Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಹಾಂಕಾಂಗ್ ನಲ್ಲಿ ಯುವರಾಜ್ ಸಾಧನೆ ರಿಪೀಟ್ ಮಾಡಿದ ಮಿಸ್ಬಾ

ಹಾಂಕಾಂಗ್, ಮಾರ್ಚ್ 10: ಪಾಕಿಸ್ತಾನ ಟೆಸ್ಟ್ ತಂಡದ ಮಾಜಿ ನಾಯಕ ಮಿಸ್ಬಾ ವುಲ್ ಹಕ್ ನಿವೃತ್ತಿ ನಂತರವೂ ಸುದ್ದಿಯಲ್ಲಿದ್ದಾರೆ. ಯುವರಾಜ್ ಸಿಂಗ್ ಅವರಂತೆ ಆರು ಎಸೆತಗಳಲ್ಲಿ ಆರು ಸಿಕ್ಸರ್ ಸಿಡಿಸಿದ್ದಾರೆ. ಆದರೆ, ಮಿಸ್ಬಾ ಸಿಕ್ಸರ್ ನಲ್ಲೂ ಒಂದು ಟ್ವಿಸ್ಟ್ ಇದೆ. ಏನದು ಮುಂದೆ ಓದಿ...

ಹಾಂಕಾಂಗ್ ಟಿ20 ಬ್ಲಿಟ್ಜ್ ಟೂರ್ನಮೆಂಟ್ ನಲ್ಲಿ ಗುರುವಾರದಂದು ಹಾಂಕಾಂಗ್ ಐಲ್ಯಾಂಡ್ ಯುನೈಟೆಡ್ ಪರ ಆಡುತ್ತಾ ಹಂಗ್ ಹಾಮ್ ಜೆಡಿ ಜಗ್ಸರ್ಸ್ ವಿರುದ್ಧ ಈ ಸಾಧನೆ ಮಾಡಿದ್ದಾರೆ.

Watch: Misbah-ul-Haq does a Yuvraj Singh; blasts six 6s in six balls during Hong Kong T20 Blitz

ಭಾರತದ ಆಲ್‌ರೌಂಡರ್ ಯುವರಾಜ್ ಸಿಂಗ್ ಅವರು ಟ್ವೆಂಟಿ-20 ವಿಶ್ವಕಪ್‌ನಲ್ಲಿ ಇಂಗ್ಲೆಂಡಿನ ಸ್ಟುವರ್ಟ್ ಬ್ರಾಡ್‌ ಅವರ ಒಂದೇ ಓವರ್‌ನಲ್ಲಿ ಸತತ 6 ಸಿಕ್ಸರ್ ಬಾರಿಸಿ ವಿಶ್ವ ದಾಖಲೆ ಬರೆದಿದ್ದನ್ನು ಮಿಸ್ಬಾ ನೆನಪಿಸಿದರು.

ಆದರೆ, ಮಿಸ್ಬಾ ಒಂದೇ ಓವರ್‌ನಲ್ಲಿ 6 ಸಿಕ್ಸರ್ ಸಿಡಿಸಿಲ್ಲ ಆದರೆ ಇಬ್ಬರು ಬೌಲರ್‌ಗಳ 2 ಓವರ್‌ಗಳ 6 ಎಸೆತಗಳಲ್ಲಿ ಸಿಕ್ಸರ್ ಮಳೆ ಸುರಿಸಿದ್ದಾರೆ.

ಮಿಸ್ಬಾ ಅವರು ಇಮ್ರಾನ್ ಆರೀಫ್‌ರ ಕೊನೆಯ ಎರಡು ಎಸೆತಗಳಲ್ಲಿ ಚೆಂಡನ್ನು ಸತತ ಎರಡು ಬಾರಿ ಸಿಕ್ಸರ್ ಬಾರಿಸಿದರು. ನಂತರ 20ನೇ ಓವರ್ ನಲ್ಲಿ ಅಶ್ಲೆ ಕ್ಯಾಡಿ ಅವರ ಮೊದಲ ಎಸೆತದಲ್ಲಿ ಅಜ್ಮಲ್ 1 ರನ್ ಗಳಿಸಿ ಮಿಸ್ಬಾಗೆ ಸ್ಟ್ರೈಕ್ ಬಿಟ್ಟುಕೊಟ್ಟರು. ಮಿಸ್ಬಾ ಸತತ ನಾಲ್ಕು ಎಸೆತಗಳನ್ನು ಸಿಕ್ಸರ್ ಬಾರಿಸಿದ್ದಲ್ಲದೆ 1 ಬೌಂಡರಿ ಒಳಗೊಂಡ 28 ರನ್ ಕಬಳಿಸಿದರು.

ಹಾಂಕಾಂಗ್ ಐಲೆಂಡ್ ಯುನೈಟೆಡ್(ಎಚ್‌ಕೆಐಯು) ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟದಲ್ಲಿ 216 ರನ್ ಗಳಿಸಿತು.ಹಂಗ್ ಹಾಮ್ ಜೆಡಿ ಜಗ್ಗರ್ಸ್ ತಂಡ ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟದಲ್ಲಿ 183 ರನ್ ಸೊಲೊಪ್ಪಿಕೊಂಡಿತು.


43ರ ಹರೆಯದ ಮಿಸ್ಬಾ ಈ ಪಂದ್ಯದಲ್ಲಿ ಔಟಾಗದೆ 82 ರನ್ (37ಎಸೆತ,4X4, 7X6) ಗಳಿಸಿದರು ಈ ಪಂದ್ಯದಲ್ಲಿ ಮಿಸ್ಬಾ ಅವರ ಸ್ಫೋಟಕ ಬ್ಯಾಟಿಂಗ್ ನೆರವಿನಲ್ಲಿ ಅವರ ಎಚ್‌ಕೆ ಐ ಯುನೈಟೆಡ್ ತಂಡ ಎದುರಾಳಿ ಹಂಗ್ ಹಾಮ್ ವಿರುದ್ಧ 33 ರನ್‌ಗಳ ಭರ್ಜರಿ ಜಯ ಗಳಿಸಿತು.

Story first published: Wednesday, January 3, 2018, 10:04 [IST]
Other articles published on Jan 3, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+