ಭಾರತ ಪಂದ್ಯ ಗೆದ್ದರೂ ನಾಯಕ ಧೋನಿ ಕೈ ಖಾಲಿ!
ಅಡಿಲೇಡ್, ಫೆ. 25 : ಭಾರತ ಪಂದ್ಯ ಗೆದ್ದಾಗ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಸ್ಟಂಪ್ ಕಿತ್ತು ಸಂಭ್ರಮಿಸುವುದು ಸಾಮಾನ್ಯ. ಅಲ್ಲದೇ ನೆನಪಿಗೋಸ್ಕರ ಒಂದು ಸ್ಟಂಪ್ ಅಥವಾ ಬೇಲ್ಸ್ ನ್ನು ತಮ್ಮ ಜತೆಗೆ ತೆಗೆದುಕೊಂಡು ಬರುತ್ತಾರೆ. ಆದರೆ ಈ ಬಾರಿಯ ವಿಶ್ವಕಪ್ ನಲ್ಲಿ ಇದಕ್ಕೆ ಬ್ರೇಕ್ ಬಿದ್ದಿದೆ.
ವಿಶ್ವಕಪ್ ನಲ್ಲಿ ಅತ್ಯಾಧುನಿಕ ತಂತ್ರಜ್ಞಾನದ ಎಲ್‍ಇಡಿ ಸ್ಟಂಪ್ ಗಳನ್ನು ಬಳಸಲಾಗಿದ್ದು, ಇದರ ಬೆಲೆ ಬರೋಬ್ಬರಿ 40 ಸಾವಿರ ಅಮೆರಿಕನ್ ಡಾಲರ್! (24 ಲಕ್ಷ ರೂ.) ಅಲ್ಲದೆ ಎರಡು ಬೇಲ್ಸ್ ಹಾಗೂ ಅಳವಡಿಸಿರುವ ಐ-ಫೋನ್ ಬೆಲೆ 50 ಸಾವಿರ ರೂ. ಮೀರುತ್ತದೆ.

ಐಸಿಸಿಯಿಂದ ಅಧಿಕೃತವಾಗಿ ಅನುಮತಿ ಸಿಗದ ಹೊರತು ಧೋನಿ ಈ ಸ್ಟಂಪ್ ಪಡೆದುಕೊಳ್ಳಲು ಸಾಧ್ಯವಿಲ್ಲ ಅಥವಾ ಈ ಬಾರಿ ಸ್ಟಂಪ್ ಅವರ ಕೈ ಗೆಟಕುವುದಿಲ್ಲ ಎಂದೇ ಹೇಳಬಹುದು.[ಧೋನಿ ಸ್ಟಂಪ್ ಸಂಗ್ರಹದ ಗುಟ್ಟು ರಟ್ಟು]
ಪಾಕಿಸ್ತಾನ ವಿರುದ್ಧ ಪಂದ್ಯ ಮುಕ್ತಾಯದ ನಂತರ ಧೋನಿ ಒಂದು ಬೇಲ್ಸ್ ಅನ್ನು ತೆಗೆದುಕೊಂಡರು. ಆದರೆ ನಂತರ ಲೆಗ್ ಅಂಪೈರ್ ಆಗಿದ್ದ ಇಂಗ್ಲೆಂಡ್ ನ ಇಯಾನ್ ಗೌಲ್ಡ್, ಧೋನಿ ಬಳಿ ಬಂದು ನಗುತ್ತಾ, ಅನುಮತಿ ಇಲ್ಲದೆ ಅದನ್ನು ತೆಗೆದುಕೊಳ್ಳುವಂತಿಲ್ಲ ಎಂದು ವಿವರಿಸಿದ್ದರು. ದಕ್ಷಿಣ ಆಫ್ರಿಕಾ ವಿರುದ್ಧ ಗೆಲುವಿನ ನಂತರ ಧೋನಿ ಬೇಲ್ಸ್ ಅಥವಾ ಸ್ಟಂಪ್ ಪಡೆಯುವ ಸಾಹಸಕ್ಕೆ ಕೈ ಹಾಕಲಿಲ್ಲ.
ಮೊದಲು ಬಿಗ್ ಬಾಷ್ ಪಂದ್ಯಾವಳಿಯಲ್ಲಿ ಈ ಎಲ್ ಇಡಿ ಸ್ಟಂಪ್ ಗಳನ್ನು ಬಳಸಲಾಯಿತು. ನಂತರ ಬಾಂಗ್ಲಾದಲ್ಲಿ ನಡೆದ ಟಿ-20 ವಿಶ್ವಕಪ್ ಗೂ ಇದನ್ನು ಬಳಸಿಕೊಳ್ಳಲಾಗಿತ್ತು. ಆದರೆ ಏಕದಿನ ವಿಶ್ವಕಪ್ ನಲ್ಲಿ ಅತ್ಯಾಧುನಿಕ ತಂತ್ರಜ್ಞಾನದ ವಿಕೆಟ್ ಗಳನ್ನು ಬಳಸಲಾಗಿದೆ.[ಕೊನೆ ವಿಶ್ವಕಪ್ ಆಡಲಿರುವ ಟಾಪ್ 10 ಸ್ಟಾರ್ ಕ್ರಿಕೆಟರ್ಸ್]
ಈ ಬಗೆಯ ಸ್ಟಂಪ್ ಗಳ ಸಂಶೋಧನೆಗೆ ಮೂರು ವರ್ಷ ಕಾಲ ಹಿಡಿದಿದೆ. ದುಬಾರಿ ಬೆಲೆಬಾಳುವ ಇವನ್ನು ಆಟಗಾರರ ವಿಜಯೋತ್ಸವಕ್ಕೆ ನೀಡಲು ಸಾಧ್ಯವಿಲ್ಲ ಎಂದು ಸ್ಟಂಪ್ ಸಂಶೋಧಕ ಎಕರ್ ಮನ್ ಹೇಳಿದ್ದಾರೆ.
ಎಲ್ ಇಡಿ ಸ್ಟಂಪ್ ವಿಶೇಷತೆಯೇನು?
ರನೌಟ್ ಮತ್ತು ಸ್ಟಂಪಿಂಗ್ ನಂಥ ಸಂದರ್ಭದಲ್ಲಿ ಎಲ್ ಇಡಿ ಸ್ಟಂಪ್ ಗಳ ಪ್ರಯೋಜನ ಅಗಾಧವಾಗಿದೆ. ರೀಪ್ಲೆ ಆಧರಿಸಿ ನೋಡಿದರೆ ಬ್ಯಾಟ್ಸಮನ್ ಗೆರೆಯಿಂದ ಹೊರಗಿದ್ದಾರೋ? ಅಥವಾ ಒಳಗಿದ್ದಾರೋ? ಯಾವ ಸಂದರ್ಭದಲ್ಲಿ ಚೆಂಡನ್ನು ವಿಕೆಟ್ ಗೆ ತಾಗಿಸಲಾಗಿದೆ? ಎಂಬುದು ಸ್ಪಷ್ಟವಾಗಿ ತಿಳಿಯುತ್ತದೆ. ಚೆಂಡು ತಾಗಿದ ತಕ್ಷಣ ಸ್ಟಂಪ್ ಮತ್ತು ಬೇಲ್ಸ್ ಗಳು ಮಿನುಗುವುದೇ ಈ ತಂತ್ರಜ್ಞಾನದ ಹೈಲೈಟ್ಸ್.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications