Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

BBL: ಮೇಲ್ಛಾವಣಿಗೆ ತಗುಲಿದ ಚೆಂಡು, ಸಿಕ್ಸ್ ಎಂದು ವಿಶಿಷ್ಠ ತೀರ್ಪು ಕೊಟ್ಟ ಅಂಪೈರ್ : ವಿಡಿಯೋ ನೋಡಿ

Watch Video : Umpire Gives Six Runs Despite Ball Hitting Roof At BBL Match

ಬಿಗ್ ಬ್ಯಾಷ್ ಲೀಗ್ (BBL) 2023 ರ ಪಂದ್ಯದಲ್ಲಿ ಬ್ಯಾಟರ್ ಬಾರಿಸಿದ ಚೆಂಡು ಮೇಲ್ಛಾವಣಿಗೆ ತಗುಲಿದ್ದಕ್ಕೆ ಸಿಕ್ಸ್ ಎಂದು ತೀರ್ಪುಕೊಡಲಾಗಿದೆ. ಮೆಲ್ಬೋರ್ನ್ ರೆನೆಗೇಡ್ಸ್ ಮತ್ತು ಮೆಲ್ಬೋರ್ನ್‌ ಸ್ಟಾರ್ಸ್ ನಡುವಿವ ಬಿಬಿಎಲ್ ಪಂದ್ಯದಲ್ಲಿ ತೀರ್ಪು ನೀಡಲಾಗಿದೆ.

ಮೆಲ್ಬೋರ್ನ್‌ನ ಡಾಕ್‌ಲ್ಯಾಂಡ್ಸ್ ಸ್ಟೇಡಿಯಂನಲ್ಲಿ ಪಂದ್ಯದ ವೇಳೆ ಮೇಲ್ಛಾವಣಿ ಕ್ರೀಡಾಂಗಣವನ್ನು ಆವರಿಸಿತ್ತು. ಇಡೀ ಕ್ರೀಡಾಂಗಣವನ್ನು ಮುಚ್ಚುವ ವ್ಯವಸ್ಥೆ ಈ ಕ್ರೀಡಾಂಗಣದಲ್ಲಿ ಇದೆ. ಶನಿವಾರ ನಡೆದ ಪಂದ್ಯದಲ್ಲಿ ಕೂಡ ಮೇಲ್ಛಾವಣಿಯನ್ನು ಸಂಪೂರ್ಣವಾಗಿ ಮುಚ್ಚಲಾಗಿತ್ತು.

ಮೆಲ್ಬೋರ್ನ್ ರೆನೆಗೇಡ್ಸ್ ತಂಡದ ಜೋ ಕ್ಲಾರ್ಕ್‌ ಸ್ಟಾರ್ಸ್ ವಿಲ್ ಸದರ್ಲ್ಯಾಂಡ್ ಮಾಡಿದ ಎಸೆತವನ್ನು ಜೋರಾಗಿ ಬಾರಿಸಿದಾಗ ಚೆಂಡು ಸೀದಾ ಹೋಗಿ ಮೇಲ್ಛಾವಣಿಗೆ ಬಡಿಯಿತು. ಅಂಪೈರ್ ಇದನ್ನು ಸಿಕ್ಸ್ ಎಂದು ಪರಿಗಣಿಸಿದರು. ಆದರೆ, ಕೆಲವು ಮಾತ್ರ ಮೇಲ್ಛಾವಣಿ ಇಲ್ಲದೇ ಇದ್ದರೆ ಅದು ಖಂಡಿತ ಕ್ಯಾಚ್ ಆಗುತ್ತಿತ್ತು ಎಂದು ಅಭಿಪ್ರಾಯಪಟ್ಟಿದ್ದಾರೆ. ವೀಕ್ಷಕ ವಿವರಣೆಗಾರ ಬ್ರಾಡ್ ಹ್ಯಾಡಿನ್ ತಕ್ಷಣವೇ ಪ್ರತಿಕ್ರಿಯೆ ನೀಡಿ, ಕ್ಲಾರ್ಕ್ ಕ್ರೀಸ್ನಲ್ಲಿ ಉಳಿಯಲು ಅದೃಷ್ಟವಂತರು ಎಂದು ಹೇಳಿದರು. ಆ ಚೆಂಡು ಮೇಲ್ಛಾವಣಿಗೆ ತಾಕದೇ ಇದ್ದಲ್ಲಿ ಅವರು ಔಟ್ ಆಗುತ್ತಿದ್ದರು ಎಂದು ಹ್ಯಾಡಿನ್ ತಮ್ಮ ಕಾಮೆಂಟ್‌ನಲ್ಲಿ ಸೇರಿಸಿದರು.

ಇದೇ ಪಂದ್ಯದಲ್ಲಿ, ಬ್ಯೂ ವೆಬ್‌ಸ್ಟರ್ ಬ್ಯಾಟ್ ಮಾಡುವ ವೇಳೆ ಟಿಮ್ ರೋಜರ್ಸ್ ಎಸೆತವನ್ನು ಹೊಡೆದಾಗ ಚೆಂಡು ಮತ್ತೆ ಮೇಲ್ಛಾವಣಿಗೆ ಬಿದ್ದಿತ್ತು. ಇದನ್ನು ಅಂಪೈರ್ ಸಿಕ್ಸ್ ಎಂದು ತೀರ್ಮಾನ ನೀಡಿದರು. ಈ ಪಂದ್ಯದಲ್ಲಿ ಮೆಲ್ಬೋರ್ನ್‌ ಮೆಲ್ಬೋರ್ನ್ ರೆನೆಗೇಡ್ಸ್ ತಂಡ ಮೆಲ್ಬೋರ್ನ್ ಸ್ಟಾರ್ಸ್ ವಿರುದ್ಧ 6 ರನ್‌ಗಳ ಜಯ ಸಾಧಿಸಿತು.

ಮೊದಲು ಬ್ಯಾಟ್ ಮಾಡಿದ ಮೆಲ್ಬೋರ್ನ್ ರೆನೆಗೇಡ್ಸ್ 20 ಓವರ್ ಗಳಲ್ಲಿ 7 ವಿಕೆಟ್ ಕಳೆದುಕೊಂಡಿ 162 ರನ್ ಕಲೆಹಾಕಿತು, ಇದಕ್ಕುತ್ತರವಾಗಿ ಮೆಲ್ಬೋರ್ನ್ ಸ್ಟಾರ್ಸ್ 20 ಓವರ್ ಗಳಲ್ಲಿ 7 ವಿಕೆಟ್‌ ಕಳೆದುಕೊಂಡು 156 ರನ್‌ ಗಳಿಸಲಷ್ಟೇ ಶಕ್ತವಾಯಿತು.

ಬಿಬಿಎಲ್‌ 3ನೇ ಆವೃತ್ತಿಯಿಂದ ಜಾರಿಯಲ್ಲಿದೆ ಹೊಸ ನಿಯಮ

ಬಿಗ್‌ ಬ್ಯಾಷ್‌ ಲೀಗ್‌ನ ಮೂರನೇ ಆವೃತ್ತಿಯಿಂದ ಈ ಹೊಸ ನಿಯಮವನ್ನು ಪರಿಚಯಿಸಲಾಗಿದೆ. ಬ್ಯಾಟರ್ ಹೊಡೆದ ಚೆಂಡು ಮೇಲ್ಛಾವಣಿಗೆ ತಾಗಿದರೆ ಅದನ್ನು ಸಿಕ್ಸ್ ಎಂದು ಪರಿಗಣಿಸಲಾಗುತ್ತದೆ. ಮೆಲ್ಬೋರ್ನ್‌ನ ಡಾಕ್‌ಲ್ಯಾಂಡ್ಸ್ ಸ್ಟೇಡಿಯಂನಲ್ಲಿ ಮಳೆಯ ಸಂದರ್ಭದಲ್ಲಿ ಇಡೀ ಕ್ರೀಡಾಂಗಣವನ್ನೇ ಮುಚ್ಚುವಂತೆ ವಿನ್ಯಾಸ ಮಾಡಲಾಗಿದೆ. ಈ ಸಂದರ್ಭದಲ್ಲಿ ಚೆಂಡು ಮೇಲ್ಛಾವಣಿಗೆ ಬಡಿಯುತ್ತಿದ್ದ ಪರಿಣಾಮ ಬಿಬಿಎಲ್‌ನಲ್ಲಿ ಹೊಸ ನಿಯಮ ಪರಿಚಯಿಸಲಾಗಿದೆ.

ಬಿಬಿಎಲ್‌ ಎರಡನೇ ಆವೃತ್ತಿಯಲ್ಲಿ ರೆನೆಗೇಡ್ಸ್ ನಾಯಕ ಆರನ್ ಫಿಂಚ್ ಹೊಡೆದ ಹೊಡೆತ ಛಾವಣಿಗೆ ತಾಗಿದ ನಂತರ ಅದನ್ನು ಡೆಡ್‌ ಬಾಲ್ ಎಂದು ಪರಿಗಣಿಸಲಾಗಿತ್ತು. ನಂತರ ಮುಂದಿನ ಆವೃತ್ತಿಯಿಂದ ಈ ಹೊಸ ನಿಯಮವನ್ನು ಜಾರಿ ಮಾಡಲಾಯಿತು.

Story first published: Saturday, January 14, 2023, 23:27 [IST]
Other articles published on Jan 14, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+