For Quick Alerts
ALLOW NOTIFICATIONS  
For Daily Alerts
 

1948ರ ಆ್ಯಷಸ್ ಟೆಸ್ಟ್‌ನಲ್ಲಿ ಬ್ರಾಡ್‌ಮನ್ ಬ್ಯಾಟಿಂಗ್: ಅಪರೂಪದ ವಿಡಿಯೋ

Watch Don Bradman lead Australia against England in 1948 Lord’s Test

ಲಂಡನ್, ಆಗಸ್ಟ್ 7: ಆರಂಭಿಕ ಆ್ಯಷಸ್ ಟೆಸ್ಟ್‌ನಲ್ಲಿ ಇಂಗ್ಲೆಂಡನ್ನು 251 ರನ್‌ನಿಂದ ಮಣಿಸಿರುವ ಆಸ್ಟ್ರೇಲಿಯಾ, ಆಗಸ್ಟ್ 14ರಂದು ಆತಿಥೇಯರ ವಿರುದ್ಧ ಲಾರ್ಡ್ಸ್ ಕ್ರಿಕೆಟ್ ಗ್ರೌಂಡ್‌ನಲ್ಲಿ ದ್ವಿತೀಯ ಟೆಸ್ಟ್ ಪಂದ್ಯವನ್ನಾಡಲಿದೆ. ಈ ಪಂದ್ಯಕ್ಕೂ ಮುನ್ನ ಲಾರ್ಡ್ಸ್ ಕ್ರಿಕೆಟ್ ಮೈದಾನದಲ್ಲಿ 1948ರಲ್ಲಿ ನಡೆದಿದ್ದ ಆ್ಯಷಸ್ ಟೆಸ್ಟ್ ವಿಡಿಯೋವೊಂದನ್ನು ಲಾರ್ಡ್ಸ್ ಕ್ರಿಕೆಟ್‌ ಗ್ರೌಂಡ್‌ ಫೇಸ್‌ ಬುಕ್ ಪೇಜ್ ಹಾಕಿಕೊಂಡಿದೆ.

ಮೊದಲ ಆ್ಯಷಸ್ ಟೆಸ್ಟ್‌ನ ಎರಡೂ ಇನ್ನಿಂಗ್ಸ್‌ಗಳಲ್ಲಿ ಆಸೀಸ್ ಬ್ಯಾಟ್ಸ್ಮನ್ ಸ್ಟೀವ್ ಸ್ಮಿತ್ ಶತಕ ಬಾರಿಸಿದ್ದರು. ಈ ಶತಕಗಳೊಂದಿಗೆ ಸ್ಮಿತ್, ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿವೇಗದಲ್ಲಿ 25 ಶತಕ (119 ಇನ್ನಿಂಗ್ಸ್‌) ಬಾರಿಸಿದ ಎರಡನೇ ಆಟಗಾರರಾಗಿ ಡಾನ್ ಬ್ರಾಡ್‌ಮನ್ ಬಳಿಕ (68 ಇನ್ನಿಂಗ್ಸ್‌ಗಳಲ್ಲಿ 25 ಶತಕ) ಗುರುತಿಸಿಕೊಂಡಿದ್ದರು.

ಕ್ರಿಕೆಟ್‌ ಕಾಶಿ ಲಾರ್ಡ್ಸ್‌ನಲ್ಲಿ ಆಸ್ಟ್ರೇಲಿಯಾ ದ್ವಿತೀಯ ಆ್ಯಷಸ್ ಟೆಸ್ಟ್‌ನಲ್ಲಿ ಆಡುವುದಕ್ಕೂ ಮೊದಲು, ಲಾರ್ಡ್ಸ್ ಕ್ರಿಕೆಟ್ ಗ್ರೌಂಡ್‌ ಎಫ್‌ಬಿ ಪೇಜ್, 1948ರಲ್ಲಿ ಲಾರ್ಡ್ಸ್‌ ಸ್ಟೇಡಿಯಂನಲ್ಲಿ ನಡೆದಿದ್ದ ಆ್ಯಷಸ್ ಎರಡನೇ ಟೆಸ್ಟ್‌ನ ವಿಡಿಯೋ ಹಾಕಿಕೊಂಡಿದೆ. ಈ ಪಂದ್ಯದಲ್ಲಿ ಬ್ರಾಡ್‌ಮನ್ ಆಸ್ಟ್ರೇಲಿಯಾ ತಂಡವನ್ನು ಮುನ್ನಡೆಸಿದ್ದರು.

1948 ಜೂನ್ 24-29ರ ವರೆಗೆ ಲಾರ್ಡ್ಸ್‌ನಲ್ಲಿ ನಡೆದಿದ್ದ ದ್ವಿತೀಯ ಆ್ಯಷಸ್ ಟೆಸ್ಟ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಆಸೀಸ್ 409 ರನ್‌ಗಳಿಂದ ಗೆದ್ದಿತ್ತು. ಆಸ್ಟ್ರೇಲಿಯಾ ಮೊದಲ ಇನ್ನಿಂಗ್ಸ್‌ನಲ್ಲಿ 350 ರನ್, ದ್ವಿತೀಯ ಇನ್ನಿಂಗ್ಸ್‌ನಲ್ಲಿ 460 ರನ್‌ ಗಳಿಸಿ ಡಿಕ್ಲೇರ್ ಘೋಷಿಸಿತ್ತು. ಇಂಗ್ಲೆಂಡ್‌ 215+186 ರನ್ ಬಾರಿಸಿ ಸೋತಿತ್ತು. ಆಸೀಸ್ ನಾಯಕ ಬ್ರಾಡ್‌ಮನ್ ಈ ಪಂದ್ಯದಲ್ಲಿ 38+89 ರನ್ ಗಳಿಸಿದ್ದರು.

Story first published: Wednesday, August 7, 2019, 15:38 [IST]
Other articles published on Aug 7, 2019
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+