Wayne Madsen: ದಕ್ಷಿಣ ಆಫ್ರಿಕಾ TO ಇಟಲಿ - ವೇಯ್ನ್ ಮಾಡ್ಸನ್ ಅಪರೂಪದ ದಾಖಲೆ
ಕ್ರೀಡೆಗೆ ವಯಸ್ಸಿನ ಮಿತಿ ಇಲ್ಲ, ಸಾಧನೆಗೆ ಯಾವುದೂ ಅಡ್ಡಿಯಾಗುವುದಿಲ್ಲ ಎಂಬುದಕ್ಕೆ ಈ ವ್ಯಕ್ತಿ ಉತ್ತಮ ಉದಾಹರಣೆ. ಚೊಚ್ಚಲ ಬಾರಿಗೆ ಟಿ20 ವಿಶ್ವಕಪ್‌ನಲ್ಲಿ ಆಡುವ ಅವಕಾಶವನ್ನು ಪಡೆದಿರುವ ಇಟಲಿ ಎಲ್ಲರ ಚಿತ್ತ ಕದ್ದಿದೆ. ಅಷ್ಟೇ ಅಲ್ಲ ಈ ತಂಡದ ನಾಯಕ ಸಹ ಸದ್ಯ ಭಾರೀ ಸುದ್ದಿಯಲ್ಲಿದ್ದಾರೆ. ಏಕೆಂದರೆ ಅವರು ಎರಡು ವಿಭಿನ್ನ ವಿಶ್ವಕಪ್‌ಗಳಲ್ಲಿ ಎರಡು ದೇಶಗಳನ್ನು ಪ್ರತಿನಿಧಿಸಿದ ಮೊದಲ ಪುರುಷ ಕ್ರಿಕೆಟಿಗ ಎಂಬ ಹಿರಿಮೆಯನ್ನು ಪಡೆಯಲು ಸಜ್ಜಾಗಿದ್ದಾರೆ. ಇತಿಹಾಸದ ಪುಟಗಳಲ್ಲಿ ಸ್ಥಾನ ಪಡೆಯಲು ಹೊರಟಿರುವ ಆಟಗಾರ ವೇಯ್ನ್ ಮಾಡ್ಸನ್.
ಭಾರತ ಹಾಗೂ ಶ್ರೀಲಂಕಾ ಟಿ20 ವಿಶ್ವಕಪ್ ಆಯೋಜಿಸುತ್ತಿವೆ. ಈ ಟೂರ್ನಿಯಲ್ಲಿ ಒಟ್ಟು 20 ತಂಡಗಳು ಭಾಗವಹಿಸುತ್ತಿವೆ. ಈ ತಂಡಗಳನ್ನು ನಾಲ್ಕು ಗುಂಪುಗಳಲ್ಲಿ ವಿಂಗಡಿಸಲಾಗುತ್ತಿದೆ. ಟಿ20 ವಿಶ್ವಕಪ್‌ನಲ್ಲಿ ಮೊದಲ ಬಾರಿಗೆ ಆಡುವ ಅವಕಾಶವನ್ನು ಪಡೆದ ತಂಡ ಇಟಲಿ. ಗ್ರೂಪ್ ಸಿ ನಲ್ಲಿ ಇಟಲಿ ಸ್ಥಾನ ಪಡೆದಿದೆ. ಇದೇ ಗುಂಪಿನಲ್ಲಿ ನೇಪಾಳ, ಸ್ಕಾಟ್ಲೆಂಡ್, ಇಂಗ್ಲೆಂಡ್ ಮತ್ತು ವೆಸ್ಟ್ ಇಂಡೀಸ್ ತಂಡಗಳು ಸ್ಥಾನ ಪಡೆದಿವೆ. ಇಟಲಿ ಟಿ20 ವಿಶ್ವಕಪ್‌ನಲ್ಲಿ ತನ್ನ ಅಭಿಯಾನವನ್ನು ಫೆಬ್ರವರಿ 9 ರಂದು ಆರಂಭಿಸಲಿದೆ. ಈ ವೇಳೆ ಎಲ್ಲರ ಗಮನ ಇಟಲಿ ತಂಡದ ನಾಯಕ ವೇಯ್ನ್ ಮಾಡ್ಸನ್ ಅವರ ಮೇಲೆ ನೆಟ್ಟಿರಲಿದೆ.

ವೇಯ್ನ್ ಮಾಡ್ಸನ್ ಈಗ ಭಾರೀ ಸುದ್ದಿಯಲ್ಲಿದ್ದಾರೆ. ಇವರು ಎರಡು ಬೇರೆ ಬೇರೆ ಕ್ರೀಡೆಗಳಲ್ಲಿ ಎರಡು ದೇಶವನ್ನು ಪ್ರತಿನಿಧಿಸಿದ ಹೆಗ್ಗಳಿಕೆಯನ್ನು ತಮ್ಮದಾಗಿಸಿಕೊಳ್ಳಲಿದ್ದಾರೆ. ಇದೇ ಮೊದಲ ಬಾರಿಗೆ ಒಬ್ಬ ಆಟಗಾರ ಟಿ20 ವಿಶ್ವಕಪ್‌ನಲ್ಲಿ ಈ ರೀತಿ ಬೇರೆ ವಿಶ್ವಕಪ್‌ನಲ್ಲಿ ಆಡಿದ್ದನ್ನು ನೋಡಬಹುದಾಗಿದೆ.
ವೇಯ್ನ್ ಮಾಡ್ಸನ್ ಯಾರು?
ದಕ್ಷಿಣ ಆಫ್ರಿಕಾದಲ್ಲಿ ಜನಿಸಿದ ವೇಯ್ನ್ ಮಾಡ್ಸನ್ ಪ್ರಸಕ್ತ ವಿಶ್ವಕಪ್‌ನಲ್ಲಿ ಇಟಲಿ ತಂಡ ಮುನ್ನಡೆಸುತ್ತಿದ್ದಾರೆ. ಇವರು ತಮ್ಮ 20ನೇ ವಯಸ್ಸಿನಲ್ಲೇ ದಕ್ಷಿಣ ಆಫ್ರಿಕಾ ಪರ 2006ರಲ್ಲಿ ಹಾಕಿ ವಿಶ್ವಕಪ್ ಆಡಿ ಸೈ ಎನಿಸಿಕೊಂಡಿದ್ದರು. ಆಗ ನಡೆದ ವಿಶ್ವಕಪ್‌ನಲ್ಲಿ ದಕ್ಷಿಣ ಆಫ್ರಿಕಾ ಸ್ಥಿರ ಪ್ರದರ್ಶನ ನೀಡಿರಲಿಲ್ಲ. 2006ರಲ್ಲಿ ಆಡಿದ್ದ 5 ಪಂದ್ಯಗಳಲ್ಲಿ 3ರಲ್ಲಿ ಸೋತ ದಕ್ಷಿಣ ಆಫ್ರಿಕಾ, ಭಾರತ ಹಾಗೂ ದಕ್ಷಿಣ ಕೊರಿಯಾ ವಿರುದ್ಧ ಡ್ರಾ ಸಾಧಿಸಿತ್ತು. ಈ ವಿಶ್ವಕಪ್‌ನಲ್ಲಿ ದಕ್ಷಿಣ ಆಫ್ರಿಕಾ ಕೊನೆಯ ಸ್ಥಾನ ಪಡೆದಿತ್ತು.
ಕ್ರಿಕೆಟ್ ಆಡಲು ಆರಂಭಿಸಿದ್ದು ಯಾವಾಗ?
ವೇಯ್ನ್ ಮಾಡ್ಸನ್ ಹಾಕಿಯೊಂದಿಗೆ ಕ್ರಿಕೆಟ್ ಆಟವನ್ನು ಸಹ ಇಷ್ಟ ಪಡುತ್ತಿದ್ದರು. ಅಲ್ಲದೆ ಡರ್ಬಿಶೈರ್‌ಗಾಗಿ ಪರ ಕೌಂಟಿ ಕ್ರಿಕೆಟ್ ಸಹ ಆಡಿದ್ದರು. ಅವರ ಅನುಭವ ಅವರನ್ನು ರಾಷ್ಟ್ರೀಯ ತಂಡದ ಬಾಗಿಲಿಗೆ ತಂದು ನಿಲ್ಲಿಸಿತ್ತು. ಆದರೆ ಇಂಗ್ಲೆಂಡ್ ಹಾಗೂ ದಕ್ಷಿಣ ಆಫ್ರಿಕಾ ತಂಡದಲ್ಲಿ ಆಡುವ ಅವಕಾಶ ಸಿಗಲೇ ಇಲ್ಲ.
42 ನೇ ವಯಸ್ಸಿನಲ್ಲಿ ನಾಯಕ
ವೇಯ್ನ್ ಮಾಡ್ಸನ್ 2023ರಲ್ಲಿ ಇಟಲಿಯತ್ತ ಮುಖ ಮಾಡಿದರು. ಅಲ್ಲದೆ ಇಟಲಿ ದೇಶದ ಪರ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದರು. ಇವರು ಈ ವರೆಗೆ ಆಡಿರುವ 7 ಪಂದ್ಯಗಳಲ್ಲಿ 132ರ ಸ್ಟ್ರೈಕ್ ರೇಟ್‌ನಲ್ಲಿ 205 ರನ್ ಸಿಡಿಸಿದ್ದಾರೆ. ಇವರಿಗೆ ಚುಟುಕು ಪಂದ್ಯಗಳನ್ನು ಆಡಿದ ಅಪಾರ ಅನುಭವ ಇದೆ. ಇವರು ಒಟ್ಟು 219 ಟಿ20 ಪಂದ್ಯ ಆಡಿದ್ದು 5516 ರನ್ ಕಲೆ ಹಾಕಿದ್ದಾರೆ. ಇನ್ನು ಟಿ20 ವಿಶ್ವಕಪ್‌ನ ಅಭ್ಯಾಸ ಪಂದ್ಯದಲ್ಲಿ ತನಗಿಂತಲೂ ಹೆಚ್ಚಿನ ಶ್ರೇಯಾಂಕಿತ ಕೆನಡಾ ತಂಡವನ್ನು ಮಣಿಸಿದ ಇಟಲಿ, ಆತ್ಮವಿಶ್ವಾಸದಿಂದ ಟಿ20 ವಿಶ್ವಕಪ್‌ಗೆ ಕಾಲಿಡಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications