ವಿಶ್ವಕಪ್ ಅರ್ಹತಾ ಸುತ್ತು: ಫೈನಲ್ ಪಂದ್ಯದಲ್ಲಿ ನೆದರ್ಲೆಂಡ್ಸ್ ವಿರುದ್ಧ ಭರ್ಜರಿಯಾಗಿ ಗೆದ್ದ ಶ್ರೀಲಂಕಾ
ವಿಶ್ವಕಪ್ ಅರ್ಹತಾ ಸುತ್ತಿನ ಫೈನಲ್ ಪಂದ್ಯದಲ್ಲಿ ಶ್ರೀಲಂಕಾ ತಂಡ ಗೆಲುವು ಸಾಧಿಸಿದ್ದು ಟ್ರೋಫಿ ಮುಡಿಗೇರಿಸಿಕೊಂಡಿದೆ. ಈ ಮೂಲಕ ಭಾರತದಲ್ಲಿ ನಡೆಯುವ ವಿಶ್ವಕಪ್ ಪ್ರಮುಖ ಸುತ್ತಿಗೆ ಅರ್ಹತಾ ಸಿತ್ತಿನಿಂದ ಅಗ್ರಸ್ಥಾನಿಯಾಗಿ ಪ್ರವೇಶ ಪಡೆದುಕೊಂಡಿದೆ. ನೆದರ್ಲೆಂಡ್ಸ್ ತಂಡ ಎರಡನೇ ಸ್ಥಾನವನ್ನು ಪಡೆದುಕೊಂಡಿದೆ. ಹರಾರೆಯಲ್ಲಿ ನಡೆದ ಈ ಫೈನಲ್ ಸೆಣೆಸಾಟದಲ್ಲಿ ಶ್ರೀಲಂಕಾ ಸಾಧಾರಣ ಬ್ಯಾಟಿಂಗ್ ಪ್ರದರ್ಶಿಸಿದರೂ ಬೌಲಿಂಗ್‌ನಲ್ಲಿ ಅಮೋಘ ಪ್ರದರ್ಶನ ನೀಡುವ ಮೂಲಕ ಸುಲಭ ಗೆಲುವು ಸಾಧಿಸಿದೆ.
ಈ ಪಂದ್ಯದಲ್ಲಿ ಟಾಸ್ ಸೋತು ಮೊದಲಿಗೆ ಬ್ಯಾಟಿಂಗ್ ನಡೆಸಿದ ಶ್ರೀಲಂಕಾ ತಂಡ ಸಹನ್ ಅರಚ್ಚಿಗೆ ಅರ್ಧ ಶತಕ, ಕುಸಾಲ್ ಮೆಂಡಿಸ್ ಮತ್ತು ಅಸಲಂಕಾ ಅವರ ಉತ್ತಮ ಕೊಡುಗೆಯ ಕಾರಣದಿಂದಾಗಿ 47.5 ಓವರ್‌ಗಳಲ್ಲಿ 233 ರನ್‌ಗಳನ್ನು ಗಳಿಸಿ ಆಲೌಟ್ ಆಯಿತು. ನೆದರ್ಲೆಂಡ್ಸ್ ತಂಡ ಸಂಘಟಿತ ಪ್ರದರ್ಶನ ನೀಡಿದ ಕಾರಣದಿಂದಾಗಿ ಶ್ರೀಲಂಕಾ ದೊಡ್ಡ ಮೊತ್ತ ಗಳಿಸಲು ಸಾಧ್ಯವಾಗದಂತೆ ತಡೆಯಲು ಯಶಸ್ವಿಯಾಯಿತು.

ಈ ಮೊತ್ತವನ್ನು ಬೆನ್ನಟ್ಟಲು ಆರಂಭಿಸಿದ ನೆದರ್ಲೆಂಡ್ಸ್ ತಂಡ ಯಾವ ಹಂತದಲ್ಲಿಯೂ ಶ್ರೀಲಂಕಾಗೆ ಸವಾಲಿಡ್ಡಲು ಸಾಧ್ಯವಾಗಲೇ ಇಲ್ಲ. ಶ್ರೀಲಂಕಾ ಬೌಲರ್‌ಗಳ ದಾಳಿಗೆ ಕಂಗೆಟ್ಟ ನೆದರ್ಲೆಂಡ್ಸ್ ದಾಂಡಿಗರು ಫೆವಿಲಿಯನ್ ಪೆರೆಡ್ ನಡೆಸಲು ಆರಂಭಿಸಿದರು. ಮ್ಯಾಕ್ಸ್ ಒಡೌಡ್ ಮಾತ್ರವೇ 33 ರನ್‌ಗಳಿಸಿದ್ದು ಉಳಿದ ಎಲ್ಲಾ ಆಟಗಾರರು ಕ್ರೀಸ್‌ನಲ್ಲಿ ನೆಲೆಯೂರಲು ವಿಫಲವಾದರು. ಅಂತಿಮವಾಗಿ ನೆದರ್ಲೆಂಡ್ಸ್ ತಂಡ 105 ರನ್‌ಗಳಿಗೆ ತನ್ನ ಎಲ್ಲಾ ವಿಕೆಟ್ ಕಳೆದುಕೊಂಡಿತು.
ಶ್ರೀಲಂಕಾ ಆಡುವ ಬಳಗ: ಪಾತುಮ್ ನಿಸ್ಸಾಂಕ, ಸದೀರ ಸಮರವಿಕ್ರಮ, ಕುಸಲ್ ಮೆಂಡಿಸ್ (ವಾಕ್), ಚರಿತ್ ಅಸಲಂಕ, ಧನಂಜಯ ಡಿ ಸಿಲ್ವ, ಸಹನ್ ಅರಚ್ಚಿಗೆ, ದಸುನ್ ಶನಕ (ಸಿ), ವನಿಂದು ಹಸರಂಗ,
ಮಹೇಶ್ ತೀಕ್ಷಣ, ಮಥೀಶ ಪತಿರಣ, ದಿಲ್ಶನ್ ಮಧುಶಂಕ
ಬೆಂಚ್: ದಿಮುತ್ ಕರುಣಾರತ್ನೆ, ದುಶನ್ ಹೇಮಂತ, ದುಷ್ಮಂತ ಚಮೀರ, ಚಾಮಿಕಾ ಕರುಣಾರತ್ನೆ, ಕಸುನ್ ರಜಿತ, ಲಹಿರು ಕುಮಾರ
ನೆದರ್ಲೆಂಡ್ಸ್ ಆಡುವ ಬಳಗ: ವಿಕ್ರಮಜಿತ್ ಸಿಂಗ್, ಮ್ಯಾಕ್ಸ್ ಓಡೌಡ್, ನೋಹ್ ಕ್ರೋಸ್, ವೆಸ್ಲಿ ಬ್ಯಾರೆಸಿ, ತೇಜ ನಿಡಮನೂರು, ಸ್ಕಾಟ್ ಎಡ್ವರ್ಡ್ಸ್ (ನಾಯಕ & ವಿಕೆಟ್ ಕೀಪರ್), ಸಾಕಿಬ್ ಜುಲ್ಫಿಕರ್, ಲೋಗನ್ ವ್ಯಾನ್ ಬೀಕ್, ರಯಾನ್ ಕ್ಲೈನ್, ಆರ್ಯನ್ ದತ್, ಕ್ಲೇಟನ್ ಫ್ಲಾಯ್ಡ್
ಬೆಂಚ್: ವಿವಿಯನ್ ಕಿಂಗ್ಮಾ, ಶರೀಜ್ ಅಹ್ಮದ್, ಮೈಕೆಲ್ ಲೆವಿಟ್, ಬಾಸ್ ಡಿ ಲೀಡೆ
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications