Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

'ಸ್ಪೈಡರ್‌ಕ್ಯಾಮ್‌'ಗೆ ಚೆಂಡು ತಾಗಿಸಿದ ಮ್ಯಾಕ್ಸ್‌ವೆಲ್: ವಿಡಿಯೋ ವೈರಲ್!

WATCH: Maxwell hits Spidercam with sliced shot in Australia-India T20

ಬ್ರಿಸ್ಬೇನ್, ನವೆಂಬರ್ 21: ಪ್ರವಾಸಿ ಭಾರತದ ವಿರುದ್ಧ ಟಿ20 ಮೊದಲ ಪಂದ್ಯದಲ್ಲಿ ಅಬ್ಬರದ ಬ್ಯಾಟಿಂಗ್ ನಡೆಸಿದ ಆಸ್ಟ್ರೇಲಿಯಾ ಆಟಗಾರ ಗ್ಲೆನ್ ಮ್ಯಾಕ್ಸ್‌ವೆಲ್ ಕ್ರಿಕೆಟ್ ಪ್ರೇಮಿಗಳ ಚಿತ್ತ ತನ್ನತ್ತ ಹರಿಯುವಂತೆ ಮಾಡಿದ್ದಾರೆ. ಮ್ಯಾಕ್ಸ್‌ವೆಲ್ ಹೊಡೆತಕ್ಕೆ ಸಿಕ್ಕ ಚೆಂಡು ಮೈದಾನದಲ್ಲಿನ ಸ್ಪೈಡರ್ ಕ್ಯಾಮ್‌ಗೆ ತಾಗಿದ್ದು ಗಮನ ಸೆಳೆಯಿತು.

ಪಂದ್ಯದ Live Score ಕೆಳಗಿದೆ. ಸ್ಕೋರ್ ಕಾರ್ಡ್‌ಗೆ ಕೆಳಗಿನ ಲಿಂಕ್ ಕ್ಲಿಕ್ ಮಾಡಿ

1
43620

ಟಾಸ್ ಸೋತು ಬ್ಯಾಟಿಂಗ್ ಗೆ ಇಳಿಸಲ್ಪಟ್ಟ ಆಸ್ಟ್ರೇಲಿಯಾ ತಂಡ, ನಾಯಕ ಆ್ಯರನ್ ಫಿಂಚ್ ಮುನ್ನಾದಿನ 'ಈ ಮಾದರಿಯಲ್ಲಿ ನಮಗೆ ಸಂಪೂರ್ಣ ವಿಶ್ವಾಸವಿದೆ' ಎಂದು ಹೇಳಿದಂತೆಯೇ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿತು. ಫಿಂಚ್ 27, ಕ್ರಿಸ್‌ಲಿನ್ 37, ಮಾರ್ಕಸ್ ಸ್ಟೊಯಿನಿಸ್ 33 ರನ್ ಸೇರಿಸಿ ತಂಡಕ್ಕೆ ಬಲ ತುಂಬಿದರು.

ಆದರೆ ಮ್ಯಾಕ್ಸ್ವೆಲ್ ಅಬ್ಬರದ ಬ್ಯಾಟಿಂಗ್ ಹೆಚ್ಚು ಆಕರ್ಷಣೀಯವೆನಿತು. 24 ಎಸೆತಗಳನ್ನು ಎದುರಿಸಿದ ಗ್ಲೆನ್ 46 ರನ್ ಸಿಡಿಸಿದರು. ಇದರಲ್ಲಿ 4 ಸಿಕ್ಸರ್ ಗಳು ಸೇರಿದ್ದವು. ಆದರೆ ಮತ್ತೊಂದು ಸಿಕ್ಸ್ ಯತ್ನದಲ್ಲಿ ಚಿಮ್ಮಿದ ಚೆಂಡು ಫ್ಲೈಯಿಂಗ್ ಫಾಕ್ಸ್ ಅಥವಾ ಸ್ಪೈಡರ್‌ಕ್ಯಾಮ್ ಎನ್ನುವ ಕ್ಯಾಮೆರಾಕ್ಕೆ ಬಡಿಯಿತು. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ಮ್ಯಾಕ್ಸ್‌ವೆಲ್ ಬ್ಯಾಟಿಂಗ್ ನೆರವಿನಿಂದ ಆಸ್ಟ್ರೇಲಿಯಾ 17 ಓವರ್ ಗೆ 4 ವಿಕೆಟ್ ಕಳೆದು 158 ರನ್ ಪೇರಿಸಿತು. ಮಳೆ ಬಂದಿದ್ದರಿಂದ ಪಂದ್ಯವನ್ನು ಕಡಿತಗೊಳಿಸಿ ಭಾರತಕ್ಕೆ 17 ಓವರ್ ನಲ್ಲಿ 174 ರನ್ ಗುರಿ ನೀಡಲಾಗಿದೆ.

Story first published: Friday, November 23, 2018, 12:37 [IST]
Other articles published on Nov 23, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+