Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ವಿಲಕ್ಷಣ ರೀತೀಲಿ ಔಟಾದ ನ್ಯೂಜಿಲ್ಯಾಂಡ್‌ನ ಕೇಟೀ ಪರ್ಕಿನ್ಸ್: ವಿಡಿಯೋ!

Watch: Katie Perkins gets out in the most bizarre way

ಸಿಡ್ನಿ, ಮಾರ್ಚ್ 1: ಆಸ್ಟ್ರೇಲಿಯಾ ಪ್ರವಾಸದಲ್ಲಿರುವ ಇಂಗ್ಲೆಂಡ್ ಮಹಿಳಾ ಕ್ರಿಕೆಟ್ ತಂಡ ಸಿಡ್ನಿಯಲ್ಲಿ ಫೆಬ್ರವರಿ 28ರಂದು ಅಭ್ಯಾಸ ಪಂದ್ಯವನ್ನಾಡಿತ್ತು. ಅಭ್ಯಾಸ ಪಂದ್ಯದಲ್ಲಿ ಆಸ್ಟ್ರೇಲಿಯಾ ಗವರ್ನರ್ ಜನರಲ್ಸ್ XI ಮತ್ತು ನ್ಯೂಜಿಲ್ಯಾಂಡ್ ತಂಡಗಳು ಕಣಕ್ಕಿಳಿದಿದ್ದವು. ಈ ಪಂದ್ಯದಲ್ಲಿ ನ್ಯೂಜಿಲ್ಯಾಂಡ್‌ನ ಕೇಟೀ ಪರ್ಕಿನ್ಸ್ ವಿಚಿತ್ರ ರೀತಿಯಲ್ಲಿ ಔಟ್ ಆಗಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ನ್ಯೂಜಿಲ್ಯಾಂಡ್ ಪರ ಐದನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಇಳಿದಿದ್ದ ಪರ್ಕಿನ್ಸ್ ಅವರು ಹೀದರ್ ಗ್ರಹಾಂ ಅವರ 44.5 ಓವರ್‌ನಲ್ಲಿ ವಿಲಕ್ಷಣ ರೀತಿಯಲ್ಲಿ ಔಟ್ ಆದರು. ಅಂದರೆ ಕೇಟೀ ಬ್ಯಾಟ್ ತಾಗಿದ ಚೆಂಡು ನೆಲಕ್ಕೆ ತಾಗದೆ ತನ್ನದೇ ತಂಡದ ಬ್ಯಾಟ್ ವುಮನ್ ಬ್ಯಾಟಿಗೆ ತಾಗಿ ಹೀದರ್ ಅವರಿಂದ ಕ್ಯಾಚ್ ಮಾಡಲ್ಪಟ್ಟಿತು!

ಕೇಟೀ (4 ರನ್) ಬೌಲ್ಡ್ ಆ್ಯಂಡ್ ಕಾಟ್ ರೀತಿಯಲ್ಲಿ ಔಟ್ ಆದರು. ಆದರೆ ಈ ಪಂದ್ಯವನ್ನು ನ್ಯೂಜಿಲ್ಯಾಂಡ್ ತಂಡ 166 ರನ್‌ಗಳಿಂದ ಗೆದ್ದಿತು. ನ್ಯೂಜಿಲ್ಯಾಂಡ್ 7 ವಿಕೆಟ್ ಕಳೆದು ನೀಡಿದ್ದ 323 ರನ್ ಗುರಿಯನ್ನು ತಲುಪಲಾಗದೆ ಆಸೀಸ್ ಶರಣಾಯಿತು. ಆಸ್ಟ್ರೇಲಿಯಾ ಗವರ್ನರ್ ಜನರಲ್ಸ್ XI ತಂಡ 38.2 ಓವರ್‌ನಲ್ಲಿ ಎಲ್ಲಾ ವಿಕೆಟ್ ಕಳೆದು 157 ರನ್ ಪೇರಿಸಲಷ್ಟೇ ಶಕ್ತವಾಯಿತು.

Story first published: Friday, March 1, 2019, 18:43 [IST]
Other articles published on Mar 1, 2019
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+