Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಪೊಲೀಸರಿಗೆ ಅಚ್ಚರಿಗೆ ಮೂಡಿಸಿದ ಧೋನಿ ಶೂಟಿಂಗ್ ಕೌಶಲ್ಯ!

ಕೋಲ್ಕತಾ, ಸೆ. 21: ವಿಮಾನ ವಿಳಂಬವಾದಾಗ ನಿಲ್ದಾಣದ ನೆಲಹಾಸಿನ ಮೇಲೆ ಮಲಗಿದ್ದ ನಾಯಕ ಧೋನಿ ಅವರು ಹೇಗೆ ಸಮಯವನ್ನು ಸದುಪಯೋಗಪಡಿಸಿಕೊಳ್ಳುತ್ತಾರೆ ಎಂಬುದು ಈಗಾಗಲೇ ಅಭಿಮಾನಿಗಳಿಗೆ ತಿಳಿದಿದೆ. ಕೋಲ್ಕತಾದಲ್ಲಿ ಮಳೆ ಸಮಸ್ಯೆ ಉಂಟಾದ ಧೋನಿ ಶೂಟಿಂಗ್ ಅಭ್ಯಾಸ ಮಾಡಿದ್ದಾರೆ.

ಧೋನಿ ಅವರ ಶೂಟಿಂಗ್ ಕೌಶಲ್ಯ ನೋಡಿ ಅಲ್ಲಿದ್ದ ಭದ್ರತಾ ಸಿಬ್ಬಂದಿ ಅಚ್ಚರಿಗೊಂಡಿದ್ದಾರೆ. ಭಾರತೀಯ ಸೇನೆಯಿಂದ ಗೌರವಯುತವಾಗಿ ಲೆಫ್ಟಿನೆಂಟ್ ಕರ್ನಲ್ ಹುದ್ದೆ ಪಡೆದಿರುವ ಧೋಣಿ ಅವರು ಕೋಲ್ಕತ್ತಾ ಪೊಲೀಸ್ ತರಬೇತಿ ಕೇಂದ್ರಕ್ಕೆ ಭೇಟಿ ನೀಡಿ, ಗನ್ ಕೇಳಿ ಪಡೆದುಕೊಂಡರು. ನಂತರ ಶೂಟಿಂಗ್ ಕೇಂದ್ರದಲ್ಲಿ ತಮ್ಮ ಕೌಶಲ್ಯ ಪ್ರದರ್ಶಿಸಿದರು.

Watch: MS Dhoni sharpens shooting skills as rain washes out practice session in Kolkata

ಕೋಲ್ಕತಾದಲ್ಲಿ ಎರಡು ದಿನಗಳಿಂದ ಮಳೆ ಮುಂದುವರೆದಿದ್ದು, ಸೆ. 20ರಂದು ಅಭ್ಯಾಸ ನಡೆಸಲು ಅಡ್ಡಿಯುಂಟು ಮಾಡಿತ್ತು. ಸೆ.21ರಂದು ಆಸ್ಟ್ರೇಲಿಯಾ ವಿರುದ್ಧದ ಎರಡನೇ ಪಂದ್ಯಕ್ಕೂ ಮಳೆ ಅಡ್ಡಿ ಪಡಿಸುವ ಎಲ್ಲಾ ಲಕ್ಷಣಗಳಿವೆ.

ಮಳೆಯಿಂದ ನೆಟ್ ಅಭ್ಯಾಸ ತಪ್ಪಿದ್ದರಿಂದ ಧೋನಿ ಅವರು ಕೋಲ್ಕತಾ ಪೊಲೀಸರೊಂದಿಗೆ ಶೂಟಿಂಗ್ ಅಭ್ಯಾಸಕ್ಕೆ ತೆರಳದ್ರು. 10 ಹಾಗೂ 25 ಮೀಟರ್ ರೇಂಜಿನ ಶೂಟಿಂಗ್ ನಲ್ಲಿ ತೊಡಗಿದ್ದರು.

ಧೋನಿ ಅವರು ಅಷ್ಟು ನಿಖರವಾಗಿ ಶೂಟ್ ಮಾಡುತ್ತಾರೆ, ಅವರ ಶೂಟಿಂಗ್ ಕೌಶಲ್ಯ ಈ ಮಟ್ಟದಲ್ಲಿದೆ ಎಂದು ನಾವ್ಯಾರು ಊಹಿಸಿರಲಿಲ್ಲ. ನಿಜಕ್ಕೂ ಅವರು ಗ್ರೇಟ್ ಎಂದು ಕೋಲ್ಕತಾ ಪೊಲೀಸರು ತಮ್ಮ ಫೇಸ್ ಬುಕ್ ಪುಟದಲ್ಲಿ ಬಣ್ಣಿಸಿದ್ದಾರೆ.

Story first published: Wednesday, January 3, 2018, 10:05 [IST]
Other articles published on Jan 3, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+