸಿದ್ದನ್ನು ಇಲ್ಲಿ ಸ್ಮರಿಸಬಹುದು.

Story first published: Wednesday, January 3, 2018, 10:05 [IST]
Other articles published on Jan 3, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+