WC Qualifiers, Super six: ನೆದರ್ಲೆಂಡ್ಸ್ vs ಒಮಾನ್; ಟಾಸ್ ವರದಿ, ಆಡುವ ಬಳಗ, Live ಸ್ಕೋರ್
ವಿಶ್ವಕಪ್ ಅರ್ಹತಾ ಸುತ್ತಿನ ಸೂಪರ್ ಸಿಕ್ಸ್ ಹಂತದಲ್ಲಿ ಇಂದು ಮತ್ತೊಂದು ಕುತೂಹಲಕಾರಿ ಸೆಣೆಸಾಟ ನಡೆಯುತ್ತಿದೆ. ನೆದರ್ಲೆಂಡ್ಸ್ ಹಾಗೂ ಒಮಾನ್ ತಂಡಗಳು ಇಂದು ಮುಖಾಮುಖಿಯಾಗಿದ್ದು ಟಾಸ್ ಗೆದ್ದ ಒಮಾನ್ ತಂಡ ಮೊದಲಿಗೆ ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ. ಹೀಗಾಗಿ ನೆದರ್ಲೆಂಡ್ಸ್ ತಂಡ ಅರಂಭದಲ್ಲಿ ಬ್ಯಾಟಿಂಗ್ ನಡೆಸುವ ಸವಾಲು ಪಡೆದುಕೊಂಡಿದೆ.
ಈ ಟೂರ್ನಿಯಲ್ಲಿ ನೆದರ್ಲೆಂಡ್ಸ್ ತಂಡ ಅದ್ಭುತ ಪ್ರದರ್ಶನ ನೀಡುತ್ತಿದ್ದು ಅರ್ಹತಾ ಸುತ್ತಿನ ಫೈನಲ್‌ಗೇರುವ ಅವಕಾಶವನ್ನು ಉಳಿಸಿಕೊಂಡಿದೆ. ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯದಲ್ಲಿ ನೆದರ್ಲೆಂಡ್ಸ್ ತಂಡ ಅಮೋಘ ಗೆಲುವು ಸಾಧಿಸಿದ ಕಾರಣ ವಿಶ್ವಕಪ್ ಪ್ರಮುಖ ಸುತ್ತಿಗೇರುವ ಅವಕಾಶ ನೆದರ್ಲೆಂಡ್ಸ್ ಮುಂದೆ ಇನ್ನು ಕೂಡ ಇದೆ. ಇನ್ನು ಇದಕ್ಕೂ ಹಿಂದಿನ ಪಂದ್ಯದಲ್ಲಿ ನೆದರ್ಲಂಡ್ಸ್ ಶ್ರೀಲಂಕಾ ತಂಡಕ್ಕೂ ಸೋಲಿನ ಭೀತಿಯನ್ನುಂಡು ಮಾಡುವಲ್ಲಿ ಯಶಸ್ವಿಯಾಗಿತ್ತು. ಆದರೆ ಅಂತಿಮವಾಗಿ ಗೆಲುವು ಅಸಾಧ್ಯವಾದರೂ ಇಂದಿನ ಈ ಪಂದ್ಯಕ್ಕೆ ಆತ್ಮವಿಶ್ವಾಸವನ್ನು ಹೆಚ್ಚಿಸಿರುವುದರಲ್ಲಿ ಅನುಮಾನವಿಲ್ಲ.

Live ಸ್ಕೋರ್ ಹೀಗಿದೆ
ಇನ್ನು ಇಂದು ನಡೆಯುತ್ತಿರುವ ಈ ಪಂದ್ಯದಲ್ಲಿ ಒಮಾನ್ ತಂಡ ಎರಡು ಬದಲಾವಣೆಯೊಂದಿಗೆ ಕಣಕ್ಕಿಳಿದಿದೆ. ಸೂರಜ್ ಕುಮಾರ್ ಹಾಗೂ ಸಂದೀಪ್ ಗೌಡ್ ಒಮಾಣ್ ಆಡುವ ಬಳಗದಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನು ಒಮಾನ್ ನಾಯಕ ಸೀಶನ್ ಅನಿವಾರ್ಯವಾಗಿ ಹೊರಗುಳಿದಿದ್ದು ಅಕಿಬ್ ಇಲ್ಯಾಸ್ ತಂಡವನ್ನು ಮುನ್ನಡೆಸುತ್ತಿದ್ದಾರೆ. ಇನ್ನು ನೆದರ್ಲೆಂಡ್ಸ್ ತಂಡ ಒಂದು ಬದಲಾವಣೆ ಮಾಡಿಕೊಂಡಿದ್ದು ಶರೀಜ್ ಅಹ್ಮದ್ ಬದಲಿಗೆ ಕ್ಲೇಯ್ಟನ್ ಫ್ಲಾಯ್ಡ್ ಆಡುವ ಬಳಗದಲ್ಲಿ ಕಾಣಿಸಿಕೊಂಡಿದ್ದಾರೆ.
ನೆದರ್ಲೆಂಡ್ಸ್ ಆಡುವ ಬಳಗ: ವಿಕ್ರಮಜಿತ್ ಸಿಂಗ್, ಮ್ಯಾಕ್ಸ್ ಓಡೌಡ್, ವೆಸ್ಲಿ ಬ್ಯಾರೆಸಿ, ಬಾಸ್ ಡಿ ಲೀಡೆ, ತೇಜ ನಿಡಮನೂರು, ಸ್ಕಾಟ್ ಎಡ್ವರ್ಡ್ಸ್ (ನಾಯಕ & ವಿಕೆಟ್ ಕೀಪರ್), ಸಾಕಿಬ್ ಜುಲ್ಫಿಕರ್, ಲೋಗನ್ ವ್ಯಾನ್ ಬೀಕ್, ರಯಾನ್ ಕ್ಲೈನ್, ಆರ್ಯನ್ ದತ್, ಕ್ಲೇಟನ್ ಫ್ಲಾಯ್ಡ್
ಬೆಂಚ್: ಶರೀಜ್ ಅಹ್ಮದ್, ವಿವಿಯನ್ ಕಿಂಗ್ಮಾ, ಮೈಕೆಲ್ ಲೆವಿಟ್, ನೋಹ್ ಕ್ರೋಸ್
ಒಮಾನ್ ಆಡುವ ಬಳಗ: ಕಶ್ಯಪ್ ಪ್ರಜಾಪತಿ, ಜತೀಂದರ್ ಸಿಂಗ್, ಅಕಿಬ್ ಇಲ್ಯಾಸ್ (ನಾಯಕ), ಶೋಯೆಬ್ ಖಾನ್, ಸೂರಜ್ ಕುಮಾರ್ (ವಿಕೆಟ್ ಕೀಪರ್), ಅಯಾನ್ ಖಾನ್, ಮೊಹಮ್ಮದ್ ನದೀಮ್, ಸಂದೀಪ್ ಗೌಡ್, ಫಯಾಜ್ ಬಟ್, ಕಲೀಮುಲ್ಲಾ, ಬಿಲಾಲ್ ಖಾನ್
ಬೆಂಚ್: ಅದೀಲ್ ಶಫೀಕ್, ಜೇ ಒಡೆಡ್ರಾ, ರಫಿಯುಲ್ಲಾ, ಸಮಯ್ ಶ್ರೀವಾಸ್ತವ, ಜೀಶನ್ ಮಕ್ಸೂದ್, ನಸೀಮ್ ಖುಷಿ
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications